ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಎಕ್ಸ್’ಪ್ರೆಸ್ ರೈಲು ಮಹತ್ವದ ಸಂಪರ್ಕವಾಗಿದ್ದು, ವಿಜಯಪುರ ಭಾಗದಿಂದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳಿಗೆ ಈ ರೈಲು ಅನಿಕೂಲವಾಗಿದೆ.
ಅಲ್ಲದೇ, ಕುಕ್ಕೆ ಸುಬ್ರಹ್ಮಣ್ಯ,ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೈಲಿನಲ್ಲಿ ಹಾಸನ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ, ಬಾಗಲಕೋಟೆ, ವಿಜಯಪುರ ಕಡೆಗೆ ಪ್ರಯಾಣಿಸುವ ಭಕ್ತಾದಿಗಳಿಗೂ ಸಹ ಇದು ಸಹಕಾರಿಯಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
07378 ಸಂಖ್ಯೆಯ ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್’ಪ್ರೆಸ್ ವಿಶೇಷ ರೈಲಿನ ವೇಳಾಪಟ್ಟಿ ಹೀಗಿದೆ. ಮಂಗಳೂರಿನಿಂದ ವಿಜಯಪುರ ಹಾಗೂ ವಿಜಯಪುರದಿಂದ ಮಂಗಳೂರುವರೆಗೂ ನಿಲುಗಡೆ ನೀಡಲಾಗುವ ನಿಲ್ದಾಣಗಳನ್ನು ತಲುಪುವ ಹಾಗೂ ಹೊರಡುವ ಸಮಯವನ್ನು ಕೊಡಲಾಗಿದೆ. ಇದನ್ನು ಗಮನಿಸಿ ಹಾಗೂ ನಿಮ್ಮ ಪ್ರಯಾಣವನ್ನು ಕ್ರಮವಾಗಿ ಯೋಜಿಸಿ.
ಮಂಗಳೂರಿನಿಂದ ವಿಜಯಪುರ:(ರೈಲು ಸಂಖ್ಯೆ: 07378) ದಿನ-1
- ಮಂಗಳೂರು ಸೆಂಟ್ರಲ್ – ನಿರ್ಗಮನ: ಸಂಜೆ 4:45
- ಮಂಗಳೂರು ಜಂಕ್ಷನ್ – ಸಂಜೆ 4:57 / 5:00
- ಬಂಟ್ವಾಳ – ಸಂಜೆ 5:30 / 5:32
- ಕಬಕ ಪುತ್ತೂರು – ಸಂಜೆ 6:00 / 6:02
- ಸುಬ್ರಹ್ಮಣ್ಯ ರೋಡ್ – ಸಂಜೆ 6:50 / 7:00
- ಸಕಲೇಶಪುರ – ರಾತ್ರಿ 9:20 / 9:30
- ಹಾಸನ ಜಂಕ್ಷನ್ – ರಾತ್ರಿ 10:20 / 10:30
- ಅರಸೀಕೆರೆ ಜಂಕ್ಷನ್ – ರಾತ್ರಿ 11:20 / 11:22
- ಕಡೂರು – ರಾತ್ರಿ 11:59 / 12:01 (ದಿನ 2)
ದಿನ-2 - ಬೀರೂರು ಜಂಕ್ಷನ್ – ರಾತ್ರಿ 12:08 / 12:09
- ಚಿಕ್ಕಜಾಜೂರು ಜಂಕ್ಷನ್ – 1:10 / 1:12
- ದಾವಣಗೆರೆ – 1:48 / 1:50
- ಹರಿಹರ – 2:03 / 2:05
- ರಾಣಿಬೆನ್ನೂರು – 2:25 / 2:27
- ಬ್ಯಾಡಗಿ – 2:44 / 2:46
- ಎಸ್’ಎಂಎಂ ಹಾವೇರಿ – 3:00 / 3:02
- ಯಲವಿಗಿ – 3:32 / 3:33
- ಎಸ್’ಎಸ್’ಎಸ್ ಹುಬ್ಬಳ್ಳಿ ಜಂಕ್ಷನ್ – ಮುಂಜಾನೆ 4:40 / 4:50
