ತೀರ್ಥಹಳ್ಳಿ: ಸಿನಿಮಿಯಾ ರೀತಿಯಲ್ಲಿ ಯುವತಿಯೋರ್ವಳನ್ನು ಅಪಹರಿಸಲು ಯತ್ನಿಸಿದ ಯುವಕನೊಬ್ಬ ಆಕೆಯನ್ನು ದಾರಿಯಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.
ಕುರುವಳ್ಳಿಯ ನಾಗರಾಜ್ ಎಂಬ ಯುವಕ ಯಡೂರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆಯ ಅವನ ಪ್ರೀತಿಯನ್ನು ನಿರಾಕರಿಸಿದ್ದಳು. ಹೀಗಾಗಿ, ಈ ಕೃತ್ಯಕ್ಕೆ ಯುವಕ ಕೈ ಹಾಕಿದ್ದ ಎನ್ನಲಾಗಿದೆ.
ಕಾರಿನ ನಂಬರ್ ಪ್ಲೇಟ್ ತೆಗೆದ ಯುವಕ ತನ್ನ ಸ್ನೇಹಿತರೊಂದಿಗೆ ಸಂಚು ರೂಪಿಸಿ, ಯುವತಿಗೆ ಲಾಂಗ್ ತೋರಿಸಿ ಅಪಹರಿಸಿದ್ದಾನೆ. ಆದರೆ, ಈ ವಿಷಯ ತಿಳಿದ ಆಕೆಯ ಕುಟುಂಬಸ್ಥರು ಹಿಂಬಾಲಿಸಿದ ಹಿನ್ನೆಲೆಯಲ್ಲಿ ಭಯಗೊಂಡ ಯುವಕರು ಆಕೆಯನ್ನು ಅರ್ಧದಾರಿಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post