ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೀರ್ಥಹಳ್ಳಿ: ಪಟ್ಟಣಕ್ಕೆ ಆಗಮಿಸಿದ ಗೌಡಪಾದಾಚಾರ್ಯ ಕವಳೇ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶಿವಾನಂದ ಸರಸ್ವತಿ ಮಹಾರಾಜ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯ ಸಮಾಜದ ಕುರುವಳ್ಳಿಯ ನಿವೇಶನಕ್ಕೆ ಸಮಾಜದ ಅಭಿಲಾಷೆಯಂತೆ ತಮ್ಮ ಇಪ್ಪತ್ತೈದನೆಯ ಪಟ್ಟಾಭಿಷೇಕದ ರಜತ ಮಹೋತ್ಸವದ ಸಂದರ್ಭದಲ್ಲಿ ಶ್ರೀಗಳು ಆಗಮಿಸಿದ್ದಾರೆ.
ಪಟ್ಟಣದ ಕೊಪ್ಪ ಸರ್ಕಲ್‌ನಿಂದ ಶೋಭಾಯಾತ್ರೆಯಲ್ಲಿ ಪೂರ್ಣಕುಂಭದೊಂದಿಗೆ ಸಮಾಜ ಭಾಂದವರು ಮಂಗಳವಾದ್ಯ ಹಾಗೂ ಎಣ್ಣೆಹೊಳೆಯ ಆದಿಶಕ್ತಿ ಮಹಾಲಕ್ಷ್ಮಿ ಮಹಿಳಾ ಕುಣಿತಾ ಮತ್ತು ಭಜನಾ ಮಂಡಳಿ ಹಾಗೂ ಚಂಡೆ ಬಳಗದವರಿಂದ ಚಂಡೆ ವಾದನದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಿದರು.
ಶ್ರೀಗಳು ಕೊಪ್ಪ ರಸ್ತೆಯಲ್ಲಿ ಬೆಳ್ಳಿರಥ ಏರುತ್ತಿದ್ದಂತೆಯೇ ಸಮುದಾಯದವರ ಜಯಘೋಷ ಮುಗಿಲುಮುಟ್ಟುವಂತಿತ್ತು. ಆರ್’ಎಸ್’ಬಿ ಸಮುದಾಯವದವರ ಶಿಸ್ತು ಮತ್ತು ಒಗ್ಗಟ್ಟಿನ ಕುರಿತು ಸಾರ್ವಜನಿಕರ ಸಂತಸ ವ್ಯಕ್ತಪಡಿಸಿದರು.
ಸಮುದಾಯದ ಮಹಿಳೆಯರ ಮತ್ತು ಪುರುಷರು ಸ್ವಾಮೀಜಿಗೆ ಸ್ವಾಗತ ಕೋರಿದ ಶಿಸ್ತಿನ ಮೆರವಣಿಗೆ ಬರುತ್ತಿದ್ದಂತೆ ಎಲ್ಲೆಡೆ ಟ್ರಾಫಿಕ್ ಜಾಮ್ ಆದರೂ ಸಹಿತ ಪೋಲೀಸರ ಮುತುವರ್ಜಿಯಿಂದ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಸುಲಲಿತವಾಗಿ ಚಲಿಸುವಂತಾಯಿತು.
ಮೆರವಣಿಗೆಯಲ್ಲಿ ಮಹಿಳೆಯರ ಚಂಡೆ ವಾದನ ಮೆರುಗು ನೀಡಿದರೆ, ಸರ್ಕಾರಿ ಪ್ರಾಥಮಿಕ ಶಾಲೆ ಕುರುವಳ್ಳಿಯ ಮಕ್ಕಳು ಕೈಮುಗಿದು ಸ್ವಾಮಿಗಳಿಗೆ ನಮಸ್ಕರಿಸಿದ ಶಿಸ್ತಿನ ವರ್ತನೆಯನ್ನು ನೋಡಿ ಸ್ವಾಮೀಜಿಯವರು ಸಂತಸಪಟ್ಟರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಮಳಲ್‌ಗದ್ದೆ ನಾಗರಾಜ್ ಬೋರ್ಕರ್ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡರು.
ವರದಿ: ಶ್ರೀಕಾಂತ್ ವಿ. ನಾಯಕ್, ಪತ್ರಕರ್ತರು, ತೀರ್ಥಹಳ್ಳಿ
Get in Touch With Us info@kalpa.news Whatsapp: 9481252093
Discussion about this post