ಕಲ್ಪ ಮೀಡಿಯಾ ಹೌಸ್ | ತುಮಕೂರು |
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಈ ದರಿದ್ರ ಸರ್ಕಾರದಿಂದ ನಾವೆಲ್ಲಾ ಪೇಪರ್ ಶಾಸಕರಾಗಿz್ದÉÃವೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ BJP MLA Suresh Gowda ವಾಗ್ದಾಳಿ ನಡೆಸಿದರು.
ಬರಿ ಪರಿಸ್ಥಿತಿ ವೀಕ್ಷಣೆ ನಂತರ, ಬೆಳ್ಳಾವಿಯಲ್ಲಿ ನಡೆಯುತ್ತಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಸರ್ಕಾರ ರೈತರಿಗೆ ಮರಣ ಶಾಸನ ಬರೆದಿದೆ. ಟಿಸಿ ಕೊಡುವುದು ಮರೀಚಿಕೆಯಾಗಿದ್ದು, ರೈತರು ಮಾತ್ರವಲ್ಲ ಕೈಗಾರಿಕೆಗಳೂ ಸಹ ಸಂಕಷ್ಟಕ್ಕೆ ಸಿಲುಕಿವೆ ಎಂದರು.
ಬಿಎಸ್ ವೈ BSY ಸರ್ಕಾರ 20 ಸಾವಿರ ಟ್ರಾನ್ಸ್’ಫಾರ್ಮರ್ ಅಳವಡಿಕೆ ಮಾಡಿತ್ತು. ರೈತರಿಂದ ಹಿಡಿದು ಕೈಗಾರಿಕೋದ್ಯಮಿಗಳಿಂದ ಹಿಡಿದು ಯಾರಿಗೂ ಕೂಡ ಕರೆಂಟ್ ಇಲ್ಲ, ಹೇಮಾವತಿ ನೀರಿಲ್ಲ. ಇವತ್ತು ಬೆಂಗಳೂರು ತುಮಕೂರು,ಮಂಡ್ಯ ನೀರಿಲ್ಲದೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದರು.
Also read: ವಿದ್ಯುತ್ ಕಣ್ಣಾಮುಚ್ಚಾಲೆಗೆ ಪರಿಹಾರ ಹುಡುಕದಿದ್ದರೆ ಬೀದಿಗಿಳಿದು ಹೋರಾಟ: ಯಡಿಯೂರಪ್ಪ ಎಚ್ಚರಿಕೆ
ಸೈಕಲ್ ಕೊಟ್ಟಿಲ್ಲ ಅಂತ, ಯೂನಿಫಾರ್ಮ್ ಕೊಟ್ಟಿಲ್ಲ ಅಂತ ಮಕ್ಕಳು ಬಂದಿದ್ದಾರೆ. ಶಾಸಕರ ಅನುದಾನ ಕೂಡ 2 ಕೋಟಿ ರೂ. ಬದಲು 50 ಲಕ್ಷ ಕೊಟ್ಟಿದ್ದಾರೆ. ನಾವು ಯಾವ ಮುಖ ಇಟ್ಕೊಂಡ್ ಕ್ಷೇತ್ರಕ್ಕೆ ಹೋಗೋದು ಎಂದು ಖಾರವಾಗಿ ಪ್ರಶ್ನಿಸಿದರು.
ಮೋದಿ ಕೊಡುವ ಅಕ್ಕಿಯನ್ನು ಸಹ ಕೊಡುತ್ತಿಲ್ಲ. ರಾಜ್ಯ ಸರಕಾರ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ, ಮೋದಿ ಕೊಡುತ್ತಿರುವ ಅಕ್ಕಿ ಕೊಡಿ, 2 ಕೆಜಿ ಕಡಿತ ಯಾಕೆ. ನಾವೆಲ್ಲಾ ಪೇಪರ್ ಮೇಲೆ ಎಂಎಲ್’ಎ ಗಳಾಗಿದ್ದೇವೆ. ಯಾವ ಅನುದಾನವೂ ಬರುತ್ತಿಲ್ಲ. ಯಾವಾಗ ತೊಲಗುತ್ತಾ ಸರ್ಕಾರ ಅಂತ ಕಾಯ್ತಿದ್ದೇವೆ. ಈ ಸರಕಾರ ತೊಲಗಬೇಕು ಎಂದು ಕಿಡಿ ಕಾರಿದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post