No Result
View All Result
Silent Skin Damage in Winter: Children at Higher Risk Than Adults, Doctors Warn
English Articles

Silent Skin Damage in Winter: Children at Higher Risk Than Adults, Doctors Warn

by ಕಲ್ಪ ನ್ಯೂಸ್
January 23, 2026
0

Kalpa Media House  |  Bengaluru, Whitefield | Although winter is considered a comfortable season, doctors warn that cold weather can...

Read moreDetails
Sleep Deprivation and Your Brain: Why Poor Sleep Is a Neurological Risk

Sleep Deprivation and Your Brain: Why Poor Sleep Is a Neurological Risk

January 21, 2026
When faith awakens, legends rise! Watch Kantara: A Legend – Chapter 1 on Zee Kannada on Jan 24th

When faith awakens, legends rise! Watch Kantara: A Legend – Chapter 1 on Zee Kannada on Jan 24th

January 21, 2026
ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

RJ Nayana: The Golden Voice of Coastal Karnataka and a Beacon of Inspiration!

January 20, 2026
Cervical Cancer | Early Detection and Prevention Can Save Lives

Cervical Cancer | Early Detection and Prevention Can Save Lives

January 16, 2026
  • Advertise With Us
  • Grievances
  • About Us
  • Contact Us
Monday, January 26, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಾಮನ ತ್ರಿವಿಕ್ರಮನಾಗಿ ಬೆಳೆದನೆಂಬ ಸಂಕೇತದ ತಿರುಳು ಇದು

ವಾಮನ ದ್ವಾದಶಿ -ಹೀಗೊಂದು ಚಿಂತನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 10, 2019
in Special Articles, Small Bytes
0
ವಾಮನ ತ್ರಿವಿಕ್ರಮನಾಗಿ ಬೆಳೆದನೆಂಬ ಸಂಕೇತದ ತಿರುಳು ಇದು
Share on FacebookShare on TwitterShare on WhatsApp

ಬಲಿ ಚಕ್ರವರ್ತಿ ಪ್ರಹ್ಲಾದನ ವಂಶಸ್ಥ. ಇಲ್ಲಿ, ವಾಮನನು ಭೂಮನ್ಯಾಕಾಶಗಳಿಗೂ ವ್ಯಾಪಿಸಿ, ಒಂದು ಹೆಜ್ಜೆಯನ್ನು ಭೂಮಿಗೂ, ಇನ್ನೊಂದು ಹೆಜ್ಜೆಯನ್ನು ಆಕಾಶಕ್ಕೂ ಹಾಗೂ ಮತ್ತೊಂದು ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟದ್ದು ಎಲ್ಲರಿಗೂ ತಿಳಿದ ವಿಷಯ. ಅಂತರಾರ್ಥವೆಂದರೆ, ನಾವೆಲ್ಲರೂ ಈ ಜಗತ್ತಿಗೆ ವಾಮನರಾಗಿಯೇ ಬಂದವರು. ಜ್ಞಾನದ ಮೂಲಕ, ಸಾಧನೆಯ ಮೂಲಕ, ತಪಸ್ಸಿನ ಮೂಲಕ, ಸರ್ವವ್ಯಾಪಕತ್ವದಿಂದ ತ್ರಿವಿಕ್ರಮರಾಗಿ ಬೆಳೆಯಬೇಕು.

