ಭೋಪಾಲ್: ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸವಂತಹ ಹಾಗೂ ಬಾಂಧವ್ಯಗಳ ನಡುವಿನ ನಂಬಿಕೆಯನ್ನೇ ಕೊಲ್ಲುವಂತಹ ಹೀನಾತಿಹೀನ ಕೃತ್ಯ…
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸುರಾನಿ ಎಂಬ ಗ್ರಾಮದಲ್ಲಿ ಸ್ವಂತ ಮಗನೇ ಜನ್ಮ ನೀಡಿದ ತಾಯಿಯನ್ನು ಅತ್ಯಾಚಾರ ಮಾಡಿರುವ ಹೇಯ ಕೃತ್ಯ ನಡೆದಿದೆ.
ಆಕೆ ತನ್ನ ಅಂಗವಿಕಲ ಪತಿಯಿಂದ ದೂರವಾಗಿ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಳು. 45 ವರ್ಷದ ಆಕೆಯ ಮೇಲೆ ತಾನು ಹೆತ್ತ ಮಗನೇ(30) ಭೀಕರವಾಗಿ ಅತ್ಯಾಚಾರ ನಡೆಸಿದ್ದಾನೆ. ಇದಕ್ಕೂ ಘೋರ ಘಟನೆ ಏನೆಂದರೆ, ಈ ಕೃತ್ಯ ಎಸಗುವ ವೇಳೆ ದುಷ್ಕರ್ಮಿಯ ಏಳು ವರ್ಷದವನನ್ನೂ ಸಹ ಎದುರುಗಡೆಯೇ ಕೂರಿಸಿಕೊಂಡಿದ್ದ.
ಸೆ.2ರಂದು ಈ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.
ಇನ್ನು ಈ ಕುರಿತಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ದಿನೇಶ್ ಚೌಹಾಣ್ ಶಿಂಧೆ, ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮಗನ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಹತ್ತಿರದ ಜಮೀನಿನ ಒಳಗೆ ಅವಿತಿದ್ದಳು. ಆನಂತರ ತನ್ನ ಸಂಬಂಧಿಕರ ನೆರವಿನಿಂದ ದೂರು ನೀಡಿದ್ದಾಳೆ ಎಂದು ತಿಳಿಸಿದ್ದಾರೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಕಲಂ 376 (ಅತ್ಯಾಚಾರಕ್ಕೆ ಶಿಕ್ಷೆ ) ಹಾಗೂ 506 ( ಅಪರಾಧ ಉದ್ದೇಶ ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Discussion about this post