ಶಿವಮೊಗ್ಗ: ಬೆಂಗಳೂರಿನ ಪ್ರಖ್ಯಾತ ಅನನ್ಯ ಸ್ಪಿರಿಚ್ಯುಯಲ್ ಹೀಲಿಂಗ್ ಸೆಂಟರ್ ವತಿಯಿಂದ ಸಾಗರ ತಾಲೂಕಿನ ತಳವಾಟದಲ್ಲಿ ಫೆ.24 ಹಾಗೂ 25ರಂದು ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಇದು ಜೀವನದ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿರುವ ಮಹತ್ವವನ್ನು ಹೊಂದಿದೆ.
ಮಾನವನ ಮನಸ್ಸೇ ಅವನ ಉನ್ನತಿಗೆ ಹಾಗೂ ಅವನತಿಗೆ ಕಾರಣ. ದೇಹ – ಮನಸ್ಸು – ಭಾವನೆಗಳಲ್ಲಿರುವ ಅಡೆತಡೆಗಳನ್ನು ನಿವಾರಿಸಿ ತನ್ಮೂಲಕ ಸಾಮರಸ್ಯವನ್ನು ಉಂಟುಮಾಡುವ ವಿಶೇಷ ಸಾಧನವೇ “ಸಮ್ಮೋಹಿನಿ ಚಿಕಿತ್ಸೆ”. ಇಂತಹ ಸಮ್ಮೋಹಿನಿ ಚಿಕಿತ್ಸೆಯಲ್ಲಿ ವಿಶ್ವ ವಿಖ್ಯಾತವಾಗಿರುವ ಶ್ರೀ ರಾಮಚಂದ್ರ ಗುರೂಜಿ ಅವರ ನೇರ ಶಿಷ್ಯ ಶ್ರೀ ವೇಣುಗೋಪಾಲ ಗುರೂಜಿ ಅವರಿಂದ ಎರಡು ದಿನಗಳ ಕಾಲ ಕರ್ಮ ವಿಮೋಚನಾ ಚಿಕಿತ್ಸಾ ಶಿಬಿರ ನಡೆಯಲಿದೆ.
ಕಾರ್ಯಾಗಾರದ ಪಕ್ಷಿನೋಟ ಹೀಗಿದೆ:
• ಹೊರ ಮನಸ್ಸು ಮತ್ತು ಸುಪ್ತಮನಸ್ಸಿಗಿರುವ ವ್ಯತ್ಯಾಸಗಳು
• ಸುಪ್ತಮನಸ್ಸಿನ ಅತೀಂದ್ರಿಯ ಶಕ್ತಿಯ ತಿಳುವಳಿಕೆ
• ಅಂತರ್ ಮನಸ್ಸಿನ ವಿಸ್ಮಯ ಶಕ್ತಿಗಳ ಪ್ರಾಯೋಗಿಕ ಅರಿವು
• ಊಹಾಶಕ್ತಿಯ ಮತ್ತು ಸ್ವ-ಸಮ್ಮೋಹಿನಿ ಪರಿಚಯ
• ಕರ್ಮ ಸಿದ್ಧಾಂತದ ವಿವರಣೆ
• ವಿಶ್ವಾಕರ್ಷಣ ನಿಯಮದ ರಹಸ್ಯಗಳು
• ಭಾವಶುದ್ಧೀಕರಣ ಮತ್ತು ನಿಶ್ಚಿತ ಗುರಿಸಾಧನೆ ಧ್ಯಾನಾಭ್ಯಾಸ
• ಚಿತ್ತ ಶುದ್ಧಿ, ಕ್ಷಮಾಪಣಾ ತಂತ್ರ ಮತ್ತು ಅದರ ಮಹತ್ವ
• ವೈಜ್ಞಾನಿಕ ಪ್ರಾರ್ಥನಾ ವಿಧಾನ
• ಭಾವವಿಮೋಚನಾ ಕ್ರಿಯೆ
• ಯೋಗನಿದ್ರಾ ಚಿಕಿತ್ಸೆ
• ಅಪರಿಮಿತ ಸಂಪತ್ತನ್ನು ಆಕರ್ಷಿಸುವ ಕುಶಲತಂತ್ರಗಳು
• ಬದುಕಿನ ಎಲ್ಲಾರಂಗಗಳಲ್ಲಿ ಸುಮಧುರ ಬಾಂಧವ್ಯವನ್ನು ಸಾಧಿಸಿ, ಸ್ವಸ್ಥ ದೇಹ-ಮನಸ್ಸು-ಬುದ್ಧಿ-ಚಿತ್ತ ಜೊತೆ ಆತ್ಮಾನಂದವನ್ನು ಅನುಭವಿಸುವ ಕುಶಲವಿಧಾನಗಳು.
ಕಾರ್ಯಾಗಾರದ ಪ್ರಯೋಜನ ಸಾಧ್ಯತೆಗಳು:
- ಉತ್ತಮ ಆರೋಗ್ಯ, ಕಾರ್ಯಕ್ಷಮತೆ, ಏಕಾಗ್ರತೆ ಮತ್ತು ಧನಾತ್ಮಕ ಚಿಂತನೆ ಹೆಚ್ಚಿಸಿಕೊಳ್ಳಬಹುದು.
