ಕಲ್ಪ ಮೀಡಿಯಾ ಹೌಸ್
ತುಮಕೂರು: ದನ ಮೇಯಿಸಲು ಹೋಗಿದ್ದ ಮಹಿಳೆಯನ್ನು ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ದನ ಮೇಯಿಸಲು ಚೋಟ ಸಾಬರ ಪಾಳ್ಯದ ಬಳಿಯಿರುವ ಬೆಟ್ಟಕ್ಕೆ ಮಹಿಳೆಯೊಬ್ಬರು ತೆರಳಿದ್ದಾರೆ. ಸಂಜೆಯಾದರೂ ಆಕೆ ಮನೆಗೆ ಬರದಿದ್ದಾಗ ಪತಿ ಶಿವಕುರ್ಮಾ ಹುಡುಕಿಕೊಂಡು ಹೋಗಿದ್ದಾರೆ. ಬೆಟ್ಟದ ಬಳಿ ಆಕೆಯ ಶವ ಬಿದ್ದಿದೆ ಎನ್ನಲಾಗಿದೆ.
ಮಾಂಗಲ್ಯ ಕಸಿದುಕೊಂಡು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ. ಘಟನೆ ನಡೆದ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಅಡಿಷನಲ್ ಎಸ್ಪಿ ಉದೇಶ್ ನಗರ ಡಿವೈಎಸ್ಪಿ ಎಚ್. ಶ್ರೀನಿವಾಸ್ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post