ಶಿವಮೊಗ್ಗ: ನಗರದ ಜನಸಂಖ್ಯೆ ಏರಿದಂತೆಲ್ಲ ವಾಹನಗಳ ಸಂಖ್ಯೆಗಳೂ ಯದ್ವಾತದ್ವಾ ಹೆಚ್ಚುತ್ತಿದೆ. ಅವಶ್ಯಕತೆ ಇರಲಿ ಇಲ್ಲದಿರಲಿ ಬೈಕು, ಕಾರುಗಳ ಹುಚ್ಚು ಆಸೆ, ಒಣಪ್ರತಿಷ್ಟೆಗಳು ವಾಹನ ಸಂಖ್ಯೆಗಳನ್ನು ಇನ್ನಷ್ಟು ಹೆಚ್ಚಿಸಿವೆ.
ಇವುಗಳಿಂದ ನೇರ ಸಮಸ್ಯೆ ತಟ್ಟುವುದು ಟ್ರಾಫಿಕ್ ವ್ಯವಸ್ಥೆಗೆ. ಜೊತೆಗೆ ಮುಖ್ಯವಾಗಿ ವಿದ್ಯಾವಂತರು ಎನಿಸಿಕೊಂಡವರಿಂದಲೇ ಟ್ರಾಫಿಕ್ ನಿಯಮ ಉಲ್ಲಂಘನೆ ನಡೆಯುತ್ತಿದೆ.
ಆದರೆ ಇಲಾಖೆಯಲ್ಲಿ ಇವುಗಳನ್ನು ನಿಯಂತ್ರಿಸಲು ಇರುವ ಸಿಬ್ಬಂದಿಗಳ ಸಂಖ್ಯೆಯು ಜನಸಂಖ್ಯೆ, ವಾಹನ ಸಂಖ್ಯೆಗಳಿಗೆ ಅನುಗುಣವಾಗಿ ಇಲ್ಲವಾಗಿವೆ. ಅದಕ್ಕಾಗಿ ಇಲಾಖೆ ಹೋಂಗಾರ್ಡ್ ಸೇವೆಯನ್ನು ಬಳಸಿಕೊಳ್ಳುತ್ತಿದೆ.
ಆದರೆ ಇಲ್ಲಿಯೂ ಕೆಲವೊಂದು ಕೊರತೆ ಉಂಟಾಗುತ್ತದೆ. ಸಂಪೂರ್ಣ ಖಾಕಿ ಉಡುಪಿನಲ್ಲಿರುವ ಹೋಂಗಾರ್ಡ್ ಸಿಬ್ಬಂದಿಗಳ ಮಾತು, ಸೂಚನೆಗಳನ್ನು ವಾಹನ ಸಂಚಾರರು ಸಾಮಾನ್ಯವಾಗಿ ನಿರ್ಲಕ್ಷ್ಯ ವಹಿಸುತ್ತಾರೆ.
ಇದನ್ನು ಗಮನಿಸಿದ ಪೊಲೀಸ್ ಇಲಾಖೆ ಟ್ರಾಫಿಕ್ ನಿಯಂತ್ರಣ ಕರ್ತವ್ಯದಲ್ಲಿರುವ ಹೋಂಗಾರ್ಡ್ ಗಳಿಗೆ ಟ್ರಾಫಿಕ್ ಸಿಬ್ಬಂದಿಗಳ ಡ್ರೆಸ್ ಕೋಡನ್ನೇ ನೀಡಿದೆ.
ಜೊತೆಗೆ ನಿಯಮ ಉಲ್ಲಂಘಿಸುವವರ ಫೋಟೋಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದು ವಾಹನ ಮಾಲೀಕರ ಮನೆ ವಿಳಾಸಕ್ಕೇ ದಂಡ ಪಾವತಿ ನೋಟೀಸ್ ನೀಡುತ್ತಿದೆ.
ವ್ಯವಸ್ಥೆಗೊಂದು ಸ್ಮಾರ್ಟ್ ನೆಸ್ ನೀಡಿದ ಇಲಾಖೆಯ ಕರ್ತವ್ಯದಲ್ಲಿರುವ ಹೋಂಗಾರ್ಡ್ ಗಳು ತಮ್ಮ ಹೊಸ ಉಡುಪಿನೊಂದಿಗೆ ಎಷ್ಟು ಸ್ಮಾರ್ಟ್ ಆಗಿ ಕಾಣುತ್ತಿದ್ದಾರಲ್ಲವೇ…..
ಇಂತಹ ವ್ಯವಸ್ಥೆಯನ್ನು ಜಾರಿಗೆ ತಂದ ದಕ್ಷ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರಿಗೊಂದು ಅಭಿನಂದನೆ ಹೇಳೋಣ…
-ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ
Discussion about this post