No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Wednesday, October 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಸಿನೆಮಾ

ಪವರ್‌ಸ್ಟಾರ್ ಮೆಚ್ಚಿದ ಶಿವಮೊಗ್ಗ ಹುಡುಗರ ಬಗ್ಗೆ ನಿಮಗೆ ತಿಳಿಯದ ಸತ್ಯ ಇದು

kalpa News by kalpa News
June 13, 2018
in ಸಿನೆಮಾ
0
Share on FacebookShare on TwitterShare on WhatsApp

ಅವರು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.. ಕನ್ನಡಕ್ಕೆ ಪವರ್ ಆದರೂ ಇಡಿಯ ಭಾರತ ಚಿತ್ರರಂಗದಲ್ಲೇ ವಿಶಿಷ್ಟ ಹಾಗೂ ವಿಭಿನ್ನವಾಗಿ ಗುರುತಿಸಿಕೊಂಡವರು. ಇಂತಹ ವ್ಯಕ್ತಿಯಿಂದ ಹೊಗಳಿಕೆ ತೆಗೆದುಕೊಳ್ಳುವುದು, ಅವರನ್ನು ಮೆಚ್ಚಿಸುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಆದರೆ, ಇಂತಹ ವ್ಯಕ್ತಿಯಿಂದಲೇ ಭೇಷ್ ಅನ್ನಿಸಿಕೊಂಡು, ಅವರ ಸಂಪೂರ್ಣ ಬೆಂಬಲವನ್ನು ಪಡೆದುಕೊಂಡಿದೆ ಶಿವಮೊಗ್ಗ ಯುವಕರ ಚಿತ್ರತಂಡ.

ಹೌದು… ಯೂಟ್ಯೂಬ್‌ನಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿರುವ ಟ್ರೇಲರ್ ಸಂಕಷ್ಟಕರ ಗಣಪತಿ… ಈ ಚಿತ್ರ ಈಗ ಬಿಡುಗಡೆಗೂ ಮುನ್ನವೇ ಗಾಂಧೀನಗರದಲ್ಲಿ ಸಂಚಲನ ಸೃಷ್ಠಿಸಿರುವುದು ಮಾತ್ರವಲ್ಲದೇ, ಚಿತ್ರ ರಸಿಕರನ್ನು ಕಾತರತೆಯಲ್ಲಿರಿಸಿದೆ.

ನಿಮಗೆ ಗೊತ್ತಿಲ್ಲದ ವಿಶೇಷ ಏನು ಗೊತ್ತಾ?

ಋತ್ವಿಕ್ ಮುರಳೀಧರ್ ಹಾಗೂ ಅರ್ಜುನ್ ಕುಮಾರ್ ಎಂಬ ಇಬ್ಬರು ಹುಡುಗರ ನೇತೃತ್ವದಲ್ಲಿ ಸುಮಾರು ನಾಲ್ಕು ವರ್ಷದ ಹಿಂದೆ ಶಿವಮೊಗ್ಗದಲ್ಲಿ ರಾಜ್ ಸಂಗೀತೋತ್ಸವ-2 ಎಂಬ ಅದ್ದೂರಿ ಕಾರ್ಯಕ್ರಮ ನಡೆಯುತ್ತದೆ. ಅಂದು ಆ ಸಾಮಾನ್ಯ ಹುಡುಗರಿಗೆ ಆಸೆಯೊಂದಿತ್ತು. ಅದು ತಮ್ಮ ಕಾರ್ಯಕ್ರಮಕ್ಕೆ ಪವರ್‌ಸ್ಟಾರ್ ಪುನೀತ್ ಅವರಿಂದು ಶುಭ ಹಾರೈಕೆ ಪಡೆಯಬೇಕು ಎಂಬುದು.. ಅದಕ್ಕಾಗಿ ಬಹಳಷ್ಟು ಪ್ರಯತ್ನ ಪಟ್ಟ ಇವರು, ಛಲಬಿಡದೇ ಬೆಂಗಳೂರಿಗೆ ತೆರಳಿ ಪುನೀತ್ ಅವರನ್ನು ಭೇಟಿಯಾಗಿ ಶುಭಾಷಯಗಳನ್ನು ಪಡೆದುಕೊಂಡೇ ಬರುತ್ತಾರೆ.