ತ್ರಿಕರಣ ಶುದ್ಧರಾಗುವುದೇ ಮೂರು ಹೆಜ್ಜೆಗಳು. ಅಹಂಕಾರವೆಂಬ ಸಂಕುಚಿತ ಭಾವವೇ ವಾಮನತ್ವ. ವಾಮನತ್ವದ ಬಲುಯಾದೊಡನೆಯೇ ವ್ಯಕ್ತಿಯು ತ್ರಿವಿಕ್ರಮನಾಗಿ ಬೆಳೆಯುತ್ತಾನೆಂಬುದು ಸಾರಾಂಶ. ಸಮಸ್ತ ಜಗತ್ತೂ ಮೂರು ವಕಾರಗಳಿಂದ ಸಂಪನ್ನವಾಗಿದೆ. ವ್ಯಕ್ತಿ, ವಸ್ತು ಹಾಗೂ ವಿಷಯಗಳು. ಇವು ಮೂರು ವಕಾರಗಳು. ಅಷ್ಟೇ ಅಲ್ಲ, ಮೂರು ವಿಕಾರಗಳು ಕೂಡಾ! ಈ ಮೂರು ವಿಕಾರಗಳನ್ನು ಕ್ರಮಬದ್ಧವಾಗಿ ಕ್ರಮಿಸಿದಾಗ ಮಾನವನು ತನ್ನಲ್ಲಿರಬಹುದಾದ ದಾನವತ್ವವನ್ನು ಕಳೆದುಕೊಂಡು ದೈವತ್ವವನ್ನು ಹೊಂದುತ್ತಾನೆಂಬುದು ತತ್ತ್ವಾರ್ಥ. ಮಾನವ ವರ್ಗದ ಆರಂಭಿಕ ದಿನಗಳಲ್ಲಿ ಕಾಣಿಸಿಕೊಂಡವರು ಕುಬ್ಜರು ಎಂಬುದನ್ನು ಇದರ ಜೀವನ ಚಕ್ರದ ಸಂಕೇತದಲ್ಲಿ ಅರ್ಥಮಾಡಿಕೊಳ್ಳಬಹುದು. ಜೊತೆಗೆ ಈ ಕತೆ ಅಹಂಕಾರವನ್ನು, ವಾಮನನು ತುಳಿಯುವ ಕ್ರಿಯೆ ಹೇಳುವ ಮೂಲಕ ಇದಕ್ಕೆ ಅಹಂಕಾರ ಮರ್ಧನನದ ಸಂಕೇತಾರ್ಥವನ್ನು ನೀಡಿ ಕಾವ್ಯಾತ್ಮವಾಗಿಯೂ ಸೊಗಸಾಗಿಯೂ ರೂಪುಗೊಂಡಿದೆ.

