ಕಲ್ಪ ಮೀಡಿಯಾ ಹೌಸ್ | ಟೊಕಿಯೋ |
ಜಪಾನ್‌ನ Japan ಈಶಾನ್ಯ ಮತ್ತು ಉತ್ತರ ಭಾಗದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ Earthquake ಸಂಭವಿಸಿದೆ. ಭೂಕಂಪದ ಪರಿಣಾಮ ಇವಾಟೆ ಪ್ರಿಫೆಕ್ಚರ್‌ನ ಕುಜಿ ಬಂದರಿನಲ್ಲಿ 80 ಸೆಂ.ಮೀ. ಸುನಾಮಿ Tsunami ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ಸಂಜೆ 4:53ರ ವೇಳೆಗೆ ಈಶಾನ್ಯ ಕರಾವಳಿ ಭಾಗದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಪ್ರದೇಶದಿಂದ ಸುಮಾರು ನೂರಾರು ಕಿ.ಮೀ ದೂರದಲ್ಲಿರುವ ಟೊಕಿಯೋ ನಗರದ ಬೃಹತ್ ಕಟ್ಟಡಗಳು ಅಲುಗಾಡಿವೆ. ಇದು ಸುನಾಮಿ ಅಪ್ಪಳಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕಂಪನದ ನಂತರ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಇವಾಟೆ, ಅಮೋರಿ ಮತ್ತು ಹೊಕ್ಕೈಡೋ ಪ್ರಾಂತ್ಯಗಳ ಕೆಲವು ಕರಾವಳಿ ಭಾಗಗಳಿಗೆ ಮೂರು ಮೀಟರ್ (10 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















