ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾರತದಲ್ಲಿ ಅದೆಷ್ಟೋ ಸಾಧನೆಗೈದ ಹೆಣ್ಣು ಮಕ್ಕಳಿದ್ದಾರೆ. ಉದಾಹರಣೆಗೆ ಮದರ್ ತೆರೇಸಾ, ಪಿ.ಟಿ. ಉಷಾ ಇಂತಹ ಹಲವಾರು ಹೆಣ್ಣುಮಕ್ಕಳು. ಈಗಲೂ ಸಹ ಅದೆಷ್ಟೋ ಪ್ರತಿಭೆಗಳು ಸಾಧಿಸುತಿದ್ದರೆ. ಹೆಣ್ಣುಮಕ್ಕಳು ಗಂಡಿನಷ್ಟೆ ಪ್ರಬಲರು ಎಂದು ತೋರಿಸಿಕೊಟ್ಟಿದ್ದಾರೆ.
ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ನಮ್ಮ ನಡುವೆಯೇ ಸಾಧನೆ ಹಾದಿಯಲ್ಲಿ ಪಯಣಿಸುತಿರುವ ಪ್ರತಿಭೆ ಸುಷ್ಮಾ ಎಸ್. ಪೂಜಾರಿ.
1999ರ ಜೂನ್ 18ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಎಂಬ ಪುಟ್ಟದಾದ ಹಳ್ಳಿಯಲ್ಲಿ ಸಂಜೀವ ಪೂಜಾರಿ ಮತ್ತು ಹೇಮಾ ಪೂಜಾರ್ತಿ ಎಂಬ ದಂಪತಿಗೆ ಜನಿಸಿದ ಈಕೆಗೆ ಒಬ್ಬ ಅಣ್ಣನಿದ್ದು, ಆತನ ಹೆಸರು ಸುನಿಲ್ ಎಸ್ ಪೂಜಾರಿ.
ಕಲ್ಯಾದಲ್ಲಿಯೇ ಆಟವಾಡಿ, ನಲಿದಾಡಿ ಬಾಲ್ಯ ಕಳೆದ ಈಕೆ, ಪ್ರಾಥಮಿಕ ವಿದ್ಯಾಭ್ಯಾಸವನ್ನೂ ಸಹ ಇಲ್ಲಿಯೇ ಪೂರೈಸಿದಳು. ಉನ್ನತ ಶಿಕ್ಷಣವನ್ನು ಕಾರ್ಕಳದ ಎಸ್’ವಿಟಿ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವ್ಯಾಸಂಗ ನಡೆಸುತ್ತಿದ್ದಾಳೆ.
ಪ್ರಾಥಮಿಕ ವಿದ್ಯಾಭ್ಯಾಸ ನಡೆಸುತ್ತಿರುವ ವಯಸ್ಸಿನಲ್ಲಿ ಗಂಡಿನ ಬಗ್ಗೆ ಮನಸ್ಸಲ್ಲಿ ಕೆಟ್ಟ ಕೋಪ, ತಪ್ಪು ತಿಳುವಳಿಕೆ ಹೊಂದಿದ್ದ ಈಕೆ, ಎಲ್ಲ ಹುಡುಗರೊಂದಿಗೆ ಬೈದಾಟ, ಜಗಳ ಮಾಡಿಕೊಳ್ಳುತಿದ್ದಳು. ಏನು ಅರಿಯದ ಆ ವಯಸ್ಸಿನಲ್ಲಿ ಅವಳಿಗಿದ್ದ ಆ ಸಿಟ್ಟು ಹೇಳಲಾಗದಷ್ಟು. ಯಾರೊಬ್ಬ ಹುಡುಗ ಅವಳನ್ನು ಮಾತನಾಡಿಸಿದರೆ ಸಾಕು ಅವರೊಂದಿಗೆ ಜಗಳವೇ ಮಾಡುತಿದ್ದಳು.
ಅವಳ ಮನಸ್ಸಲ್ಲಿ ಹುಡುಗರು ಕೆಟ್ಟದಾಗಿ ವರ್ತಿಸುವರು, ಕೆಟ್ಟ ಭಾವನೆಯಿಂದ ನೋಡುವರು ಅನ್ನೋ ಕಲ್ಪನೆ ಮತ್ತು ಭಯ. ಈ ಕಲ್ಪನೆ ಈ ಹುಡುಗಿಯಲ್ಲಿ ಬರಲು ನಮ್ಮ ಈ ಸಮಾಜದ ಹಲವು ಕೆಟ್ಟ ಘಟನೆಗಳೇ ಕಾರಣ. ಅಂತಹ ಎಳೆಯ ವಯಸ್ಸಿಗೆ ಇಂತಹ ಕಲ್ಪನೆಯಿಂದ ಅವಳು ಮಾತಾನಾಡುವುದೇ ಕಡಿಮೆ ಮಾಡಿದ್ದಳು.
ಇನ್ನು, ಈಕೆ ಬೆಳೆಯುತ್ತಾ ಹೋದಂತೆ ಅವಳಿಗೆಯೇ ಅರಿವಾಗತೊಡಗಿತು. ನನ್ನ ತಂದೆ ಸಹ ಒಬ್ಬ ಗಂಡಸು ಅವರು ಯಾಕೆ ಕೆಟ್ಟವರಾಗಿಲ್ಲ. ಯಾಕೆ ನಾನು ಎಲ್ಲಾ ಹುಡುಗರನ್ನು ಇಷ್ಟು ದ್ವೇಷಿಸುತ್ತಿರುವೆ. ಎಲ್ಲರೂ ಒಂದೇ ರೀತಿ ಇರಲ್ವಲ್ಲ ಎನ್ನುವ ನಾನಾ ಯೋಚನೆಗೆ ಒಳಗಾದ ಇವಳು ಕಡೆಗೂ ಒಂದು ನಿರ್ಧಾರಕ್ಕೆ ಬಂದಳು. ಎಲ್ಲಾ ಹುಡುಗರನ್ನು ಅಣ್ಣಂದಿರು ಎಂದು ಭಾವಿಸಿ ಎಲ್ಲರೊಂದಿಗೆ ಖುಷಿಯಿಂದ ಬದುಕಲು ಕಲಿತಳು.
ಹೆಣ್ಣೆಂದರೆ ಗೌರವ ಬರಬೇಕು ಅಲ್ಲವೇ. ಆದರೆ ಇಂದಿನ ಆಧುನಿಕ ಜಗತ್ತಿನ ಯುವತಿಯರನ್ನು ಕಂಡರೆ ಬೇರೆ ಭಾವನೆಗಳೇ ಬರುವುದೇ ಹೆಚ್ಚು. ಇಂದಿನ ಯುವತಿಯರು ತುಂಡು ಹರಿದ ಬಟ್ಟೆಗಳನ್ನು ಮೈ ಕಾಣುವಂತೆ ಧರಿಸುತ್ತಾರೆ. ಮೇಕಪ್ ಮಾಡಿ ಯೌವನವನ್ನು ಬೇಗನೆ ಕಳೆದುಕೊಳ್ಳುತಿದ್ದಾರೆ. ಆದರೆ ನಮ್ಮ ಯುವತಿ ಸುಷ್ಮಾಳಾ ಉಡುಗೆ-ತೊಡುಗೆ ನೋಡಿದರೆ ಗೌರವ ಕೊಟ್ಟು ಕೈ ಮುಗಿಯಬೇಕಿನಿಸುತ್ತದೆ. ಸರಳವಾಗಿ ಸೀರೆ, ಚೂಡಿದಾರ ಧರಿಸುವ ಈಕೆ ದೇವತೆಯಂತೆ ಕಾಣುವಳು.