- ವೈಯಕ್ತಿಕ, ಕೌಟುಂಬಿಕ, ವೃತ್ತಿ, ಆರ್ಥಿಕ ಮತ್ತು ಸಾಮಾಜಿಕ ಜೀವನಗಳಲ್ಲಿ ಸಾಮರಸ್ಯ ಸಾಧಿಸಿ, ಬದುಕನ್ನು ಸುಂದರವಾಗಿಸಿ ಕೊಳ್ಳಬಹುದು.
- ದೈನಂದಿನ ಉದ್ವಿಗ್ನತೆ ಮತ್ತು ಖಿನ್ನತೆಯಿಂದ ದೂರವಿರಲು ಸಹಕಾರಿ.
- ಧ್ಯಾನದ ಕಿರು ಪರಿಚಯ, ಸಂತೋಷದಾಯಕ ಮತ್ತು ನೆಮ್ಮದಿಯ ಜೀವನದತ್ತ ಒಂದು ಹೆಜ್ಜೆ.
- ಸ್ವ-ಸಮ್ಮೋಹಿನಿ ಕ್ರಮವನ್ನು ತಿಳಿಯಲು ಸದಾವಕಾಶ.
- ಉತ್ತಮ ಆಲೋಚನೆ, ಆಯ್ಕೆ, ಸ್ಪಷ್ಟ ನಿರ್ಧಾರ, ಸ್ಪಷ್ಟ ಗುರಿ, ನಿಖರತೆಗಳಿಂದ ಸುಖೀ ಜೀವನವನ್ನು ನಡೆಸಬಹುದು.
- ನಮ್ಮ ಬದುಕಿನಲ್ಲಿ ಬರುವ ಯಾವುದೇ ಸಮಸ್ಯೆ, ಒತ್ತಡಗಳನ್ನು ಸುಲಭವಾಗಿ ನಿಭಾಯಿಸಬಹುದು.
ನಮ್ಮ ಸುತ್ತ-ಮುತ್ತ ಇರುವ ವ್ಯಕ್ತಿಗಳಿಂದ ನಮಗೆ ತೊಂದರೆಗಳಾದಾಗ ಅಥವಾ ಹಾನಿಯಾದಾಗ ಸಿಟ್ಟನ್ನು, ಕೋಪವನ್ನು ಅಥವಾ ದುಃಖವನ್ನು ವ್ಯಕ್ತಪಡಿಸಲಾಗದೇ, ಹೊರಹಾಕಲಾಗದೇ ಅಥವಾ ಕ್ಷಮಿಸದೇ ಮನಸ್ಸಿನಲ್ಲಿಯೇ ಇಟ್ಟುಕೊಂಡಿರುತ್ತೇವೆ. ಅಳುವಾಗ ಅಳದೇ, ನಗುವಾಗ ನಗದೇ ಹಾಗೇ ಮನಸ್ಸಿನ ಆಳದಲ್ಲಿರುವ ಈ ತರಹದ ಭಾವನೆಗಳು ಕೆಲವೊಮ್ಮೆ ಬೇರೆ ಬೇರೆ ತರಹದ ಮನೋದೈಹಿಕ ವ್ಯಾಧಿಗಳ (ಮೈಗ್ರೆನ್, ಕೀಲು ನೋವುಗಳು, ಬಿಪಿ, ಶುಗರ್, ಟ್ಯೂಮರ್, ಕ್ಯಾನ್ಸರ್ ಇತ್ಯಾದಿ) ರೂಪದಲ್ಲಿ ಕಾಣಿಸುತ್ತವೆ. ಈ ತರಹದ ಮನಸ್ಸಿನಾಳದಲ್ಲಿ ಹುದುಗಿರುವ ಭಾವನೆಗಳನ್ನು ಹೊರಹಾಕಲು ಈ ಧ್ಯಾನ ಚಿಕಿತ್ಸಾ ಕಾರ್ಯಾಗಾರ ಅನುಕೂಲ ಮಾಡಲಿದೆ.
ಈ ಶಿಬಿರವು ಸಂಪೂರ್ಣವಾಗಿ ವೈಜ್ಞಾನಿಕ, ಪ್ರಾಯೋಗಿಕ ಹಾಗೂ ಪ್ರಾತ್ಯಕ್ಷತೆಗಳಿಂದ ಕೂಡಿದ್ದು, ನಮ್ಮ ಹೃನ್ಮನಾತ್ಮಕ ಶರೀರಗಳಲ್ಲಿಯ ಅಡೆತಡೆಗಳನ್ನು ನಿವಾರಿಸುವ ಮುಖ್ಯಧ್ಯೇಯವನ್ನು ಹೊಂದಿದೆ.
ಈ ಕಾರ್ಯಾಗಾರದಲ್ಲಿ 15 ರಿಂದ 65 ವಯೋಮಾನದ ಸ್ತ್ರೀ/ಪುರುಷಗೆ ಭಾಗವಹಿಸಲು ಅವಕಾಶವಿದೆ.
ಕಾರ್ಯಾಗಾರಕ್ಕೆ ಶುಲ್ಕವಿದೆ ಮತ್ತು ನೊಂದಣಿ ಕಡ್ಡಾಯವಾಗಿದ್ದು, ಮಾಹಿತಿ ಹಾಗೂ ನೋಂದಣಿಗಾಗಿ ಸಂಪರ್ಕಿಸಿ: ಸೌಮ್ಯ ಆರ್ 9742311296
Discussion about this post