ವಾಮನಾವತಾರ-ತಾತ್ತ್ವಿಕತೆ
ಭಾಗವತ ಪುರಾಣದಲ್ಲಿ ಒಂದು ಕಥೆ ಬರುತ್ತದೆ. ಈ ಕಥೆ ಮಹಾವಿಷ್ಣುವಿನ ಐದನೇ ಅವತಾರದ ಕುರಿತಾದದ್ದು. ದೈತ್ಯ ರಾಜ ಬಲಿ ಚಕ್ರವರ್ತಿ ಇಂದ್ರಲೋಕವೂ ಸೇರಿದಂತೆ ಭೂಮ್ಯಾಕಾಶಗಳನ್ನು ಗೆದ್ದು ಕೊಂಡಿರುತ್ತಾನೆ. ಅದನ್ನು ಉಪಾಯದಿಂದ ಮರಳಿ ಗಳಿಸಿಕೊಳ್ಳಲು ವಿಷ್ಣುವು ವಾಮನನ ಅವತಾರ ತಾಳಿ ಬರುತ್ತಾನೆ. ಅದಕ್ಕಾಗಿಯೇ ಕಶ್ಯಪ ಪ್ರಜಾಪತಿ ಮತ್ತು ಆದಿತಿಯರ ಮಗನಾಗಿ ಹುಟ್ಟುತ್ತಾನೆ. ಕುಳ್ಳ ಗಾತ್ರದ-ಮುದ್ದು ಮುದ್ದಾದ ಬ್ರಾಹ್ಮಣ ವಟು ವಾಮನ, ಮಹಾಯಾಗ ನಡಸುತ್ತಿದ್ದ ಬಲಿ ಚಕ್ರವರ್ತಿಯ ಬಳಿ ಸಾರುತ್ತಾನೆ. ದಾನವಾಗಿ ಮೂರು ಹೆಜ್ಜೆ ಭೂಮಿಯನ್ನು ಕೇಳುತ್ತಾನೆ. ಅಸುರ ಗುರು ಶುಕ್ರಾಚಾರ್ಯರಿಗೆ ಸಂಚಿನ ವಾಸನೆ ಬಡಿಯುತ್ತದೆ. ಬಲಿಯನ್ನು ತಡೆಯುತ್ತಾರೆ. ಬಲಿ ಅವರ ಮಾತು ಕೇಳದೆ ಮೂರು ಹೆಜ್ಜೆ ದಾನ ನೀಡುತ್ತಾನೆ. ಅದನ್ನು ಪಡೆಯುತ್ತಲೇ ತ್ರಿವಿಕ್ರಮನಾಗಿ ಬೆಳೆಯುವ ವಾಮನ, ಎರಡು ಹೆಜ್ಜೆಗಳಿಂದ ಭೂಮ್ಯಾಕಾಶಗಳನ್ನು ಅಳೆದು, ಮೂರನೆಯದನ್ನು ಎಲ್ಲಿಡಲೆಂದು ಕೇಳುತ್ತಾನೆ. ಕೊಟ್ಟ ಮಾತು ತಪ್ಪದ ಬಲಿ ಚಕ್ರವರ್ತಿ, ತನ್ನ ತಲೆಯ ಮೇಲಿಡೆಂದು ಕೋರುತ್ತಾನೆ. ಅದರಂತೆ ಮೂರನೆ ಹೆಜ್ಜೆಯನ್ನು ಬಲಿಯ ತಲೆ ಮೇಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುತ್ತಾನೆ ತ್ರಿವಿಕ್ರಮ. ಆನಂತರ ದೈತ್ಯ ಚಕ್ರವರ್ತಿಯ ಸಜ್ಜನಿಕೆ, ಜನಪ್ರಿಯತೆಗಳಿಂದ ಸಂಪ್ರೀತನಾಗಿ ವರಗಳನ್ನು ನೀಡುವುದು ಬೇರೆ ವಿಷಯ. ಇದು ಭಾಗವತದಲ್ಲಿ ಬರುವ ವಾಮನವತಾರದ ಕತೆಯ ಸಾರಾಂಶ.

ವಾಮನ ಅಂದರೇನೆ ಕುಳ್ಳು ಎಂದು. ಗಾತ್ರದಲ್ಲಿ, ಆಕಾರದಲ್ಲಿ ಕುಬ್ಜ. ಈ ರೂಪ ಯಾಕೆ? ಎದುರಿಗಿನ ವ್ಯಕ್ತಿಯ ವಿಶ್ವಾಸಗಳಿಸಲು. ಆತನ ಅಹಂಕಾರಕ್ಕೆ ಪುಷ್ಟಿ ಒದಗಿಸಲು ನಾವಾದರೂ ನೋಟಕ್ಕೆ ದುರ್ಬಲನಾಗಿ ಕಾಣುವ, ದೀನನಾಗಿ ಕಾಣುವ ವ್ಯಕ್ತಿಯನ್ನು ನಿರುಪದ್ರವಿ ಎಂದುಕೊಳ್ಳುತ್ತೀವಲ್ಲವೆ? ಈ ಅನ್ನಿಸಿಕೆ ಹುಟ್ಟುವುದು, ನಾವು ದೇಹದೊಂದಿಗೆ ಗುರುತಿಸಿಕೊಂಡಿರುವಾಗ ಮಾತ್ರ. ಈ ಆಕಾರ ಏನು ಮಾಡಿತೆಂಬ ಅಹಂಕಾರ ನಮ್ಮೊಳಗೆ ಜಾಗೃತವಾಗುತ್ತದೆ, ನಾವು ಎಚ್ಚರ ತಪ್ಪುತ್ತೇವೆ.


