ಕಲ್ಪ ಮೀಡಿಯಾ ಹೌಸ್ | ಅರಸೀಕೆರೆ |
ಕಡಿಮೆ ಪ್ರಯಾಣಿಕರ ಸಂಖ್ಯೆ ಮತ್ತು ಕಡಿಮೆ ಆಸನ ಭರ್ತಿಯ ಕಾರಣದಿಂದ, ದಕ್ಷಿಣ ಮಧ್ಯ ರೈಲ್ವೆಯು ವಿಶೇಷ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಸೂಚಿಸಿದೆ.
ರೈಲು ಸಂಖ್ಯೆ 07069/07070 ಹೈದರಾಬಾದ್ – ಅರಸೀಕೆರೆ #Arsikere – ಹೈದರಾಬಾದ್ ಸಾಪ್ತಾಹಿಕ ವಿಶೇಷ ಹಾಗೂ ರೈಲು ಸಂಖ್ಯೆ 07079/07080 ಸಿಕಂದರಾಬಾದ್ – ಅರಸೀಕೆರೆ – ಸಿಕಂದರಾಬಾದ್ ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರವನ್ನು ಉಲ್ಲೇಖಿಸಲಾದ ದಿನಾಂಕಗಳಂದು ರದ್ದುಪಡಿಸಲಾಗಿದೆ.
ಮಂಗಳವಾರದಂದು ಹೈದರಾಬಾದ್‌ನಿಂದ #Hyderabad ಅರಸೀಕೆರೆಗೆ ಚಲಿಸುವ ರೈಲು (07069) ಆಗಸ್ಟ್ 12, 19 ಮತ್ತು 26, 2025 ರಂದು, ಬುಧವಾರದಂದು ಕಾರ್ಯನಿರ್ವಹಿಸುವ ಅರಸೀಕೆರೆಯಿಂದ ಹೈದರಾಬಾದ್‌ಗೆ ಹೋಗುವ ರೈಲು (07070) ಆಗಸ್ಟ್ 13, 20 ಮತ್ತು 27, 2025 ರಂದು ರದ್ದುಗೊಳ್ಳಲಿದೆ.

ಹುಬ್ಬಳ್ಳಿ-ಕಾರೈಕ್ಕುಡಿ ವಿಶೇಷ ರೈಲು
ಸ್ವಾತಂತ್ರ್ಯ ದಿನಾಚರಣೆ ಮತ್ತು ನಂತರದ ನಿರಂತರ ರಜೆಯ ಪ್ರಯುಕ್ತ, ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ತಮಿಳುನಾಡಿನ ಕಾರೈಕ್ಕುಡಿ ಜಂಕ್ಷನ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಓಡಿಸಲಿದೆ.
ರೈಲು ಸಂಖ್ಯೆ 07331 ಎಸ್ಎಸ್ಎಸ್ ಹುಬ್ಬಳ್ಳಿ – ಕಾರೈಕ್ಕುಡಿ ಜಂಕ್ಷನ್ ವಿಶೇಷ ಎಕ್ಸ್ ಪ್ರೆಸ್ ರೈಲು, ಆಗಸ್ಟ್ 14, 2025 ರಂದು (ಗುರುವಾರ) ಮಧ್ಯಾಹ್ನ 4:00 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 11:00 ಗಂಟೆಗೆ ಕಾರೈಕ್ಕುಡಿಯನ್ನು ತಲುಪಲಿದೆ.

ಈ ರೈಲು ಎರಡೂ ಮಾರ್ಗದಲ್ಲಿ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಮಕ್ಕಲ್, ಕರೂರು, ತಿರುಚ್ಚಿರಾಪಳ್ಳಿ ಮತ್ತು ಪುದುಕೊಟ್ಟೈ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲು ಒಟ್ಟು 17 ಬೋಗಿಗಳನ್ನು ಹೊಂದಿದ್ದು, ಅವುಗಳಲ್ಲಿ 1 ಎಸಿ 2-ಟೈರ್, 1 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 3 ಸಾಮಾನ್ಯ ದರ್ಜೆ ಮತ್ತು 2 ಎಸ್ಎಲ್ಆರ್’ಡಿ ಬೋಗಿಗಳು ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post