- ಅಣ್ಣಿಗೇರಿ – 5:20 / 5:21
- ಗದಗ ಜಂಕ್ಷನ್ – ಬೆಳಗ್ಗೆ 6:15 / 6:16
- ಮಲ್ಲಾಪುರ – 6:49 / 6:50
- ಹೊಳೆ ಆಲೂರು – 7:07 / 7:08
- ಬಾದಾಮಿ – 7:29 / 7:30
- ಗುಳೇದಗುಡ್ಡ ರೋಡ್ – 7:43 / 7:44
- ಬಾಗಲಕೋಟೆ – 7:56 / 7:58
- ಆಲಮಟ್ಟಿ – 8:37 / 8:38
- ಬಸವನ ಬಾಗೇವಾಡಿ ರೋಡ್ – 8:59 / 9:00
- ವಿಜಯಪುರ – ಆಗಮನ: ಬೆಳಿಗ್ಗೆ 11:15
ವಿಜಯಪುರದಿಂದ ಮಂಗಳೂರು(ರೈಲು ಸಂಖ್ಯೆ: 07377): ದಿನ -1
- ವಿಜಯಪುರ – 15:00
- ಬಾಗೇವಾಡಿ ರೋಡ್ – 15:29 / 15:30
- ಆಲಮಟ್ಟಿ – 15:49 / 15:50
- ಬಾಗಲಕೋಟೆ – 16:38 / 16:40
- ಗುಳೇದಗುಡ್ಡ ರೋಡ್ – 16:50 / 16:51
- ಬಾದಾಮಿ -17:03 / 17:04
- ಹೊಳೆ ಆಲೂರು – 17:24 / 17:25
- ಮಲ್ಲಾಪುರ – 17:44 / 17:45
- ಗದಗ ಜೂ – 19:20 / 19:30
- ಅಣ್ಣಿಗೇರಿ – 19:49 / 19:50
- ಹುಬ್ಬಳ್ಳಿ ಜಂಕ್ಷನ್ – 21:00 / 21:20
- ಯಲ್ವಿಗಿ – 21:49 / 21:50
- ಹಾವೇರಿ – 22:28 / 22:30
- ಬ್ಯಾಡಗಿ – 22:46 / 22:47
- ರಾಣಿಬೆನ್ನೂರು – 23:05 / 23:07
- ಹರಿಹರ – 23:25 / 23:27
- ದಾವಣಗೆರೆ – 23:43 / 23:45
ದಿನ-2 - ಚಿಕ್ಕಜಾಜೂರು ಜಂಕ್ಷನ್ – 00:20 / 00:21
- ಬೀರೂರು ಜಂಕ್ಷನ್ – 00:58 / 01:00
- ಕಡೂರು – 01:09 / 01:11
- ಅರಸೀಕೆರೆ ಜಂಕ್ಷನ್ – 02:00 / 02:05
- ಹಾಸನ – 03:00 / 03:10
- ಸಕಲೇಶಪುರ – 04:00 / 04:15
- ಸುಬ್ರಹ್ಮಣ್ಯ ರೋಡ್ – 07:15 / 07:25
- ಕಬಕಪುತ್ತೂರು – 08:13 /08:15
- ಬಂಟ್ವಾಳ – 08:48 /08:50
- ಮಂಗಳೂರು ಜಂಕ್ಷನ್- 09:30 / 09:32
- ಮಂಗಳೂರು ಸೆಂಟ್ರಲ್ – 09:50
ಪ್ರಯಾಣಿಕರು IRCTC ಹಾಗೂ RailOne ಮೂಲಕ ಅಥವಾ ನಿಮ್ಮೂರಿನ ರೈಲು ನಿಲ್ದಾಣಗಳ ಕಾಯ್ದಿರಿಸುವ ಕೌಂಟರ್’ಗಳಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಮಾಹಿತಿಗಾಗಿ 139 ಸಂಖ್ಯೆಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post