ಭದ್ರಾವತಿ: ಉಕ್ಕಿನ ನಗರಿಯಲ್ಲಿ ಕೊರೋನಾ ಪಾಸಿಟಿವ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಿನ್ನೆ ರಾತ್ರಿ ಇಬ್ಬರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎನ್’ಎಂಸಿ ಮೂರನೆಯ ಅಡ್ಡರಸ್ತೆಯನ್ನು ಇಂದು ಸೀಲ್ ಡೌನ್ ಮಾಡಲಾಗಿದೆ.
ಬೆಂಗಳೂರಿನಿಂದ ಆಗಮಿಸಿ ಇಬ್ಬರು ಸಹೋದರರು ಸ್ವಯಂ ಪ್ರೇರಿತರಾಗಿ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದು, ಇಬ್ಬರಲ್ಲೂ ಪಾಸಿಟಿವ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸದ್ಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಸಂಗಮೇಶ್ ಮನೆಯ ಮುಂಭಾಗದ ಮುಖ್ಯರಸ್ತೆ(ಹಳೇ ಸಂತೇ ಮೈದಾನದ ರಸ್ತೆ), ಮೂರನೆಯ ಅಡ್ಡ ರಸ್ತೆ, ಎರಡನೆಯ ಅಡ್ಡ ರಸ್ತೆಯ ಅರ್ಧ ಭಾಗವನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಯಾರೂ ಮನೆಗಳಿಂದ ಹೊರಕ್ಕೆ ಬಾರದಂತೆ ಸೂಚಿಸಲಾಗಿದೆ.
Discussion about this post