ಬಲಿ ಚಕ್ರವರ್ತಿಗೆ ಆಗಿದ್ದೂ ಹಾಗೆಯೇ. ಆತ ಮೊದಲೇ ಮೂರು ಲೋಕ ಗೆದ್ದವನು. ಆ ಸಂಭ್ರಮಾಚರಣೆಗೆ ಮಹಾಯಾಗವನ್ನು ಮಾಡುತ್ತಿದ್ದವನು. ಈ ಸಂಧರ್ಭದಲ್ಲಿ ಛತ್ರಿ ಹಿಡಿದು ಬಂದ ಕುಳ್ಳ ಬ್ರಾಹ್ಮಣ ವಟು ಮೂರು ಹೆಜ್ಜೆ ಭೂಮಿಯನ್ನು ದಾನ ಕೇಳಿದ್ದು ಆತನಿಗೆ ತಮಾಷೆಯಾಗಿ ಕಂಡಿರಬೇಕು. ಗುರುಶುಕ್ರಾಚಾರ್ಯರು ಆತನನ್ನು ತಡೆಯುತ್ತಾರೆ. ಅವರು ಜ್ಞಾನಿಗಳು. ಹೀಗೆ ಯಾಗದ ವೇಳೆ ಯಾರೋ ಒಬ್ಬ ಬಂದು ಮೂರು ಹೆಜ್ಜೆ ಕೇಳುತ್ತಾನೆ ಎಂದರೆ ಅದು ಸುಮ್ಮನೆ ಇರಲಿಕ್ಕಿಲ್ಲ ಎಂಬುದನ್ನು ಅವರು ಊಹಿಸಬಲ್ಲರು. ಶುಕ್ರಾಚಾರ್ಯರು ದೇಹದ ಹೊರತಾಗಿ ಯೋಚಿಸುತ್ತಿದ್ದಾರೆ. ಅವರು ವಾಮನನ ಮನಸ್ಸನ್ನು ಓದಲು ಯತ್ನಿಸುತ್ತಿದ್ದಾರೆ. ಸ್ಥೂಲದ ಹಿಂದಡಗಿದ ಸೂಕ್ಷ್ಮದ ಸಾಮಥ್ರ್ಯವನ್ನು ಗ್ರಹಿಸುತ್ತಿದ್ದಾರೆ. ಆದ್ದರಿಂದಲೇ ಶುಕ್ರಾಚಾರ್ಯರು ಹೇಳುತ್ತಾರೆ, ‘ತಡಿ, ಚಕ್ರವರ್ತಿ, ಕುಳ್ಳನಾದರೇನು? ಪ್ರಳಯಾಂತಕನಿವನು!’ ಎಂದು.

ಆದರೆ ಬಲಿ ಧರ್ಮಭೀರು. ಕೊಡುಗೈ ದಾನಿ ಎಂಬ ಹೆಸರು ಪಡೆದವನು. ಹೀಗಿರುವಾಗ ಮಹಾಯಾಗದ ಸಮಯದಲ್ಲಿ ಕೇಳಿದ್ದನ್ನು ಇಲ್ಲ ಎಂದು ಹೇಳಲು ಸಾಧ್ಯವೇ? ಕೆಲವರು ಹೀಗೆ ಹೆಸರನ್ನು ಉಳಿಸಿಕೊಳ್ಳಲು ಹೋಗಿ ಪೆದ್ದುತನದ ಕೆಲಸವನ್ನು ಮಾಡುತ್ತಾರೆ. ಹೆಸರು ಕೆಟ್ಟರೂ ತಾನು ಕೆಡಬಾರದು ಎಂಬ ಯೋಚನೆಗೆ ಅಂಥವರಲ್ಲಿ ಆಸ್ಪದವಿರುವುದಿಲ್ಲ. ತಾನೇ ಶಾಶ್ವತ ಅಲ್ಲ ಎಂದಾದ ಮೇಲೆ ಹೆಸರು ಉಳಿದು ಉಪಯೋಗವಾದರೂ ಏನು? ಇರುವಷ್ಟು ದಿನ ತನಕ ಸ್ವಸ್ಥವಾಗಿ ಇರಬೇಕು. ಯಾರಿಗೂ ತೊಂದರೆ ಕೊಡದೆ ಇದ್ದರೆ ಸಾಕು ಎನ್ನುವುದು ಇಂಥಾ ಧೀರರಿಗೆ ಒಗ್ಗದ ಮಾತು. ಅವರ ಪ್ರಕಾರ ಯಾರಿಗೂ ತೊಂದರೆ ಮಾಡದೆ ಉಳಿಯುವುದರಲ್ಲಿ ಅಂಥಾ ಸ್ವಾರಸ್ಯವೇನಿಲ್ಲ, ಸ್ವಾರಸ್ಯ ಇರುವುದು ಇತರರಿಗೆ ‘ಉಪಕಾರ’ ಮಾಡುವುದರಲ್ಲಿ. ಏಕೆಂದರೆ ಅಲ್ಲಿ ಅವರ ‘ಅಹಂ’ ತೃಪ್ತಿಗೊಳ್ಳುತ್ತದೆ. ಬಲಿ ಚಕ್ರವರ್ತಿ ಮಾಡಿದ್ದೂ ಅದನ್ನೇ. ‘ಈ ಕುಳ್ಳನಿಗೆ ಹೆದರಿ ಹೆಸರು ಕೆಡಿಸಿಕೊಳ್ಳುವುದೇ!? ಎಂದವನು ಯೋಚಿಸಿರಬೇಕು. ಆದ್ದರಿಂದಲೇ ಆತ ಗುರುವಿನ ಮಾತನ್ನೂ ಧಿಕ್ಕರಿಸಿ ನಿಂತ. ಬಲಿ ಧರ್ಮಭೀರುವೇ ಆಗಿದ್ದಿದ್ದರೆ, ಗುರುವಾಕ್ಯ ಪರಿಪಾಲನೆಯನ್ನು ಮಾಡಬೇಕಿತ್ತಲ್ಲವೇ? ತನ್ನ ಕೀರ್ತಿ ಚಿಂತನೆಗಿಂತ ಗುರುವಾಕ್ಯಕ್ಕೆ ಮನ್ನಣೆ ಕೊಡುವುದೇ ಹೆಚ್ಚು ಧಾರ್ಮಿಕ ನಡವಳಿಕೆಯಾಗಿತ್ತಿತ್ತು. ಇಲ್ಲಿ ಆತನ ಮನಸ್ಸನ್ನು, ಆಸ್ತಿತ್ವವನ್ನು ಅಹಂಕಾರ ನುಂಗಿಹಾಕಿತ್ತು.

ವಾಮನನ ಕೈಗೆ ಕಮಂಡಲದ ಅಘ್ರ್ಯ ಬೀಳುತ್ತಲೇ ಪವಾಡ ನಡೆಯಿತು. ಮೂರಡಿ ದೇಹದ ಕುಳ್ಳ ಜಗದಾಕಾರ ಬೆಳೆದು ನಿಂತ. ಕೆಲಸವಾಗುವ ಮುನ್ನ ವಿನಯವಂತಿಕೆ ಭೂಷಣ. ಕೆಲಸವಾಗುತ್ತದೆ. ನಾವು ಗೆಲ್ಲುತ್ತೇವೆ ಎಂಬ ಸುಳಿವು ಸಿಕ್ಕುತ್ತಲೇ ಆತ್ಮವಿಶ್ವಾಸ ಹಿಗ್ಗಿ ನಾವೇ ಮುಗಿಲಾಗಿಬಿಡುತ್ತೇವೆ. ಗೆಲುವಿನ ಸೂಚನೆ ನಮ್ಮಿಂದ ಎಂಥಾ ಕೆಲಸವನ್ನಾದರೂ ಸಾಧ್ಯವಾಗಿಸಿಬಿಡುತ್ತದೆ. ವಾಮನನಿಗೆ ಬಲ ಬಂತು. ಆತನಲ್ಲಿ ನೈತಿಕತೆಯೂ ಇತ್ತು. ಆದ್ದರಿಂದಲೇ ಆತನ ಬಲಕ್ಕೆ ಮತ್ತಷ್ಟು ಪುಷ್ಠಿ ಬಂತು. ಅವನಲ್ಲಿದ್ದುದು ಎಂಥ ನೈತಿಕತೆ? ಮೂರು ಹೆಜ್ಜೆ ಭೂಮಿ ಕೇಳಿ ಲೋಕಕ್ಕೆ ಲೋಕವನ್ನೇ ಅಳೆಯಬಹುದೆ ಹಾಗೆಲ್ಲ? ಎಂದು ಕೇಳಬಹುದು. ವಾಮನ ದೇವತೆಗಳ ಪರವಾಗಿ ಬಂದವನು. ಆತನದ್ದು ದೇವಕಾರ್ಯ. ದೇವಕಾರ್ಯಗಳೆಲ್ಲವೂ ನೈತಿಕವೇ ಅಲ್ಲವೆ? ಅಲ್ಲೊಂದು ಸಂಕೇತ ಇರುತ್ತದೆ. ಲೋಕ ಕಲ್ಯಾಣದ ಉದ್ದೇಶ ಇರುತ್ತದೆ. ಆ ಹೊತ್ತಿಗೆ ಅದು ನಮ್ಮ ದೀರ್ಘಕಾಲದ ಫಲ ನೀಡುವಂಥದ್ದು. ಬಲಿಚಕ್ರವರ್ತಿ ಉಳಿದ ದೈತ್ಯರಂತಲ್ಲ.

ಆತ ಧರ್ಮ ಪರಾಯಣ. ಪ್ರಜಾಪಾಲಕ. ಸಮರ್ಥ ಆಡಳಿತಗಾರ. ಎಲ್ಲರಿಗೂ ಅವನನ್ನು ಕಂಡರೆ ಪ್ರೀತಿ. ಆತ ತನ್ನ ತೋಳ್ಬಲದಿಂದಲೇ ಇಂದ್ರನನ್ನು ಸೋಲಿಸಿ ದೇವಲೋಕ ಗೆದ್ದುಕೊಂಡಿದ್ದ. ಆದರೆ ಅವನು ದೈತ್ಯರ ಕುಲದವನು. ಅವನೊಬ್ಬ ಉತ್ತಮನಾಗಿದ್ದರೆ ಸಾಕಾಗುವುದಿಲ್ಲ. ಅವನ ಪರಿವಾರವೂ ಆ ಯೋಗ್ಯತೆ ಹೊಂದಿರುವುದು ಮುಖ್ಯವಾಗುತ್ತದಲ್ಲವೆ? ಇದು ಹೇಗೆಂದರೆ, ಪ್ರಜಾಪ್ರಭುತ್ವದಲ್ಲಿ ನಮ್ಮಿಂದ ಪ್ರಧಾನಿಯಾಗಿಯೋ ಮುಖ್ಯಮಂತ್ರಿಯಾಗಿಯೋ ಚುನಾಯಿಸಲ್ಪಟ್ಟವರು ಉತ್ತಮರಾಗಿದ್ದರೆ ಸಂತೋಷವೇ. ಆದರೆ ಅವರ ಸಚಿವ ಸಂಪುಟದ ಸದಸ್ಯರು ಭ್ರಷ್ಟರೂ ದುಷ್ಟರೂ ಆಗಿದ್ದರೆ ಪ್ರಯೋಜನವೆಲ್ಲಿಯದು? ಅಂಥವರ ಕೈಗೆ ಅಧಿಕಾರ ಸಿಕ್ಕು ಮತ್ತಷ್ಟು ದುರ್ಗತಿಯೇ ಒದಗುವುದಲ್ಲವೆ? ಮುಖ್ಯ ಹುದ್ದೆಯಲ್ಲಿ ಇರುವವನಿಗೆ ಅವನದೇ ರಾಜಕಾರ್ಯಗಳಿರುತ್ತವೆ. ಪ್ರಜೆಗಳು ನೇರ ಸಂಪರ್ಕಕ್ಕೆ ಬರುವುದು ಉಸ್ತುವಾರಿಯ ಅಧಿಕಾರಿಗಳು ಹಾಗೂ ಸಚಿವರೊಡನೆ. ಆದ್ದರಿಂದ ಮುಖ್ಯ ಹುದ್ದೆಯ ಆಡಳಿತಗಾರನೊಬ್ಬ ಮಾತ್ರವಲ್ಲ, ಅವನ ಪರಿವಾರವೂ ಸಜ್ಜನಿಕೆ ಹೊಂದಿರುವುದು, ಉತ್ತಮ ಹಿನ್ನೆಲೆ ಹೊಂದಿರುವುದು ಅಗತ್ಯವಾಗುತ್ತದೆ. ಬಲಿಯನ್ನು ಮಟ್ಟ ಹಾಕುವಲ್ಲಿಯೂ ಇದೇ ತರ್ಕ ಅನ್ವಯವಾಗಿದ್ದು. ಆತನ ಕುಲದ ಹಿನ್ನೆಲೆ ಮತ್ತು ಪರಿವಾರದ ದುಷ್ಟ ಕಾರ್ಯಗಳ ದಾಖಲೆಯೇ ಆತನ ನಿವಾರಣೆಗೆ ಮೂಲವಾಯಿತು. ಜೊತೆಗೆ ಬಲಿಯ ಅಹಂಕಾರದಿಂದ ಉಂಟಾದ ಮೈಮರೆವೂ ಸೇರಿಕೊಂಡಿತು. ಆತನ ಈ ದೌರ್ಬಲ್ಯ ವಾಮನನ ಬಲವಾಯಿತು.

