ಭಾರತ ದೇಶದ ಕಂಡ ಕೆಲವೇ ಕೆಲವು ಶ್ರೇಷ್ಠ ಸಂತರಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಒಬ್ಬರು. 80 ವರ್ಷ ಸನ್ಯಾಸ ಜೀವನದಲ್ಲೇ ಕಳೆದ ಶ್ರೀಗಳ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳ ಸಂತ ಸಮುದಾಯಕ್ಕೆ ಮಾತ್ರವಲ್ಲ ಇಡಿಯ ಸಮಾಜಕ್ಕೇ ಮಾದರಿ.
ಇಂತಹ ಶ್ರೀಗಳು ತಮ್ಮ ಕರ್ತವ್ಯದಲ್ಲಿ ಎಂತಹ ಬದ್ದತೆ ಹಾಗೂ ನಿಷ್ಠೆ ಹೊಂದಿದ್ದಾರೆ ಎಂಬುದನ್ನು ಸಾಕ್ಷಿಯಾಗಿ ಒಂದು ಘಟನೆ ನಡೆದಿದೆ. ಇದನ್ನು ಸ್ನೇಹಿತರೊಬ್ಬರು ಫೇಸ್’ಬುಕ್’ನಲ್ಲಿ ಬರೆದುಕೊಂಡಿದ್ದು, ಶ್ರೀಗಳ ಅನುಯಾಯಿಗಳ ಗಮನಕ್ಕಾಗಿ ಪ್ರಕಟಿಸುತ್ತಿದ್ದೇವೆ.
ಇದು ಪೇಜಾವರ ಶ್ರೀಪಾದರಿಗೆ ಇರುವ ಬದ್ಧತೆ, ನಿಷ್ಠೆ. ನಿನ್ನೆ ಸಂಜೆ ನಮ್ಮ ಹಿರಿಯ ವಿದ್ಯಾರ್ಥಿಗಳಿಗೆ ವೇದಾಂತದ ಪಾಠ ಮಾಡಬೇಕಿತ್ತು. ವಿದ್ಯುತ್ತು ಕೈಕೊಟ್ಟಿತ್ತು. ಬೆಳಿಗ್ಗೆಯೇ ಪಾಠ ಮಾಡೋಣವೆಂದರೆ ಮೈತುಂಬಾ ಕಾರ್ಯಗಳು. ಬೆಳಿಗ್ಗೆ ಕಣ್ವತೀರ್ಥದಲ್ಲಿ ಸಂಸ್ಥಾನ ಪೂಜೆ, ಅಲ್ಲಿಯೇ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಉಡುಪಿಗೆ ಬರುವಾಗ ಗಡಿಯಾರದ ಮುಳ್ಳು ಮೂರನ್ನು ದಾಟಿ ನಾಲ್ಕಕ್ಕಿನ್ನೂ ಮೂವತ್ತೇ ನಿಮಿಷವೆಂದು ಚುಚ್ಚುತ್ತಿತ್ತು.
ಉಡುಪಿಗೆ ಬಂದವರೇ ಶ್ರೀಪಾದರು ಕೃಷ್ಣಮಠದಲ್ಲಿ ಆಸ್ತಿಕಬಂಧುಗಳಿಗೆ ಸುಧಾಪಾಠ ನೇರವೇರಿಸಿ ಪೇಜಾವರಮಠಕ್ಕೆ ಬರುವಾಗ ಸಂಜೆಯಾಗಿತ್ತು. ಒಂದೆಡೆ ಬೆಳಿಗ್ಗೆಯಿಂದ ವಿದ್ಯಾರ್ಥಿಗಳಿಗೆ ಪಾಠವಾಗದ ಕಾರಣ ಮನಸ್ಸಿನ ಚಡಪಡಿಕೆ ಶ್ರೀಪಾದರಿಗೆ, ಇನ್ನೊಂದೆಡೆ ಉಡುಪಿಯಲ್ಲಿ ವಿದ್ಯುತ್ ನ ಅಭಾವ. ಶ್ರೀಪಾದರು ಪಾಠವಾಗಲಿಲ್ಲವೆಂದು ಕೊರಗುತ್ತ ಕೂರಲಿಲ್ಲ. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ. ಅವರಿಗೆ ಶಾಸ್ತ್ರಪಾಠನಿಷ್ಠೆ ಇನ್ನೂ ಹೆಚ್ಚಿತು.

ಒಂದೋ ಅಧ್ಯಯನ ಇಲ್ಲವೇ ಅಧ್ಯಾಪನ. ಎಷ್ಟಾದರೂ ಅವರ ಶಿಷ್ಯರೇ ಅಲ್ಲವೇ ಇವರು! ಸೂರ್ಯ ತಾನುದಯಿಸಲು ಅಸ್ತಾಚಲದ ದಿಕ್ಕನ್ನಾದರೂ ಆಶ್ರಯಿಸಿಯಾನು. ಆದರೆ ಪೇಜಾವರರು ಪಾಠವಿಲ್ಲದ ದಿನವನ್ನೆಂದೂ ಕಳೆದದ್ದಿಲ್ಲ. ವೇದಾಂತಾಧ್ಯಯನಾಧ್ಯಾಪನದಲ್ಲಿ ಅಂತಹ ನಿಷ್ಠೆ, ಬದ್ಧತೆ, ಭಕ್ತಿ ಎಲ್ಲವೂ ಅವರಲ್ಲಿ ಮೇಳೈಸಿವೆ.
जोषीत्युपाभिधः यादियान्त्यः
(ಯಾಜ್ಞವಲ್ಕ್ಯ ಜೋಶಿ)






Discussion about this post