ಕಲ್ಪ ಮೀಡಿಯಾ ಹೌಸ್ | ಟ್ರಿನಿಡಾಡ್ |
ಟಿ 20 ವಿಶ್ವಕಪ್ #T20 World Cup ಸೆಮಿಫೈನಲ್ ಪಂದ್ಯದಲ್ಲಿ #Semi-Final ದಕ್ಷಿಣ ಆಫ್ರಿಕಾ ತಂಡವು ಆಫ್ಘಾನಿಸ್ತಾನ #Afghanistan ವಿರುದ್ಧ 9 ವಿಕೇಟ್’ಗಳ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ಸ್’ಗೆ ಲಗ್ಗೆ ಇಟ್ಟಿದೆ.
ಈ ಹೆಜ್ಜೆಯ ಮೂಲಕ ಟಿ 20 ವಿಶ್ವಪಕ್’ನಲ್ಲಿ ದ.ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ಸ್ #Finals ಪ್ರವೇಶಿಸಿದೆ.
ಬ್ರಯನ್ ಲಾರಾ ಅಕಾಡೆಮಿ ಕ್ರೀಡಾಂಗಣದಲ್ಲಿ #Brianlara Academy Stadium ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 11.5 ಓವರ್’ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 56 ರನ್ ಸೇರಿಸಿದೆ.
Also read: ಅಯೋಧ್ಯೆಯಲ್ಲಿ 650 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ | ಯಾರಿದರ ನಿರ್ಮಾತೃ? ಏನಿದು ಐತಿಹಾಸಿಕ ಹೆಜ್ಜೆ?
ಅಲ್ಪಮೊತ್ತದ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 8.5 ಓವರ್’ನಲ್ಲೇ ಒಂದು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಇಬ್ರಾಹಿಂ ಜದ್ರಾನ್ 2, ಗುಲ್ಬದಿನ್ ನಾಯಬ್ 9, ನಂಗೆಯಲಿಯಾ ಖರೋಟೆ 2, ಕರೀಂ ಜನತ್, ರಶೀದ್ ಖಾನ್ ತಲಾ 8, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ ತಲಾ 2 ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಉಳಿದಂತೆ ರಹಮಾನುಲ್ಲಾ ಗುರ್ಬಾಜ್, ನೂರ್ ಅಹ್ಮದ್ ಶೂನ್ಯ ಸುತ್ತಿದರು.
ಆಫ್ರಿಕಾ ಪರ ಬೌಲರ್’ಗಳು ಮಿಂಚಿದರು. ಮಾರ್ಕೊ ಜಾನ್ಸೆನ್ ಹಾಗೂ ತಬ್ರೈಜ್ ಶಮ್ಸಿ ತಲಾ 3 ವಿಕೆಟ್ ಕಬಳಿಸಿ ಖಾನ್ ಪಡೆಯ ಬೆವರಿಳಿಸಿದರು. ಕಗಿಸೊ ರಬಾಡ ಹಾಗೂ ಅನ್ರಿಚ್ ನಾಟ್ಜೆರ್ ತಲಾ 2 ವಿಕೆಟ್ ಕಿತ್ತರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















