ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Trump in India
ಅಮೆರಿಕಾ ಅಧ್ಯಕ್ಷರು 24 Feb ಭಾರತದ ನೆಲಕ್ಕೆ ಬರಲಿದ್ದಾರೆ. ಹಿಂದಿನ ಭಾರತದ UPA ಸರಕಾರವು ಮೋದಿಯವರನ್ನು ಎಷ್ಟು ಹೀನಸ್ಥಿತಿಯಲ್ಲಿ ನೋಡಿತ್ತೋ, ಇಂದು ಬೆಪ್ಪುತಕ್ಕಡಿಗಳಂತೆ ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಆಯಿತು. ತಲೆಗೆ ಸುರಿದ ನೀರು ಕಾಲಿಗೆ ಬರಲೇಬೇಕು ಎಂಬ ಗಾದೆಯ ಮಾತಿನಂತಾಗಿದೆ.
ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ಆಯ್ಕೆಯಾದಾಗ ಮೋದಿಯವರು ನರಹಂತಕ ಎಂದು ಕರೆದರು. ಒಂದು ಸತ್ಯಧರ್ಮವನ್ನು UPA ಕೂಟ ಮೋದಿಯವರನ್ನು ಎಷ್ಟು ಹೀನಸ್ಥಿತಿಯಲ್ಲಿ ನೋಡಿತ್ತೆಂದರೆ, ಮೋದಿಯವರಿಗೆ ಅಮೆರಿಕಾದ ಗುಜರಾತಿ ಪ್ರಜೆಗಳು ಆಹ್ವಾನ ನೀಡಿದ್ದಕ್ಕೆ, ಆ ಸರಕಾರವು ವೀಸಾ ನೀಡದೆ ಸತಾಯಿಸಿತ್ತು. ಬೇರೆ ರಾಜ್ಯಗಳಿಗೂ ಹೋಗದಂತೆಯೂ ಮಾಡಿತ್ತು. ಉತ್ತರಾಖಂಡ ಪ್ರಳಯದಲ್ಲಿ ನರೇಂದ್ರ ಮೋದಿಯವರನ್ನು ಅಲ್ಲಿಗೆ ಭೇಟಿ ನೀಡದಂತೆ ನಿಷೇಧಿಸಿತ್ತು. ಅಂದರೆ ಆ ಕಳ್ಳ ವಂಶಕ್ಕೆ ಮನದೊಳಗೆ ತಮ್ಮ ಕಳ್ಳತನ ಎಲ್ಲಿ ಬಯಲಾಗುತ್ತೋ ಎಂಬ ಭಯ ಕಾಡುತ್ತಿತ್ತು. ಆ ಕಡೆ ಅಮೆರಿಕಾಕ್ಕೂ ನಿಷೇಧ, ಈ ಕಡೆ ಹೊರ ರಾಜ್ಯ ಪ್ರವಾಸಕ್ಕೂ ನಿಷೇಧ. ಸಾಲದ್ದಕ್ಕೆ ಆ ಕಾಂಗ್ರೆಸ್ಸಿನ ವಿದೇಶಿ ಮಹಿಳೆಯು ಮೋದಿ ಸಾವಿನ ವ್ಯಾಪಾರಿ, ನರಹಂತಕ ಎಂದು ಕರೆದಳು. ಕಾರಣ ಇಷ್ಟೆ. ಎಲ್ಲಾದರೂ ಮೋದಿಯ ಅಮೆರಿಕಾ ಪ್ರವಾಸ, ಹೊರರಾಜ್ಯಗಳ ಪ್ರವಾಸದಿಂದ ತಮ್ಮ ವಂಶದ ದುರ್ನಾತ ಎಲ್ಲಿ ಬಯಲಾಗುತ್ತೋ ಎಂಬ ಭಯ.
ರಾಜೀವ್ ಗಾಂಧಿ ಭಾರತೀಯ(ಹುಟ್ಟಿನ ಚರಿತ್ರೆ ಬದಿಗಿರಲಿ. ಇಲ್ಲಿ ಅದು ಬೇಡ) ರಾಜೀವ್ ಗಾಂಧಿಯನ್ನು ವಿದೇಶದಲ್ಲಿ ಬುಟ್ಟಿಗೆ ಹಾಕಿಕೊಂಡು ಬಿಟ್ಟರು. ಅವರ ಮೂಲ ಉದ್ದೇಶವೇ ಬೇರೆ. ಆವರು ಒಬ್ಬ ಕ್ರಿಶ್ಚಿಯನ್ ಏಜೆಂಟ್. ಅವರಿಗೆ ಇಡೀ ರಾಷ್ಟ್ರವನ್ನೇ ಕ್ರಿಶ್ಚನ್ ರಾಷ್ಟ್ರ ಮಾಡಬೇಕೆಂಬ ಒಂದು ಉದ್ದೇಶ ಇತ್ತು ಎಂದು ಈ ವಿದ್ಯಮಾನಗಳಿಂದ ಜನರಾಡಿಕೊಳ್ಳುವಂತಾಗಿತ್ತು.
ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಸರಾಸಗಟಾಗಿ ಅವರೆಲ್ಲರ ಪೂರ್ವ ಚರಿತ್ರೆ ಬರುತ್ತಿದೆ. ಆದರೆ ಈ ಉದ್ದೇಶಕ್ಕೆ ಹಿಂದೂ ಮುಸ್ಲಿಂ ಕಲಹ ಆಗುವಂತೆ ಪ್ರೇರೇಪಣೆ ನಡೆದುದರಿಂದಲೇ ಮೋದಿಯವರು ಮುಸ್ಲಿಂ ವಿರೋಧಿ ಎಂದು ಪ್ರಚಾರ ಮಾಡಲು, ಮೋದಿಯವರೊಬ್ಬ ಸಾವಿನ ವ್ಯಾಪಾರಿ ಎಂದು ಯಾರೋ ಹೇಳಿಕೊಟ್ಟಂತೆ ಹೇಳಿಕೆ ನೀಡಿದರು. ಮೂಲ ವಿಚಾರ ತಿಳಿದುಕೊಳ್ಳುವ ಪ್ರಬುದ್ಧತೆ ಅವರಲ್ಲಿ ಎಲ್ಲಿದೆ? ಆದರೆ ಅವರ ಹಿಂದೆ ದೊಡ್ಡದಾದ ಒಂದು ಮತಾಂತರ ಮಾಫಿಯ ಇದೆ. ಅದು ಈ ಸೋನಿಯಾ ಗಾಂಧಿಯ ಮೂಲಕ ಪಿಟೀಲು ಬಾರಿಸುತ್ತಿತ್ತು. ಅಮಾಯಕ ಮುಸ್ಲಿಮರು ಪಕ್ಕನೆ ಎಲ್ಲವನ್ನೂ ನಂಬುವವರು. ಈ ಮುಸ್ಲಿಮರ ಹಿಂದೆಯೂ ಒಂದು ಮತಾಂಧ ಮಾಫಿಯಾ ಇದೆ. ಅವರು ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಹೊರಟವರು. ಒಂದೇ ಸಲಕ್ಕೆ ಸಾಧ್ಯವಾಗದು ಎಂದು ಸೋನಿಯಾ ಗಾಂಧಿ ಹಿಂದೆ ಓಡಿದರು. ಇದು ಠಕ್ಕರೊಡನೆ ಠಕ್ಕರು ಎಂಬಂತಾಗಿತ್ತು.
ಈ ದೇಶದಲ್ಲಿ ಒಳಗೊಳಗೆ ಕ್ರಿಶ್ಚನ್ ಮತಾಂತರ ನಡೆಯುತ್ತಲೇ ಇದೆ. ಆಂಧ್ರ ಪ್ರದೇಶದ ರಾಜಶೇಖರ ರೆಡ್ಡಿಯನ್ನು ಮತಾಂತರ ಮಾಡಿಸಿ, ತಿರುಪತಿಯನ್ನು ಭಾರತದ ವ್ಯಾಟಿಕನ್ ಮಾಡಲು ಹೊರಟಿದ್ದರು. ಅಲ್ಲಿ ಚರ್ಚ್ ಮಾಡುವ ಹಂತಕ್ಕೆ ಬಂದಾಗ ಆ ರೆಡ್ಡಿಯವರು ಅವಘಡಕ್ಕೊಳಗಾಗಿ ಅಸು ನೀಗಿದರು. ಇದೇ ನಮಗಿರುವ ದೈವ ಬಲ. ಅಜಿತ್ ಜೋಗಿ ಎಂಬವರನ್ನು ಒಳಗೊಳಗೇ ಮತಾಂತರ ಮಾಡಿಸಿದರು. ಮೇಲ್ನೋಟಕ್ಕೆ ಹಿಂದೂ ನಾಮ ಪಲಕ್. ಆದರೆ ಆ ಹೆಸರಿನ ಕೊನೆಯಲ್ಲಿ ಡಿಸೋಜ, ಡಿಸಿಲ್ವ ಇತ್ಯಾದಿ ನಾಮಕರಣವು ಸದ್ಯ blur ಆಗಿತ್ತು. ಮುಂದೊಂದು ದಿನ ಇವರ ಪೀಳಿಗೆಯು ಪೂರ್ಣ ಕ್ರಿಶ್ಚನ್ ಹೆಸರಲ್ಲೇ ಮೆರೆಯಬೇಕು ಎಂಬುದೇ ಉದ್ದೇಶ. ನಾನಿಲ್ಲಿ ಯಾವ ಮತಗಳನ್ನೂ ಅವಹೇಳನ ಮಾಡಲು ಹೊರಟಿಲ್ಲ. ಅದರ ಬಗ್ಗೆ ಗೌರವವಿದೆ. ಆದರೆ ಭಯೋತ್ಪಾದನೆ, ಅಮಿಷಗಳ ಮೂಲಕ ಮತಾಂತರ ಮಾಡುವುದಕ್ಕೆ ವಿರೋಧವಿದೆ. ಅಲ್ಲದೇ ಭಾರತೀಯ ಸಂಸ್ಕೃತಿಯ ಮುಂದೆ ಬೇರಾವ ಮತಗಳೂ ಇಲ್ಲಿ ಉದ್ದಾರವಾಗದು. ಯಾಕೆಂದರೆ ಇಲ್ಲಿಯ ವಾತಾವರಣವೇ ಸನಾತನ ಸಂಸ್ಕೃತಿ.
ಇಂತಹ ದುರುದ್ದೇಶಗಳಿಗೆ ನರೇಂದ್ರ ಮೋದಿಯವರು ಕಂಟಕವೇ. ಅನೇಕ ಕೊಲೆಯಾಗಲ್ಪಟ್ಟ ದೀನದಯಾಳ ಉಪಾಧ್ಯಾಯಾದಿ ಹಿಂದೂ ನಾಯಕರನ್ನು ನಿರ್ನಾಮ ಮಾಡಿದ್ದೇ ಇದೇ ಉದ್ದೇಶದಲ್ಲಿ. ಈಗ ಇವರ ಸಾಲಿಗೆ ನರೇಂದ್ರ ಮೋದಿಯವರಂತವರು ಬಂದರೆ? ಕೊಲ್ಲಲು ತಾಕತ್ತಿಲ್ಲ. ಆಗ ಅಪಪ್ರಚಾರ ಮಾಡಿ, ಮೋದಿಯವರು ಮೂಡಿಸುವ ಹಿಂದೂ ಜಾಗೃತಿಗೆ ಭಂಗ ತಂದರೆ ಹೇಗೆ? ಅದಕ್ಕಾಗಿ ಸಾವಿನ ವ್ಯಾಪಾರಿ, ನರಹಂತಕ ಇತ್ಯಾದಿ ಹೆಸರನ್ನಿಟ್ಟು ಹೊರ ರಾಜ್ಯಗಳಿಗೆ ಹೋಗದಂತೆ, ಅಮೆರಿಕಾಕ್ಕೆ ಕಾಲಿಡದಂತೆ ನಿಷೇಧ ತಂದರು. ಈ ಕಾಂಗ್ರೆಸಿನ ಎಲ್ಲಾ ಕೆಳ ನಾಯಕರು ಇದಕ್ಕೆ ತಾಳ ಹಾಕಿದರು. ಯಾಕೆಂದರೆ ಗಂಜಿ ನೀಡುವವರು ಈ ಕಾಂಗ್ರೆಸ್ಸಿನ ಮೂಲ ರುವಾರಿ ಈ ನೆಹರೂ ವಂಶಸ್ತರಲ್ವೇ?
ಇಂತಹ ಸಮಯದಲ್ಲಿ ನಾನೊಂದು ಆರ್ಟಿಕಲ್ ಹೊಸದಿಗಂತಕ್ಕೆ ಬರೆದೆ. ಆಗ ಮೋದಿಯವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದರು. ಅಲ್ಲದೆ ಅಟಲ್ ಜೀ ಮೋದಿಯವರನ್ನು ಪ್ರಧಾನಮಂತ್ರಿ ಆಯ್ಕೆ ಕೂಡಾ ಅಂದೇ ಮಾಡಿದ್ದರು. ಆದರೆ ಅಟಲ್ ಜೀಯವರು ಅಸ್ವಸ್ಥರಾಗಿ, ಈ ಜವಾಬ್ದಾರಿಯು ರಾಜನಾಥ್ ಸಿಂಗ್ ಅವರಿಗೆ ಬಂತು.
ನಮೋ ಎನ್ನದೆ ವಿಧಿ ಇಲ್ಲ ಎಂಬ ಆರ್ಟಿಕಲ್ ಬರೆದೆ. ಇದಾದ ಕೆಲ ವಾರದಲ್ಲಿ ನನ್ನ ಬರಹಕ್ಕೆ ಪೂರಕವೋ ಎಂಬಂತೆ ಮೋದಿಯವರು ಆಯ್ಕೆಯೂ ಆಗಿಬಿಟ್ಟರು. ನಂತರ ಪ್ರಧಾನಮಂತ್ರಿಯೂ ಆಗಿಬಿಟ್ಟರು.
ಆ ಕಡೆ ಅಮೆರಿಕಾದಲ್ಲಿ ಮುಂದಿನ ಅಧ್ಯಕ್ಷ ಚುನಾವಣೆಯಲ್ಲಿ ಹಲವು ನಾಯಕರುಗಳು ಸ್ಪರ್ಧೆಗಿಳಿದಿದ್ದರು. ಅಲ್ಲಿಯೂ ಕೆಲ ನಾಯಕರು, ಅಧ್ಯಕ್ಷರುಗಳು compromising ಆಡಳಿತ ಮಾಡಿ ಅಮೆರಿಕಾವನ್ನು ಭಾರತದ ದುಸ್ಥಿತಿಯಂತೆ ಮಾಡುತ್ತಿದ್ದರು. ಆದರೆ ಇದನ್ನು ಸರಿಮಾಡಲು ಡೋನಾಲ್ಡ್ ಟ್ರಂಪ್ ಎಂಬುವರು ಸ್ಪರ್ಧೆಗಿಳಿದರು. ಅದೇನೋ ಒಂದು ದಿನ ನಾನು ನೆಟ್’ನಲ್ಲಿ ಟ್ರಂಪ್ ಫೋಟೋ ನೋಡಿದೆ. ಆಗಿನ್ನೂ ಟ್ರಂಪ್ ರವರು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಆಗಿರಲಿಲ್ಲ. ನನ್ನ ಅಮೆರಿಕಾ ಮಿತ್ರರೊಬ್ಬರೊಡನೆ ಟ್ರಂಪ್ ಪ್ರೊಫೈಲ್ ಬಗ್ಗೆ ವಿಚಾರಿಸಿದೆ. ಅವರೂ ಟ್ರಂಪ್ ಬಗ್ಗೆ ತುಂಬಾ ವಿಚಾರ ಹೇಳಿದ್ದರು. ಅಲ್ಲದೆ ಅವರ ಆಯ್ಕೆಯನ್ನೂ ಬಯಸಿದ್ದರು. ಆದರೆ ಪಕ್ಷದಲ್ಲಿ ಆಯ್ಕೆಯಾಗಬೇಕಲ್ವೇ? ಕಷ್ಟ ಇದೆ ಎಂದರು.
ಕೆಲವು ದಿನಗಳ ಬಳಿಕ ಅವರು ಟ್ರಂಪ್’ರವರ DOB, Time, Place ಎಲ್ಲಾ ಕಳುಹಿಸಿದರು. ಅದನ್ನು ಆಳವಾಗಿ study ಮಾಡಿದೆ. ಒಂದು ಆರ್ಟಿಕಲ್ ಬರೆದೆ. ಆದರೆ ಯಾವ ನ್ಯೂಸ್ ಪೇಪರಿನವರೂ ಇದನ್ನು ತೆಗೆದುಕೊಳ್ಳಲಿಲ್ಲ. ಇದೆಲ್ಲ ಆಗಲ್ಲರೀ. ಆತ ಒಬ್ಬ ರಾಜಕೀಯ ತಜ್ಞನಲ್ಲ. ಅಮೆರಿಕಾದಲ್ಲಿ ಅಧ್ಯಕ್ಷನಾಗಬೇಕಾದರೆ ರಾಜಕೀಯ ಮುತ್ಸದ್ದಿ ಆಗಬೇಕು. ನಿಮ್ಮ ಜ್ಯೋತಿಷ್ಯಾಧಾರಿತ ಲೇಖನ ಸುಳ್ಳಾದೀತು ಎಂದು ಪ್ರಕಟಿಸಲಿಲ್ಲ. ಆಗ ನನಗೂ ಹಠ ಬಂದಿತು. ಒಂದು ಪ್ರಾದೇಶಕ ಪತ್ರಿಕೆ ಮಲೆನಾಡು ಮಿತ್ರದವರನ್ನು ಕೇಳಿದೆ. ಆಗ ಈಗಿನ ಈ Kalpa News Digital Media ಸಂಪಾದಕ ಅನಿರುದ್ಧ ವಸಿಷ್ಠ ಅವರು ಮಲೆನಾಡು ಮಿತ್ರ ಪತ್ರಿಕೆಯಲ್ಲಿ Main Editor ಆಗಿದ್ದರು. ಅವರು, ನಾನು ಪ್ರಕಟಿಸುತ್ತೇನೆ ಎಂದು ಹೇಳಿದರು ಮತ್ತು ಪ್ರಕಟಿಸಿದರು.
ಡೋನಾಲ್ಡ್ ಟ್ರಂಪ್ ಎಂಬ ಹುಚ್ಚು ಆಡಳಿತಗಾರ ಎಂಬ ಶಿರೋನಾಮೆಯಲ್ಲಿ ಪ್ರಕಟವೂ ಆಯ್ತು. ಮೋದಿಯವರ ಬಗ್ಗೆ, ಟ್ರಂಪ್ ಅವರ ಬಗೆಗಿನ ಎರಡೂ ಲೇಖನಗಳಿಗೆ feedbackನಲ್ಲಿ ನನ್ನ ಜ್ಯೋತಿಷ್ಯ ಆಧಾರಿತ ಚಿಂತನೆಗೆ ತುಂಬಾ ಅವಹೇಳನವೂ ಬಂದಿತ್ತು. ಅದೇನೇ ಇರಲಿ. ನನ್ನ ಸಂಶೋಧನೆಗೆ ಇವರಿಬ್ಬರ ಗೆಲುವು ನನ್ನ ಮನದೊಳಗೆ ಮತ್ತಷ್ಟು ಹುರುಪು ನೀಡಿದ್ದಂತೂ ಸತ್ಯ.
ಅಂತಹ ಮಹಾನ್ ವ್ಯಕ್ತಿ ನರೇಂದ್ರ ಮೋದಿಯವರ ಆಹ್ವಾನಕ್ಕೆ, ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ನಾಡಿದ್ದು 24 ನೆಯ ತಾರೀಕಿಗೆ ಭಾರತಕ್ಕೆ ಬರುವುದೆಂದರೆ great ಅಲ್ಲವೇ?
ಈ ಭೇಟಿಯು ಜಗತ್ತಿನ ದುಷ್ಟರ ನಾಶಕ್ಕೆ ನಾಂದಿಯಾಗಲಿ ಎಂಬುದೇ ನನ್ನ ಪ್ರಮುಖ ಪ್ರಾರ್ಥನೆ.
Get in Touch With Us info@kalpa.news Whatsapp: 9481252093
Discussion about this post