ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ಮೀಟೂ ವಿಥ್ ಫೈಟೂ ಚಿತ್ರದ ನಿರ್ದೇಶಕ ಈ ಹೆಸರು ಗಾಂಧಿನಗರದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಾಧ್ಯಮ ರಂಗದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಚಿರಪರಿಚಿತ ಹೆಸರು. ಸಿನಿಮಾಗಿಂತ ವಿವಾದಾತ್ಮಕ ಹೇಳಿಕೆಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾದವರು ಈ ಕೀರ್ತನ್ ಶೆಟ್ಟಿ.
ಈ ಹಿಂದೆ ಜ್ಯೂನಿಯರ್ ಆರ್ಟಿಸ್ಟ್ ಆಗಿ ಹಾಗೂ ಒಂದೆರಡು ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇವರದು. ನಿರ್ದೇಶನ ಕ್ಷೇತ್ರವಲ್ಲದೇ ಸಿನಿಮಾ ವಿತರಣೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಕೀರ್ತನ್, ಗಾಂಧಿನಗರದ ಖ್ಯಾತ ನಿರ್ಮಾಪಕ ಹಾಗೂ ವಿತರಕರಾದ ಸಚಿತ್ ಫಿಲಂನ ವೆಂಕಟ್ ಗೌಡರ ಜೊತೆಗೆ ಚಿಟ್ಟೆ, ಭೂತಯ್ಯನ ಮಗ ಅಯ್ಯು, ಶತಾಯ ಗತಾಯ, ನವಿಲ ಕಿನ್ನರಿ, ಜೀವನ ಯಜ್ಞ, Mr ಚೀಟರ್ ರಾಮಾಚಾರಿ, ನಾಗವಲ್ಲಿ Vs ಆಪ್ತಮಿತ್ರರು, ದ್ವೈತ, ಕಂತ್ರಿಬಾಯ್ಸ್, ಖನನ ಹಾಗೂ ಸೂಜಿದಾರ ಮತ್ತು ತೆಲುಗಿನ ನಾಟಕಂ ಚಿತ್ರಗಳ ವಿತರಣೆಯಲ್ಲಿ ಇದೇ ಕೀರ್ತನ್ ಶೆಟ್ಟಿ ಕೆಲಸ ಮಾಡಿದವರು.
ಸಿನಿಮಾ ಕ್ಷೇತ್ರದ ಹಿನ್ನೆಲೆಯಿಂದ ಬಂದವರು ಈ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ?
ಹೌದು ಇವರು ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟನ ಮಗ ಆಶ್ಚರ್ಯವಾಗಬೇಡಿ, ಇದು ನಿಜ. ಇವರ ತಂದೆಯ ಸ್ವಂತ ತಮ್ಮ ಕನ್ನಡ ಸ್ಯಾಂಡಲ್’ವುಡ್ ನಾಯಕ ನಟ ಆಕಾಶ್ ಶೆಟ್ಟಿ. ಈ ಹಿಂದೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಟಿ ಸಂಜನಾ ಗರ್ಲಾನಿ ಯವರ ಮೊದಲ ಚಿತ್ರ ಆಟೋಗ್ರಾಫ್ ಪ್ಲೀಸ್ ಚಿತ್ರದಲ್ಲಿ ನಾಯಕನಾಗಿ ನಟಿಸಿದವರು ಇದೇ ಆಕಾಶ್ ಶೆಟ್ಟಿ . ನಂತರ ಮದುವೆ ಮದುವೆ, ನವರಂಗಿ, ಶಾಲಿನಿ ಚಿತ್ರದಲ್ಲಿ ನಾಯಕನಾಗಿ ನಟಿಸಿದರು.
ಈ ಮೊದಲು ವಿಷ್ಣುವರ್ಧನ್ ಅವರ ಹೃದಯವಂತ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಕೂಡ ಮಾಡಿದ್ದಾರೆ ಮತ್ತು ಕನ್ನಡದ ಕೃಷ್ಣ ರುಕ್ಮಿಣಿ ಸೀರಿಯಲ್’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಕನ್ನಡದ ರಾಜ್ ಕಪ್ ಕ್ರಿಕೆಟ್ ಲೀಗ್’ನಲ್ಲಿ ದರ್ಶನ್ ತೂಗುದೀಪ್, ಶಿವರಾಜ್ ಕುಮಾರ್, ಉಪೇಂದ್ರ, ದುನಿಯಾ ವಿಜಯ್, ತರುಣ್ ಸುಧೀರ್ ಹೀಗೆ ಅನೇಕ ನಟ, ನಿರ್ದೇಶಕ, ನಿರ್ಮಾಪಕರ ಜೊತೆ ಆಡಿ ಸೈ ಎನಿಸಿಕೊಂಡವರು ಇದೇ ಆಕಾಶ್ ಶೆಟ್ಟಿ. ಅದೇ ಆಕಾಶ್ ಶೆಟ್ಟಿಯವರ ಸ್ವಂತ ಅಣ್ಣನ ಮಗ ಇದೇ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ.
ಇಂತಹ ಯುವ ಪ್ರತಿಭಾನ್ವಿತ ಕಲಾವಿದ, ನಿರ್ದೇಶಕನ ಮುಂದಿನ ಎಲ್ಲ ಯೋಜನೆಗಳು ಯಶಸ್ವಿಯಾಗಲಿ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಸುತ್ತದೆ.
Discussion about this post