ಹೆಣ್ಣೆಂದರೆ ತಲೆತಗ್ಗಿಸಿ ನಡೆಯುವುದು ಭಾರತದ ಹಳೆಯ ಸಂಸ್ಕೃತಿ ಅಲ್ಲವೇ ಮತ್ತು ಇದು ಹೆಣ್ಣಿನ ರಕ್ಷಣೆವು ಸಹ. ಅದೇ ರೀತಿ ನಮ್ಮ ಸುಷ್ಮಾ ಕಾಲೇಜಿನಿಂದ ಮನೆಗೆ ಹೋಗುವಾಗ ಅಥವಾ ಬೇರೆಲ್ಲೆ ಹೋಗಲಿ ತಲೆತಗ್ಗಿಸಿ ಹೋಗುವ ಭಾರತ ನಾರಿ. ತನ್ನ ಮನೆಯರೊಂದಿಗೆ ಮನೆವಳಂತೆ ಇರುವುದಲ್ಲದೆ ಸ್ನೇಹಿತೆಯಂತೆ ಜಗಳ, ಆಟ, ಪಾಠ, ನಲಿದಾಟವಾಡುತ್ತ ತನ್ನ ಕುಟುಂಬದವರೊಂದಿಗೆ ಸಂತೋಷದ ಜೀವನ ನಡೆಸುತ್ತಿರುವಳು.
ಇವಳ ಸಾಧನೆ ಬಗ್ಗೆ ಹೇಳಲು ಪದಗಳೇ ಸಾಲದು. ಅದ್ಭುತ ಮಾತುಗಾರಿಕೆ ಉಳ್ಳ ಈಕೆ ಒಮ್ಮೆ ಮಾತನಾಡಲು ಪ್ರಾರಂಭಿಸಿದರೆ ನಿಲ್ಲಿಸಲಾರಳು. ಇವಳೊಂದಿಗೆ ಮಾತಿನ ಪೈಪೋಟಿ ಕೊಡಲು ಬಹಳ ಕಷ್ಟ. ಇಷ್ಟೆಯಾ? ಇಲ್ಲಾ, ಇವಳು ಯುವ ಬರಹಗಾರ್ತಿ ಕೂಡ ಹೌದು. ಅದೆಷ್ಟೋ ಲೇಖನ, ಸಾಹಿತ್ಯ, ಕಥೆಗಳನ್ನು ಬರೆದ್ದಿದ್ದು, ಅದೆಷ್ಟೋ ಬಹುಮಾನ, ಪ್ರಶಸ್ತಿ, ಸನ್ಮಾನಗಳನ್ನು ಪಡೆದುಕೊಂಡಿದ್ದಾಳೆ.
ಇನ್ನು ಪನಿ ಪನಿ ಎನ್ನುವ ಆಲ್ಬಂ ಸಾಂಗ್’ಗೆ ಸಾಹಿತ್ಯ ಸಹ ನೀಡಿ ಉತ್ತಮ ಪ್ರಶಂಸೆ ಗಳಿಸಿದ್ದಾಳೆ. ಇಷ್ಟೇ ಅಲ್ಲದೆ ಇವಳು ಅದ್ಭುತ ನಟನಾಕಾರಿಯು ಕೂಡಾ ಹೌದು. ನಟನೆಯೊಂದಿಗೆ ನೃತ್ಯದಲ್ಲೂ ಸಹ ಸಿದ್ದಿಯನ್ನು ಹೊಂದಿರುವ ಈಕೆ ಬಹುಮುಖ ಪ್ರತಿಭೆಯೂ ಇವಳಿಗಿದೆ. ತನ್ನ ತಾಯಿಗೆ ಸಹಾಯ ಮಾಡುದರಲ್ಲಿ ಇರುವ ಖುಷಿ ಎಲ್ಲಿಲ್ಲದ. ತನ್ನ ತಾಯಿ ಬೀಡಿ ಕಟ್ಟುದನ್ನು ಕಂಡ ಈಕೆ, ತಾನು ಸಹ ಬೀಡಿ ಕಟ್ಟುದನ್ನು ಕಲಿತು, ಈಗ ತನ್ನ ತಾಯಿಗೆ ಸಹಾಯವಾಗಲಿ ಎಂದು ತಾನು ಬಿಡುವಿನ ಸಮಯದಲ್ಲಿ ಅಲ್ಪ-ಸ್ವಲ್ಪ ಬೀಡಿ ಕಟ್ಟಿ ಅದನ್ನು ಬೀಡಿಯ ಕಚೇರಿಗೆ ಹೋಗಿ ಕೊಟ್ಟು ಬರುತ್ತಾಳೆ.
