ಕಲ್ಪ ಮೀಡಿಯಾ ಹೌಸ್ | ಉಡುಪಿ/ಚೆನ್ನೈ |
ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಶ್ರೀಹರಿವಂಶಗ್ರಂಥದ ಶುದ್ಧಪಾಠದ ಪುಸ್ತಕ ಚೆನ್ನೈ ನಗರದಲ್ಲಿ ಶ್ರೀ ಪಲಿಮಾರು ಶ್ರೀಗಳಿಂದ Palimaaru Shri ಅನಾವರಣಗೊಂಡಿತು.
ಇದಕ್ಕೆ ಬೇಕಾದ ತಾಳೆಪತ್ರಗಳು ಬಹುದೇಕ ಪಾಲು ನಮ್ಮದೇ ಆದ ಉಡುಪಿಯ ಅಷ್ಟಮಠಗಳಲ್ಲಿಯೇ ಲಭಿಸಿವೆ. ಉಳಿದ ಭಾಗಗಳಿಗಾಗಿ ದೇಶದಾದ್ಯಂತ ಸುಮಾರು 4 ವರ್ಷಗಳು ಶೋಧನೆ ನಡೆದಿದ್ದು ಒರಿಸ್ಸಾ ಮೊದಲಾದ ಕಡೆ ಕೆಲವು ಶುದ್ಧಪಾಠ ಲಭಿಸಿದ್ದು ಆಶ್ಚರ್ಯಕರ ಸಂಗತಿಯೇ ಸರಿ.

Also read: ಆರೋಗ್ಯದ ಬಗ್ಗೆ ಗಮನ ಹರಿಸಿ, ಕುದಿಸಿ ಆರಿಸಿದ ನೀರು ಕುಡಿಯಿರಿ: ಶಾಸಕ ಬೆಲ್ದಾಳೆ ಸಲಹೆ
ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರು ಶ್ರೀಗಳು, ಈ ಗ್ರಂಥವು ಬಹಳ ಅಪೂರ್ವವಾದದ್ದು, ಇದರಲ್ಲಿ ಮಹಾಭಾರತ ಹಾಗೂ ಭಾಗವತದಲ್ಲಿ ಹೇಳದೇ ಇರುವ ಅಪೂರ್ವ ಸಂಗತಿಯನ್ನು ಇಲ್ಲಿ ಹೇಳಲಾಗಿದೆ. ಹಾಗೂ ಹಲವಾರು ಪುರಾಣಗಳಲ್ಲಿರುವ ವಿರೋಧಗಳಿಗೆ ಇದು ನಿರ್ಣಾಯಕವಾಗಿದೆ. ಈ ಗ್ರಂಥ ಬಿಡುಗಡೆಯಾಗಬೇಕಾದರೆ ಉಡುಪಿಯ ಅಷ್ಟಮಠಾಧೀಶರ ಹಾಗೂ ಸುಬ್ರಮಣ್ಯ ಶ್ರೀಗಳ ಸಹಕಾರದಿಂದ ನಡೆದಿದೆ. ಹಾಗೂ ಬೆ.ನಾ. ವಿಜಯಿಂದ್ರಾಚಾರ್ಯರ ಹಗಲಿರುಳು ಪರಿಶ್ರಮ ತುಂಬಾ ಪ್ರಶಂಸನೀಯವಾಗಿದೆ.

ಈ ಪುಸ್ತಕ ಖರೀದಿ ಮಾಡುವವರು ಮುಂಗಡವಾಗಿ ಕಾದಿರಿಸಬೇಕಾಗಿದೆ. ಮುಂದಿನ ಮೂರು, ನಾಲ್ಕು ತಿಂಗಳಿನಲ್ಲಿ ಈ ಪುಸ್ತಕ ಸಿಗಲಿದೆ ಎಂದು ಸಂಸತ್ತಿನ ನಿರ್ದೇಶಕರಾದ ಡಾ. ವಂಶಿ ಕೃಷ್ಣಾಚಾರ್ಯರು ತಿಳಿಸಿದ್ದಾರೆ.
ಪುಸ್ತಕಕ್ಕಾಗಿ ತತ್ವ ಸಂಶೋಧನ ಸಂಸತ್ ನಿರ್ದೇಶಕ ಡಾ. ವಂಶಿಕೃಷ್ಣ ಆಚಾರ್ಯ ಪುರೋಹಿತ್(+91 81234 58634) ಅವರನ್ನು ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post