ಈ ಹಂತದಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಲು ಇವರು ಸಾಕಷ್ಟು ಪ್ರಯತ್ನಿಸುತ್ತಾರೆ. ಇವರ ಪ್ರಯತ್ನಕ್ಕೆ ಬೆಂಬಲವಾಗಿ ಅಂದು ನಿಂತು, ಪುನೀತ್ ಅವರನ್ನು ಭೇಟಿ ಮಾಡಿಸಿದ್ದು ಇಂದು ಕನ್ನಡ ಪ್ರಭ ಪತ್ರಿಕೆಯ ಶಿವಮೊಗ್ಗ ಸಂಚಿಕೆಯ ಜಾಹೀರಾತು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿನಯ್ ಕುಮಾರ್. ಮಾತ್ರವಲ್ಲ ರಾಜ್ ಸಂಗೀತೋತ್ಸವ ಯಶಸ್ಸಿನ ಹಿಂದಿನ ಪ್ರಮುಖ ಕೈಗಳಲ್ಲಿ ವಿನಯ್ ಅವರೂ ಸಹ ಒಬ್ಬರು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಅಂದು ಪುನೀತ್ ಹಾರೈಸಿದ್ದರ ಫಲವೋ, ಈ ಹುಡುಗರ ಶ್ರಮವೋ ಇಂದು ಈ ಹುಡುಗರು ಹಗಲಿರುಳು ಕಷ್ಟ ಪಟ್ಟು ರೂಪಿಸಿರುವ ಸಂಕಷ್ಟಕರ ಗಣಪತಿ ಎಂಬು ಪೂರ್ಣಪ್ರಮಾಣದ ಚಿತ್ರದ ಆಡಿಯೋ ಹಕ್ಕುಗಳನ್ನು ಇದೇ ಪುನೀತ್ ರಾಜ್‌ಕುಮಾರ್ ಖರೀದಿಸಿದ್ದಾರೆ. ನಿಜಕ್ಕೂ ಇದೊಂದು ವಿಶೇಷದಲ್ಲಿ ವಿಶೇಷ ಸಾಧನೆಯೇ ಸರಿ.

ಅಂದು ಈ ಹುಡುಗರು ಪುನೀತ್ ಅವರನ್ನು ಭೇಟಿಯಾದಾಗ ಇವರು ಸಾಮಾನ್ಯರು. ಅಂದು ಋತ್ವಿಕ್ ಮರಳೀಧರ್ ಒಬ್ಬ ಸಣ್ಣ ಗಾಯಕ ಹಾಗೂ ಅರ್ಜುನ್ ಕುಮಾರ್ ಓರ್ವ ಸಾಮಾನ್ಯ ಛಾಯಾಗ್ರಾಹಕರಾಗಿದ್ದರು. ಆದರೆ, ಇಂದು ಅರ್ಜುನ್ ಕುಮಾರ್ ಸಂಗೀತ ನಿರ್ದೇಶಕ, ಋತ್ವಿಕ್ ಮುರಳೀಧರ್ ನಿರ್ದೇಶಕರಾಗಿ ಬೆಳೆದು ಪುನೀತ್ ಅವರೊಂದಿಗೇ ವೇದಿಕೆ ಹಂಚಿಕೊಳ್ಳುವ ಮಟ್ಟಕ್ಕೆ ಸಾಧನೆ ಮಾಡಿದ್ದಾರೆ.

ಚಿತ್ರದ ಆಡಿಯೋ ಹಕ್ಕನ್ನು ಖರೀದಿಸಿರುವ ಪುನೀತ್ ಸ್ವತಃ ಇತ್ತೀಚೆಗೆ ಸಂಕಷ್ಟಕರ ಗಣಪತಿ ಯ ಆಡಿಯೋ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಚಿತ್ರದ ಶೀರ್ಷಿಕೆಯಲ್ಲೇ ಗಣಪತಿ ಇದ್ದಾನೆ. ಗಣಪತಿ ಎಂದರೆ ವಿಘ್ನ ನಿವಾರಕ. ಆ ಗಣಪತಿಯ ಆಶೀರ್ವಾದದೊಂದಿಗೆ ಈ ಚಿತ್ರ ಯಶಸ್ವಿ ನೂರು ದಿನ ಪೂರೈಸಲಿ, ಹೊಸಬರಿಗೆ ಬೆಂಬಲ ದೊರೆಯಲಿ.. ಇವರಿಗೆ ಜನಾಶೀರ್ವಾದ ದೊರೆಯಲಿ ಎಂದು ಹಾರೈಸಿದರು.

ನಾನಿನ್ನೂ ಸಿನೆಮಾ ನೋಡಿಲ್ಲ. ಟ್ರೇಲರ್ ಭರವಸೆ ಮೂಡಿಸಿದೆ. ಸಿನಿಮಾದ ಗುಣಮಟ್ಟ ಚೆನ್ನಾಗಿದೆ. ಯುವಕರ ತಂಡ ಒಳ್ಳೆಯ ಸಿನಿಮಾ ಮಾಡಿರುವ ನಂಬಿಕೆ ಇದೆ ಎಂದರು.

ಇನ್ನು, ಋತ್ವಿಕ್ ಮುರಳೀಧರ್ ಹಾಗೂ ಅರ್ಜುನ್ ಕುಮಾರ್ ಅವರ ಬಗ್ಗೆ ನೋಡುವುದಾದರೆ ಈ ಹುಡುಗರು 2016ರಲ್ಲಿ ಪನ್ಮಂಡ್ರಿ ಕ್ರಾಸ್ ಎಂಬ ಕಿರುಚಿತ್ರವೊಂದನ್ನು ರೂಪಿಸಿದ್ದರು. ಯೂಟ್ಯೂಬ್‌ನಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಶಿವಮೊಗ್ಗದ ಪ್ರತಿಷ್ಠಿತ ಅಂಬೆಗಾಲು ಪ್ರಶಸ್ತಿಯೂ ಲಭಿಸಿದೆ. ಅತ್ಯಂತ ಪ್ರಮುಖವಾಗಿ ಪ್ರತಿಷ್ಠಿತಿ ಸೈಮಾ ಪ್ರಶಸ್ತಿಯೂ ಸಹ ಈ ತಂಡಕ್ಕೆ ದೊರೆತಿದೆ.