ಬಹಳ ಬಾರಿ ಹೀಗಾಗುತ್ತದೆ. ನಮ್ಮ ಬಲದ ಬಲವಂತೂ ಸರಿಯೇ. ಎದುರಿಗೆ ಇರುವವರ ದೌರ್ಬಲ್ಯವೂ ನಮಗೆ ಹೆಚ್ಚುವರಿ ಬಲವಾಗಿ ಸೇರ್ಪಡೆಯಾಗುತ್ತದೆ. ವಾಮನ ತ್ರಿವಿಕ್ರಮನಾಗಿ ಬೆಳೆದನೆಂಬ ಸಂಕೇತದ ತಿರುಳು ಇದೇ ಆಗಿದೆ. ಇದು ನಮ್ಮೊಳಗೆ ನಡೆಯಬಹುದು. ನಮ್ಮಲ್ಲಿ ನೈತಿಕತೆ ಇದ್ದರೆ, ನಮ್ಮ ಕಾರ್ಯೋದ್ದೇಶ ಒಳಿತಿನೆಡೆಗೆ ಇದ್ದರೆ ಹಾಗೂ ಎದುರಾಳಿಯಲ್ಲಿ ವ್ಯಕ್ತಿಗತ (ದೇಹದ ದೌರ್ಬಲ್ಯವಲ್ಲ) ದೌರ್ಬಲ್ಯವಿದ್ದರೆ, ನಮ್ಮೊಳಗಿನ ವಾಮನಾಕಾರದ ಆತ್ಮವಿಶ್ವಾಸ ವರ್ಧಿಸಿ ತ್ರಿವಿಕ್ರಮನೆತ್ತರಕ್ಕೆ ಬೆಳೆಯಬಲ್ಲದು. ಮುಖ್ಯ, ನಾವು ಅಂತಹ ಶುದ್ಧಿ ಮತ್ತು ಸಾಮಥ್ರ್ಯಗಳನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬೇಕಷ್ಟೆ.

