ನವದೆಹಲಿ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂಬ ಮಾತು ಜನಜನಿತ.. ಅಂತೆಯೇ, ಆ ಪಕ್ಷದಲ್ಲಿದ್ದು, ಈ ಪಕ್ಷದ ಮುಖಂಡರಿಗೆ ಹೀನಾ ಮಾನ ಜರಿದು, ಸ್ವಲ್ಪ ಹೊತ್ತಿನಲ್ಲೇ ಆಜನ್ಮ ಸ್ನೇಹಿತರಂತೆ ಉಭಯಕುಶಲೋಪರಿ ಮಾತನಾಡಿಕೊಳ್ಳುವುದು ರಾಜಕೀಯ ಮೊಗಸಾಲೆಯಲ್ಲಿ ಕಾಮನ್.
ಈಗ ಪ್ರಧಾನಿ ಮೋದಿಯವರ ಉತ್ತಮ ಸ್ನೇಹಗುಣವನ್ನು ಬಿಂಬಿಸುವ ಒಂದು ಫೋಟೋ ಈಗ ವೈರಲ್ ಆಗುತ್ತಿದೆ.
Some pictures from the all-party meeting held in Parliament earlier today. pic.twitter.com/dZI2SJRzsX
— Narendra Modi (@narendramodi) July 17, 2018
ಇಂದು ಎಲ್ಲ ಪಕ್ಷಗಳ ಪ್ರಮುಖರ ಸಭೆಯನ್ನು ಸಂಸತ್ ಭವನದಲ್ಲಿ ಕರೆಯಲಾಗಿತ್ತು. ಈ ಸಭೆಗೆ ಪ್ರಮುಖ ಪಕ್ಷಗಳ ಮುಖಂಡರು ಬಹುತೇಕರು ಪಾಲ್ಗೊಂಡಿದ್ದರು.
ಇಂತಹ ಸಂದರ್ಭದಲ್ಲಿ ಸಂಸತ್ ಭವನದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಪ್ರತಿಪಕ್ಷ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೈಕೈ ಹಿಡಿದುಕೊಂಡು ನಡೆದು ಬರುತ್ತಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಲ್ಲ ಪಕ್ಷಗಳ ಮುಖಂಡರೊಂದಿಗೆ ನಡೆದು ಬರುತ್ತಿರುವ ಪ್ರಧಾನಿ ಮೋದಿ, ಖರ್ಗೆ ಅವರ ಕೈ ಹಿಡಿದುಕೊಂಡು ಆತ್ಮೀಯವಾಗಿ ಸಂತಸದಿಂದ ನಡೆದು ಬರುತ್ತಿದ್ದಾರೆ. ಈ ಚಿತ್ರವನ್ನು ಸ್ವತಃ ಪ್ರಧಾನಿ ಮೋದಿಯವರೇ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಬಹಳಷ್ಟು ವೈರಲ್ ಆಗಿದೆ.
Discussion about this post