ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್’ಗಾಂಧಿಗೆ ಉತ್ತಮ ಪ್ರಧಾನಿಯಾಗುವ ಎಲ್ಲ ಗುಣಗಳು ಇವೆ ಎಂದು ಆರ್’ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೆ ನೀಡಿದ್ದು, ಇದು ತೀವ್ರ ಹಾಸ್ಯಕ್ಕೆ ಗುರಿಯಾಗಿದೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಯಾದವ್, ರಾಹುಲ್ ಗಾಂಧಿಗೆ ಉತ್ತಮ ಪ್ರಧಾನಿಯಾಗುವ ಎಲ್ಲ ಗುಣಗಳಿವೆ. ಆದರೆ ಬಿಜೆಪಿಯು ರಾಹುಲ್ ಗಾಂಧಿ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ನೂರಾರು ಕೋಟಿಗಳನ್ನು ಖರ್ಚು ಮಾಡಿದೆ ಎಂದಿದ್ದಾರೆ.
ರಾಹುಲ್ ವಿರುದ್ಧ ಇಂತಹ ದೀರ್ಘಕಾಲದ ನಕಾರಾತ್ಮಕ ಅಭಿಯಾನದ ನಂತರವು ಕೂಡ ರಾಹುಲ್ ಗಾಂಧಿ ಜನರ ಹೃದಯವನ್ನು ಗೆದ್ದಿದ್ದಾರೆ. ರಾಜಸ್ಥಾನ, ಛತ್ತೀಸ್’ಘಢ ಮತ್ತು ಮಧ್ಯಪ್ರದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸಿದೆ.
ಪ್ರಧಾನಿಯಾಗಲು ಅವರಿಗೆ ಎಲ್ಲಾ ಗುಣಗಳಿವೆ, ಅವರು ಭಾರತದ ಅತ್ಯಂತ ಹಳೆಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಮತ್ತು ಕಳೆದ 15 ವರ್ಷಗಳಿಂದ ಸಂಸತ್ತಿನಲ್ಲಿದ್ದಾರೆ. ಅವರ ಪಕ್ಷದಲ್ಲಿ ಐದು ಮುಖ್ಯಮಂತ್ರಿಗಳಿದ್ದಾರೆ ಅವರನ್ನು ಮುನ್ನಡೆಸುತ್ತಿದ್ದಾರೆಂಬುದನ್ನು ಮರೆಯಬೇಡಿ ಆದ್ದರಿಂದ ಅವರ ನಾಯಕತ್ವ ಮತ್ತು ಗುಣಗಳ ಕುರಿತು ಯಾವುದೇ ಪ್ರಶ್ನೆ ಕೇಳಲು ಸಾಧ್ಯವಿಲ್ಲ ಎಂದರು.
ಸಾವಿರಾರು ಕೋಟಿ ರೂಪಾಯಿ ಹಗರಣದಲ್ಲಿ ಜೈಲು ಪಾಲಾಗಿರುವ ಲಾಲೂ ಪ್ರಸಾದ್ ಯಾದವ್ ಪುತ್ರನಾಗಿ, ಸ್ವತಃ ತಮ್ಮ ಮೇಲೆಯೇ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ತೇಜಸ್ವಿ ಯಾದವ್, ರಾಹುಲ್ ಗಾಂಧಿಗೆ ಸರ್ಟಿಫಿಕೇಟ್ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಕ್ಕೆ ಗುರಿಯಾಗಿದೆ.
Discussion about this post