Tags: Bali ChakravarthyDr. Gururaja PoshettihalliKannada ArticleThe Bhagavata PuranaVamanavataraಡಾ.ಗುರುರಾಜ ಪೋಶೆಟ್ಟಿಹಳ್ಳಿತ್ರಿವಿಕ್ರಮಬಲಿ ಚಕ್ರವರ್ತಿಭಾಗವತ ಪುರಾಣವಾಮನಾವತಾರ
Share197Tweet123Send
Previous Post

ಕನ್ನಡ ವಾಙ್ಮಯ ಸೇವಾಪುರುಷ ಶ್ರೀಪ್ರಸನ್ನ ವೆಂಕಟದಾಸರು

Next Post

ಖ್ಯಾತ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿಗೆ ’ಶ್ರೀಕೃಷ್ಣ ಮುಖ್ಯಪ್ರಾಣ ಧಾರ್ಮಿಕ ರತ್ನ’ ಪ್ರಶಸ್ತಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಖ್ಯಾತ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿಗೆ ’ಶ್ರೀಕೃಷ್ಣ ಮುಖ್ಯಪ್ರಾಣ ಧಾರ್ಮಿಕ ರತ್ನ’ ಪ್ರಶಸ್ತಿ

ಖ್ಯಾತ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿಗೆ ’ಶ್ರೀಕೃಷ್ಣ ಮುಖ್ಯಪ್ರಾಣ ಧಾರ್ಮಿಕ ರತ್ನ’ ಪ್ರಶಸ್ತಿ

Leave a Reply Cancel reply

Your email address will not be published. Required fields are marked *

  • Trending
  • Latest
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

January 20, 2026
ಶಿಮುಲ್ ಅಧ್ಯಕ್ಷಗಾದಿ ಚುನಾವಣೆ ಅಸಿಂಧು: ಎಸಿ ಸೇರಿ ಇಬ್ಬರಿಗೆ ಕೋರ್ಟ್ ದಂಡ

ಶಿವಮೊಗ್ಗ | ಕುಂಸಿಯ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ | ಕಾರಣವೇನು?

January 22, 2026
ದೇಶ್ ಸಿಂಧೂರ್ ಸಂಭ್ರಮ | ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ದೇಶ್ ಸಿಂಧೂರ್ ಸಂಭ್ರಮ | ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

January 26, 2026
ಜ.28 – ಫೆ.1ರವರೆಗೆ 61ನೇ ನಾದಜ್ಯೋತಿ ಸಂಗೀತ ಸಂಭ್ರಮ

ಜ.28 – ಫೆ.1ರವರೆಗೆ 61ನೇ ನಾದಜ್ಯೋತಿ ಸಂಗೀತ ಸಂಭ್ರಮ

January 26, 2026
ಗಣರಾಜ್ಯೋತ್ಸವ: ಸಂವಿಧಾನದ ಸಂಭ್ರಮ ಮತ್ತು ಪ್ರಜಾಪ್ರಭುತ್ವದ ಹಬ್ಬ

ಗಣರಾಜ್ಯೋತ್ಸವ: ಸಂವಿಧಾನದ ಸಂಭ್ರಮ ಮತ್ತು ಪ್ರಜಾಪ್ರಭುತ್ವದ ಹಬ್ಬ

January 26, 2026
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

January 26, 2026
ಬೆಂಗಳೂರು | ಜ.27ರಂದು ತ್ಯಾಗರಾಜನಗರ ಮಠದಲ್ಲಿ ಪಂಡರಾಪುರ ಮಧ್ವ ನವಮಿ ಉತ್ಸವ

ಬೆಂಗಳೂರು | ಜ.27ರಂದು ತ್ಯಾಗರಾಜನಗರ ಮಠದಲ್ಲಿ ಪಂಡರಾಪುರ ಮಧ್ವ ನವಮಿ ಉತ್ಸವ

January 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL