ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ವಾಗತಕ್ಕೆ ಭಾರತ ಸಿದ್ದವಾಗಿ ನಿಂತಿದ್ದು, ಎರಡು ದಿನಗಳ ಅವರ ಭೇಟಿಯ ವೇಳೆ ನಿರಂತರ ಕಾರ್ಯಕ್ರಮ, ಸಭೆಗಳು ನಡೆಯಲಿವೆ.
ಟ್ರಂಪ್ ಭೇಟಿ ವೇಳಾಪಟ್ಟಿ ಹೀಗಿದೆ:
- ಫೆ.24ರಂದು ಟ್ರಂಪ್ ಗುಜರಾತ್ ನ ಅಹಮದಾಬಾದ್ ಗೆ ಬೆಳಗ್ಗೆ 11ಗಂಟೆಗೆ ಆಗಮನ
- ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಅವರ ಸ್ವಾಗತ
- ಮೋಟೆರಾ ಸ್ಟೇಡಿಯಂನಿಂದ ಆರಂಭವಾಗುವ ರೋಡ್ ಶೋ ಸಾಬರ್ ಮತಿ ಆಶ್ರಮದ ಬಳಿ ರೋಡ್ ಶೋ ಅಂತ್ಯ
- ಸಾಬರ್ ಮತಿ ಆಶ್ರಮದಲ್ಲಿ 15 ನಿಮಿಷಗಳ ಕಾಲ ವೀಕ್ಷಣೆ
- 12.30ಕ್ಕೆ ಮೋಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಸಾರ್ವಜನಿಕ ಕಾರ್ಯಕ್ರಮ
- ಮಧ್ಯಾಹ್ನ 3.30ಕ್ಕೆ ಅಹಮದಾಬಾದ್’ನಿಂದ ಹೊರಟು ಸಂಜೆ 5ಗಂಟೆಗೆ ಆಗ್ರಾಕ್ಕೆ ಆಗಮನ
- ಸಂಜೆ ನವದೆಹಲಿಗೆ ಆಗಮಿಸಿ ರಾತ್ರಿ ಐಟಿಸಿ ಮೌರ್ಯ ಹೊಟೇಲ್’ನಲ್ಲಿ ವಾಸ್ತವ್ಯ
- ಫೆ.25ರ ಬೆಳಗ್ಗೆ 10ರಿಂದ 10.45ರವರೆಗೆ ರಾಷ್ಟ್ರಪತಿ ಭವನದಲ್ಲಿ ಆತಿಥ್ಯ
- 11 ಗಂಟೆಗೆ ಟ್ರಂಪ್ ದಂಪತಿಗಳಿಂದ ರಾಜ್ ಘಾಟ್’ಗೆ ಭೇಟಿ
- 11.30ಕ್ಕೆ ಹೈದರಾಬಾದ್ ಹೌಸ್’ನಲ್ಲಿ ಮೋದಿ-ಟ್ರಂಪ್ ಜಂಟಿ ಪತ್ರಿಕಾಗೋಷ್ಠಿ
- ಮಧ್ಯಾಹ್ನ 3 ಗಂಟೆಗೆ ಅಮೆರಿಕಾ ರಾಯಭಾರಿ ಕಚೇರಿಯಲ್ಲಿ ಸಿಇಒಗಳೊಂದಿಗೆ ರೌಂಡ್ ಟೇಬಲ್ ಸಭೆ
- ರಾತ್ರಿ ಭಾರತ ಭೇಟಿ ಮುಕ್ತಾಯ
ದೆಹಲಿಯ ಸರ್ಕಾರಿ ಶಾಲೆ ಟ್ರಂಪ್ ಪತ್ನಿ ಭೇಟಿ
ತಮ್ಮ ಪತಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಲಿರುವ ಮೆಲಾನಿಯಾ ಅವರು ದೆಹಲಿ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಅವರು ಸಮಯ ಕಳೆಯಲಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post