ಕಲ್ಪ ಮೀಡಿಯಾ ಹೌಸ್ | ತ್ರಿಶೂರ್ |
ಹಿರಿಯ ನಟಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ Khushbu Sunder ಅವರಿಗೆ ಕೇರಳದ ದೇವಾಲಯವೊಂದರಲ್ಲಿ ನಾರಿ ಪೂಜೆ ನಡೆಸಲಾಗಿದ್ದು, ಇದು ಪರ ಹಾಗೂ ವಿರೋಧಕ್ಕೆ ಕಾರಣವಾಗಿದೆ.
ತ್ರಿಶೂರ್’ನಲ್ಲಿರುವ ವಿಷ್ಣುಮಾಯ ದೇವಾಲಯದಲ್ಲಿ Vishnumaya Temple in Thrishur ಸುಹಾಸಿನಿ ಪೂಜೆ ಎಂದು ಕರೆಯಲಾಗುವ ನಾರಿ ಪೂಜೆಯನ್ನು Naari Pooja ಖುಷ್ಬೂ ಅವರಿಗೆ ನಡೆಸಲಾಗಿದೆ.
ಏನಿದು ನಾರಿ ಪೂಜೆ?
ತ್ರಿಶೂರ್’ನಲ್ಲಿರುವ ವಿಷ್ಣುಮಾಯ ದೇವಾಲಯದ ಆಚರಣೆಯ ಪ್ರಕಾರ ಪ್ರತಿ ವರ್ಷ ಓರ್ವ ಮಹಿಳೆಯನ್ನು ಆಹ್ವಾನಿಸಿ, ಆಕೆಯನ್ನು ದೇವತೆಯ ಸಮಾನದಲ್ಲಿ ಶಾಸ್ತ್ರೋಕ್ತವಾಗಿ ಪಾದಪೂಜೆ ಮಾಡಲಾಗುತ್ತದೆ.
ಅರ್ಚಕರುಗಳು ಮಹಿಳೆಯನ್ನು ದೇವತೆಗೆ ಹೋಲಿಸಿ ಪೂಜೆ ಮಾಡುವುದು ಇಲ್ಲಿ ವಿಶೇಷವಾಗಿದ್ದು, ಈ ವೇಳೆ ಅರ್ಚಕರುಗಳು ಖುಷ್ಬೂ ಅವರ ಪಾದಪೂಜೆ ಮಾಡಿ, ಮಾಲೆ ಹಾಕಿ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದ್ದಾರೆ.
ಈ ವಿಷಯವನ್ನು ಖುಷ್ಬೂ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಷ್ಣುಮಾಯಾ ದೇವಸ್ಥಾನದವರು ನಾರಿಪೂಜೆಗೆ ನನ್ನನ್ನು ಆಮಂತ್ರಿಸಿದ್ದು ನಿಜಕ್ಕೂ ನನ್ನ ಅದೃಷ್ಠ. ಇದಕ್ಕಾಗಿ ನಾನು ವಿನೀತಳಾಗಿದ್ದೇನೆ. ಇಂತಹ ಗೌರವವನ್ನು ನೀಡಿದ್ದಕ್ಕೆ ದೇವಸ್ಥಾನಕ್ಕೆ ನಾನು ನಮಿಸುವೆ ಎಂದಿದ್ದಾರೆ.
Also read: ಶಿವಮೊಗ್ಗದ ರಾಗಿಗುಡ್ಡ ಗಲಭೆಗೆ ಸಿದ್ದರಾಮಯ್ಯನವರೇ ಕಾರಣ: ಸಂಸದ ಪ್ರತಾಪ್ ಸಿಂಹ ಆರೋಪ
ಕೆಟ್ಟದನ್ನು ಅಳಿಸಿ ಒಳ್ಳೆಯದನ್ನು ಪಸರಿಸಲು ಹಾಗೂ ಶಾಂತಿ ನೆಲೆಸಲು ನಾನು ನಿರಂತರವಾಗಿ ಶ್ರಮಿಸುವೆ. ನಾರಿಪೂಜೆಯಿಂದ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ. ಸ್ವರ್ಗದಿಂದಲೇ ದೇವತೆ ಬಂದು ಪಾದಪೂಜೆ ಮಾಡಿಸಿಕೊಳ್ಳುತ್ತಾಳೆ ಎಂದು ನಾರಿ ಪೂಜೆ ಬಗೆಗೆ ದೇವಸ್ಥಾನದ ಅರ್ಚಕರುಗಳ ನಂಬುಗೆಯಾಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post