ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ/ಮೈಸೂರು |
ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ #Mahakumbhamela ತೆರಳುವ ಪ್ರಯಾಣಿಕರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಮತ್ತೆ ಎರಡು ವಿಶೇಷ ರೈಲುಗಳನ್ನು #SpecialTrain ಓಡಿಸಲು ಇಲಾಖೆ ನಿರ್ಧರಿಸಿದೆ.
ಈ ಕುರಿತಂತೆ ರೈಲ್ವೆ ಮಂಡಳಿ ನಿರ್ಧರಿಸಿ, ಮಾಹಿತಿ ಪ್ರಕಟಿಸಿದ್ದು, ಹುಬ್ಬಳ್ಳಿ #Hubli ಹಾಗೂ ಮೈಸೂರಿನಿಂದ ಒಂದು ಟ್ರಿಪ್’ನಲ್ಲಿ ಎರಡು ವಿಶೇಷ ರೈಲುಗಳನ್ನು ಓಡಿಸಲಿದೆ. ಈ ಬಗೆಗಿನ ಮಾಹಿತಿ ಹೀಗಿದೆ.
Also Read>> ಸಾಗರ | ದೇವಾಲಯದ ದೇವಿ ಕೊರಳಲ್ಲಿದ್ದ ಮಾಂಗಲ್ಯ ಸರ ಕಳ್ಳತನ | ಆರೋಪಿ ಅಂದರ್
ಮೈಸೂರು-ತುಂಡ್ಲಾ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು
ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಮೈಸೂರು #Mysore ಮತ್ತು ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ರೈಲು ಸಂಖ್ಯೆ 06217 ಮೈಸೂರು-ತುಂಡ್ಲಾ #Tundla ವಿಶೇಷ ಎಕ್ಸ್ಪ್ರೆಸ್ ರೈಲು ಫೆ.17 ರಂದು (ಸೋಮವಾರ) ಮೈಸೂರಿನಿಂದ ರಾತ್ರಿ 9:40 ಗಂಟೆಗೆ ಹೊರಟು, ಫೆಬ್ರವರಿ 20, 2025 ರಂದು (ಗುರುವಾರ) ಬೆಳಿಗ್ಗೆ 9:30 ಗಂಟೆಗೆ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣ ತಲುಪಲಿದೆ.
ಪುನಃ ಇದೇ ರೈಲು (06218) ಫೆ. 21 ರಂದು (ಶುಕ್ರವಾರ) ತುಂಡ್ಲಾ ನಿಲ್ದಾಣದಿಂದ ಬೆಳಿಗ್ಗೆ 11:30 ಗಂಟೆಗೆ ಹೊರಟು, ಭಾನುವಾರ (ಫೆ.23, 2025) ರಾತ್ರಿ 10 ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.
Also Read>> ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳು, ಪೊಲೀಸರಿಗೆ ರಕ್ಷಣೆ ಇಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ
ಈ ರೈಲು ಎರಡೂ ಮಾರ್ಗಗಳಲ್ಲಿ ಮಂಡ್ಯ, #Mandya ರಾಮನಗರಂ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, #Davanagere ಹರಿಹರ, ರಾಣಿಬೆನ್ನೂರು, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ,ರಾಯಬಾಗ, ಕುಡಚಿ, ಮೀರಜ್, ಪುಣೆ, ದೌಂಡ್ ಕಾರ್ಡ್ ಲೈನ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ಪಿಪಾರಿಯಾ, ನರಸಿಂಗ್ಪುರ, ಜಬಲ್ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್ಪುರ್, ಪ್ರಯಾಗರಾಜ್, #Prayagraj ಫತೇಪುರ್, ಗೋವಿಂದಪುರಿ, ಇಟಾವಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 3 ಎಸಿ ತ್ರಿ ಟೈರ್, 10 ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್ಎಲ್ಆರ್ / ಡಿ ಬೋಗಿಗಳು ಸೇರಿದಂತೆ 17 ಬೋಗಿಗಳು ಇರಲಿವೆ.
ಈ ರೈಲಿನ ಪ್ರತಿ ನಿಲ್ದಾಣದ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ಭಾರತೀಯ ರೈಲ್ವೆ #IndianRailway ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.
ಮೈಸೂರಿನಿಂದ ಲಕ್ನೋಗೆ ಏಕಮಾರ್ಗ ವಿಶೇಷ ರೈಲು
ಕುಂಭಮೇಳದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮೈಸೂರಿನಿಂದ ಲಕ್ನೋಗೆ ಏಕಮಾರ್ಗ ವಿಶೇಷ ಎಕ್ಸ್ ಪ್ರೆಸ್ ರೈಲು (06221) ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಮೈಸೂರು-ಲಕ್ನೋ ಏಕಮಾರ್ಗ ವಿಶೇಷ ರೈಲು (06221) ಶುಕ್ರವಾರ (ಫೆ.14, 2025) ಬೆಳಿಗ್ಗೆ 7:30 ಗಂಟೆಗೆ ಮೈಸೂರಿನಿಂದ ಹೊರಟು, ಭಾನುವಾರದಂದು ( ಫೆ.16, 2025) ಸಂಜೆ 4:00 ಗಂಟೆಗೆ ಲಕ್ನೋ ನಿಲ್ದಾಣವನ್ನು ತಲುಪಲಿದೆ.ಈ ರೈಲಿನಲ್ಲಿ 1 ಎಸಿ ತ್ರಿ ಟೈರ್, 8 ಸ್ಲೀಪರ್ ಕ್ಲಾಸ್, 10 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಇರಲಿವೆ.
ಈ ರೈಲು ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ, ಕರಾಡ್, ಪುಣೆ, ದೌಂಡ್ ಕಾರ್ಡ್ ಲೈನ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ಕಟ್ನಿ, ಸತ್ನಾ, ಮಾಣಿಕ್ಪುರ್, ಪ್ರಯಾಗರಾಜ್ ಚಿಯೋಕಿ ಮತ್ತು ವಾರಾಣಸಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ರೈಲಿನ ಪ್ರತಿ ನಿಲ್ದಾಣದ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ಭಾರತೀಯ ರೈಲ್ವೆ #IndianRailway ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post