ಈಗ ಈ ಇಬ್ಬರೂ ಹುಡುಗರು ದೊಡ್ಡ ತಂಡವೊಂದನ್ನು ಕಟ್ಟಿಕೊಂಡು ಪೂರ್ಣ ಪ್ರಮಾಣದ ಚಿತ್ರ ಸಿದ್ದಪಡಿಸಿದ್ದು, ಇಡಿಯ ಗಾಂಧಿನಗರವೇ ಕಣ್ಣರಳಿಸಿಕೊಂಡು ನೋಡುತ್ತಿದೆ.

ಚಿತ್ರದಲ್ಲೇನಿದೆ?

ಸಂಕಷ್ಟಕರ ಗಣಪತಿ ಚಿತ್ರ ಸಂಪೂರ್ಣ ರೊಮ್ಯಾಂಟಿಕ್ ಹಾಗೂ ಕಾಮಿಡಿ ಅಂಶಗಳನ್ನು ಒಳಗೊಂಡಿದ್ದು, ಒಬ್ಬ ಕಾರ್ಟೂನಿಸ್‌ಟ್ ಜೀವನನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅರ್ಜುನ್. ಏಲಿಯಮ್ ಹ್ಯಾಂಡ್ ಎಂಬ ನ್ಯೂರೊಲೋಜಿಕಲ್ ಸಿಂಡ್ರೊಮ್ ಬಗ್ಗೆಯೂ ಇದರಲ್ಲಿ ಪ್ರಸ್ತಾಪ ಮಾಡಲಾಗಿದೆ. ಏಲಿಯಮ್ ಹ್ಯಾಂಡ್ ನ್ಯೂರೋಲೋಜಿಕಲ್ ಸಿಂಡ್ರೋಮ್ ಎಂದರೆ ತಮ್ಮ ಎಡಗೈಯಿಂದ ಬೇರೆಯವರಿಗೆ ತನಗೆ ಅರಿವಿಲ್ಲದಂತೆ ಹೊಡೆಯುವುದು. ಈ ನ್ಯೂನ್ಯತೆಯಿಂದ ಬಳಲುವ ನಾಯಕ ಇದರಿಂದ ಎದುರಿಸುವ ಅನೇಕ ಸಂಕಷ್ಟಗಳನ್ನು ಯಾವ ರೀತಿ ಎದುರಿಸಿ ಅದರಿಂದ ಹೇಗೆ ಪಾರಾಗುತ್ತಾನೆ ಎಂಬುದೇ ಕತೆ.

ಒಂದು ಹಂತದಲ್ಲಿ ಖಾಯಿಲೆ ಆವರಿಸಿಕೊಂಡಾಗ ಆಗುವ ಪರಿಪಾಟಲುಗಳನ್ನು ಕಾಮಿಡಿ ಜೊತೆಗೆ ಸುಂದರ ಪ್ರೇಮ ಕತೆಯನ್ನು ಹೆಣೆಯಲಾಗಿದೆ.
ಸಂಕಷ್ಟ ಅಂದರೆ ತೊಂದರೆಗಳು, ಕರಕ್ಕೆ ಅರ್ಥ ಕೈ, ಈತನ ಹೆಸರು ಗಣಪತಿ ಆಗಿರುವುದರಿಂದ ಶೀರ್ಷಿಕೆಯನ್ನು ಇದೇ ರೀತಿಯಲ್ಲಿ ಇಡಲಾಗಿದೆ. ದೃಶ್ಯಗಳು ಸಹಜವಾಗಿ ಬರಲೆಂದು ನಿರ್ದೇಶಕರು ರೋಗಿ ಮತ್ತು ಚಿತ್ರಕಾರರನ್ನು ಭೇಟಿ ಮಾಡಿ ಅವರ ಹಾವಭಾವಗಳನ್ನು ಗ್ರಹಿಸಿ ಅದರಂತೆ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ.

Tags: Movie Director Ritvik MuralidharMusic Director Arjun KumarPower StarPunit RajkumarSankashtakara Ganapathi MovieShivamoggaShivamogga Boysಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗದಲ್ಲಿ ಭಿಕ್ಷಾಟನೆಯ ಹಿಂದಿನ ಕರಾಳ ಮುಖ ನೋಡಿ

Next Post

ಇನ್ನೊಬ್ಬರ ಹೆಗಲು ಹಿಡಿದು ನಡೆವ ಕಾಂಗ್ರೆಸ್ ಆಯಸ್ಸು ಎಷ್ಟು ಕಾಲ?

kalpa News

kalpa News

Next Post

ಇನ್ನೊಬ್ಬರ ಹೆಗಲು ಹಿಡಿದು ನಡೆವ ಕಾಂಗ್ರೆಸ್ ಆಯಸ್ಸು ಎಷ್ಟು ಕಾಲ?

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL