ಕಲ್ಪ ಮೀಡಿಯಾ ಹೌಸ್
ತುಮಕೂರು: ಪರಿಸರ ದಿನಾಚರಣೆ ಅಂಗವಾಗಿ ಇಂದು ತುಮಕೂರು ನಗರದ ವಿದ್ಯಾನಗರ ಬಡಾವಣೆಯಲ್ಲಿ ವಿದ್ಯಾನಗರ ಕ್ಷೇಮಾಭೀವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಸಿ ನೆಡುವ ಕಾಯಱಕ್ರಮಕ್ಕೆ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಸದಸ್ಯ ಕೆ ಆರ್ ಸದಾಶಿವಯ್ಯ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಕೆ ಆರ್ ಸದಾಶಿವಯ್ಯ, ಪ್ರಸ್ತುತ ಕೊರೊನಾ ಸೋಂಕಿನ ಪಿಡುಗಿನ ಸಂದಭಱದಲ್ಲಿ ಪರಿಸರದಿಂದ ಲಭಿಸುವ ಆಮ್ಲಜನಕವನ್ನು ಪಡೆಯಲು ಪ್ರತಿಯೊಂದು ಪರಿಸರ ಕಾಳಜಿ ತೋರಬೇಕು. ಹೀಗಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು. ಪರಿಸರ ಉಳಿಸಿದ್ರೆ ಜನರು ಆರೋಗ್ಯದಿಂದ ಇರಲು ಸಾಧ್ಯವಿದೆ. ಪರಿಸರ ದಿನಾಚರಣೆ ವೇಳೆ ಮಾತ್ರ ಪರಿಸರ ರಕ್ಷಣೆಯ ಬಗ್ಗೆ ಕಾಳಜಿ ತೋರದೆ ನಿತ್ಯ ಮರಗಿಡಗಳ ಸಂರಕ್ಷಣೆಯತ್ತ ಗಮನಹರಿಸಬೇಕಿದೆ. ಬೇಸಿಗೆಯಲ್ಲಿ ಗಿಡಮರಗಳಿಗೆ ನೀರು ಹಾಕಿ ಪೋಷಣೆ ಮಾಡುವಂತೆ ಸದಾಶಿವಯ್ಯ ಕರೆ ನೀಡಿದರು.
ಆಮ್ಲಜನಕಕ್ಕಾಗಿ ಕೊರೊನಾ 2ನೇ ಅಲೆ ನಡುವೆ ಜನರು ಪರದಾಡಿದ್ದು ನಮ್ಮ ಕಣ್ಣ ಮುಂದೆಯೇ ಇದೆ ಹೀಗಾಗಿ ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಘೋಷವಾಕ್ಯವನ್ನು ಪುನರುಚ್ಚರಿಸಿದ ಸದಾಶಿವಯ್ಯ ಎಲ್ಲರೂ ಇದನ್ನು ಪಾಲನೆ ಮಾಡುವ ಮೂಲ್ಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.
ಇದೇ ವೇಳೆ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಶಿರಾ ತಾಲೂಕಿನ ಸಂಜಯ್ ಅವರನ್ನು ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಸಿ ನೆಡುವ ಕಾಯಱಕ್ರಮದಲ್ಲಿ ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಲತಾ ರವಿ ಕುಮಾರ್ ಹಾಗೂ ಬಡಾವಣೆಯ ನಾಗರೀಕರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post