ನವದೆಹಲಿ: ಎನ್ ಆರ್ ಸಿ ಕರಡು ರೂಪ ಈಗಾಗಲೇ ದೇಶದಲ್ಲಿ ವಿವಾದವನ್ನು ಸೃಷ್ಠಿಸಿದ್ದು, ಇದರ ಬೆನ್ನಲ್ಲೇ ಅಕ್ರಮವಾಗಿ ದೇಶವನ್ನು ಪ್ರವೇಶಿಸುವ ಬಾಂಗ್ಲಾ ದೇಶಿಗರನ್ನು ಗಡಿಯಲ್ಲೇ ತಡೆಗಟ್ಟುವ ಕಾರ್ಯ ಕಟ್ಟುನಿಟ್ಟಾಗಿ ಆರಂಭವಾಗಿದೆ.
ಅಸ್ಸಾಂನ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಕರಡು ಸಿದ್ದವಾದ ಬೆನ್ನಲ್ಲೇ ಮೇಘಾಲಯ, ನಾಗಾಲ್ಯಾಂಡ್ ಗಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಅಕ್ರಮ ವಲಸಿಗರಿಗೆ ತಡೆ ಹಾಕಲಾಗುತ್ತಿದೆ.
ಗಡಿ ಪ್ರದೇಶ ಹಾಗೂ ಪ್ರವೇಶ ದ್ವಾರಗಳಲ್ಲಿ ಬಿಗಿ ತಪಾಸಣೆ ಆರಂಭಿಸಿದ್ದು, ಬಾಂಗ್ಲಾದಿಂದ ಆಗಮಿಸುವ ಪ್ರತಿ ವ್ಯಕ್ತಿಯನ್ನೂ ಪರಿಶೀಲನೆ ಮಾಡಲಾಗುತ್ತಿದೆ.
ನಾಗಾಲ್ಯಾಂಡ್ ಮೇಘಾಲಯಕ್ಕೆ ತೆರಳಲು ಈಗಾಗಲೇ ಅಗತ್ಯ ಇರುವ ಇನ್ನರ್ ಲೈನ್ ಪರ್ಮಿಟ್ ನ್ನು ಹೊರತುಪಡಿಸಿ ಈಗ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ದಾಖಲೆಗಳನ್ನು ನೀಡಿದರಷ್ಟೇ ರಾಜ್ಯಗಳಿಗೆ ಪ್ರವೇಶ ನೀಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ಇಲ್ಲದೇ ಹೊರಟಿದ್ದ ಹಲವು ಜನರು ಪೊಲೀಸರಿಗೆ ಚೆಕ್ ಪಾಯಿಂಟ್ ಗಳಲ್ಲಿ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದು, ಅವರನ್ನು ಯಾವುದೇ ಮುಲಾಜಿಲ್ಲದೆ ವಾಪಸ್ ಕಳಿಸಲಾಗಿದೆ.
Discussion about this post