ಕಲ್ಪ ಮೀಡಿಯಾ ಹೌಸ್ | ತುಮಕೂರು |
ಭಗವದ್ಗೀತೆ ಪುಸ್ತಕ ಹೋಲುವ ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕಗಳ ಮಾರಾಟ ಜಿಲ್ಲೆಯ ಹಲವೆಡೆ ಹೆಚ್ಚಾಗಿದ್ದು, ಭಗವದ್ಗೀತೆ ಪುಸ್ತಕ ಹಂಚಿಕೆ ನೆಪದಲ್ಲಿ ಮಾಡಲು ಪ್ರಯತ್ನಿಸಲಾಗತ್ತಿದ್ದು, ಪುಸ್ತಕಗಳನ್ನ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವಂತೆ ಬಜರಂಗದಳ ಆಗ್ರಹಿಸಿದೆ.
98 ರೂಪಾಯಿ ದರದ ಪುಸ್ತಕವನ್ನು ಕೇವಲ 30ರೂಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕೆಲವು ಕಡೆ ಉಚಿತವಾಗಿ ಪುಸ್ತಕ ಕೊಟ್ಟು ಮತಾಂತರಕ್ಕೆ ಸಂಚು ಮಾಡಲಾಗುತ್ತಿದೆ.
ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಹೋಲುವ ಈ ಪುಸ್ತಕದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ತುಮಕೂರಿನ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಪುಸ್ತಕಗಳನ್ನು ಜನರಿಗೆ ಹಂಚಲಾಗುತ್ತಿದೆ ಎನ್ನಲಾಗಿದೆ.
Also read: ವಿಶೇಷ ಚೇತನ ಯುವಕನಿಗೆ 1 ಲಕ್ಷ ರೂ. ಮೌಲ್ಯದ ಟ್ರೈ ಸೈಕಲ್ ವಿತರಣೆ
ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕದಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ದೇವರುಗಳ ಬಗ್ಗೆ ಅವಹೇಳನಕಾರಿ ಬರಹವಿದೆ. ಹಿಂದೂ ಧರ್ಮದ ಬಗ್ಗೆ ಜನರಿಗೆ ಕೆಟ್ಟ ಮನಸ್ಥಿತಿ ಬರುವಂತೆ ಬರಹ ಬರೆದು ಪುಸ್ತಕ ಹಂಚಿಕೆ ಮಾಡಿದ್ದಾರೆ. ಹೊರರಾಜ್ಯದಿಂದ ತುಮಕೂರು ನಗರಕ್ಕೆ ಬಂದು ಪುಸ್ತಕಗಳ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.
ಪುಸ್ತಕಗಳು ನವದೆಹಲಿಯ ಕಬೀರ್ ಪ್ರಿಂಟರ್ಸ್ ಮುದ್ರಣಾಲಯದಿಂದ ಮುದ್ರಿತಾವಾಗಿರುವ ಪುಸ್ತಕಗಳಾಗಿವೆ. ಹಿಂದೂಗಳು ಇರುವ ಏರಿಯಾಗಳಿಗೆ ಹೋಗಿ ಇಡೀ ತುಮಕೂರಿನಲ್ಲಿ ಪುಸ್ತಕಗಳ ಹಂಚಿಕೆಯಾಗುತ್ತಿದೆ. ಸದ್ಯ ಈ ಬಗ್ಗೆ ಭಜರಂಗದಳ ಕಾರ್ಯಕರ್ತರು ಪುಸ್ತಕ ಮಾರಾಟ ಮಾಡ್ತಿದ್ದವರ ವಿರುದ್ಧ ದೂರು ದಾಖಲಿಸಿದ್ದಾರೆ.
ತುಮಕೂರು ನಗರ ಹಾಗೂ ಕೋರಾ ಪೊಲೀಸ್ ಠಾಣೆ ಸೇರಿದಂತೆ ತುಮಕೂರಿನ ಎರಡು ಠಾಣೆಗಳಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಹಾಗೂ ಭಜರಂಗದಳದ ಕಾರ್ಯಕರ್ತರು ತುಮಕೂರು ಎಸ್ಪಿಗೆ ದೂರು ನೀಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post