ಇದಲ್ಲದೆ ಹೊಲಿಗೆಯನ್ನೂ ಸಹ ಕಲಿತ ಈಕೆ ತನ್ನ ಮನೆಯಲ್ಲಿ ತನ್ನ ಮತ್ತು ತನ್ನ ಮನೆಯವರ ಬಟ್ಟೆ ಸಿದ್ಧಪಡಿಸುತ್ತಾಳೆ. ಕಷ್ಟದಲ್ಲಿರುವ ಜನರ ಸಹಾಯ ಮಾಡುವ ಹೃದಯಶೀಲ ಹೆಣ್ಣು. ಬೇಜಾರು, ದುಃಖ ಎಂದು ಇವಳಲ್ಲಿ ಹೇಳಿಕೊಂಡರೆ ಸಣ್ಣ ಮಗುವಿಗೆ ತಾಯಿ ಆರೈಕೆ ಮಾಡುವಂತೆ ಸಮಾಧಾನ ಮಾಡುತ್ತಾಳೆ.
ಇನ್ನು ಅದೆಷ್ಟೋ ಕವನ, ಸಾಹಿತ್ಯ, ಲೇಖನ ಬರೆದು ತನ್ನಲ್ಲಿಯೇ ಇಟ್ಟುಕೊಂಡಿದ್ದಾಳೆ. ಒಂದು ರೋಮಾಂಚನಕಾರಿ ನಾಟಕ ಕಥೆಯನ್ನು ಬರೆದಿದ್ದಾಳೆ. ಇದು ಎಲ್ಲೂ ಹೊರಬರಲಿಲ್ಲ ಅನ್ನೋದು ಬೇಸರದ ಸಂಗತಿ. ಈ ಪ್ರತಿಭಾವಂತ ಯುವತಿಯ ಪ್ರತಿಭೆ ಹೊರ ಜಗತ್ತಿಗೆ ತಿಳಿಯಬೇಕು.
ಈಗಿನ ಕಾಲದ ಯುವತಿಯರು ಫೇಸ್’ಬುಕ್, ವಾಟ್ಸಪ್ ಇಂತಹ ಸಾಮಾಜಿಕ ಮಾಧ್ಯಮದಲ್ಲಿ ಕುಳಿತು ಕಾಲಹರಣ ಮಾಡುತ್ತಿರುವ ಸಂದರ್ಭದಲ್ಲಿ ಸುಷ್ಮಾ ತಾನು ಏನನ್ನಾದರು ಸಾಧಿಸಿ, ಜಗತ್ತಿಗೆ ಮಾದರಿಯಾಗಬೇಕೆಂದಿದ್ದಾಳೆ. ಇಂತಹ ಸಣ್ಣ ಹಳ್ಳಿಯಲ್ಲಿರುವ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಒಂದು ವೇದಿಕೆ ಕಲ್ಪಿಸಿ, ಅವರನ್ನು ಈ ಜಗತ್ತಿಗೆ ಪರಿಚಯಿಸಬೇಕಾದ ಕೆಲಸವನ್ನು ನಾವು ಮಾಡಬೇಕು.
Get in Touch With Us info@kalpa.news Whatsapp: 9481252093
Discussion about this post