ಕಲ್ಪ ಮೀಡಿಯಾ ಹೌಸ್ | ಉಡುಪಿ |
ಅದ್ಭುತ ನಟನೆಯ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದ ಹಾಸ್ಯ ನಟ, ಕಾಮಿಡಿ ಕಿಲಾಡಿಗಳು ಸೀಸನ್ -3’ ವಿನ್ನರ್ ರಾಕೇಶ್ ಪೂಜಾರಿ #Rakesh Poojary ಹೃದಯಘಾತರಿಂದ #Heartattack ನಿಧನರಾಗಿದ್ದಾರೆ.
ಕಳೆದ ರಾತ್ರಿ ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ರಾಕೇಶ್ ಪೂಜಾರಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ವೇಳೆ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ರಾಕೇಶ್ ಪೂಜಾರಿ ಸಾವಿಗೆ ಅವರ ಆಪ್ತ ಬಳಗ ಶಾಕ್ ಆಗಿದೆ. ಅವರ ಸಾವಿಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಸಾವಿನ ವಿಚಾರವನ್ನು ನಟ ಹಾಗೂ ಅವರ ಆಪ್ತ ಶಿವರಾಜ್ ಕೆಆರ್ ಪೇಟೆ ಖಚಿತಪಡಿಸಿದ್ದಾರೆ.
ನಟ ರಾಕೇಶ್ ಪೂಜಾರಿ ಕಾಮಿಡಿ ಕಿಲಾಡಿಗಳು ಸೀಸನ್-3, #Comedy Kiladigalu ಭರ್ಜರಿ ಬ್ಯಾಚುಲರ್‍ಸ್-1 #Bharjari Bachulors ರಿಯಾಲಿಟಿ ಶೋ ಗಳು, ಹಿಟ್ಲರ್ ಕಲ್ಯಾಣ #Hitlar Kalyana ಧಾರಾವಾಹಿ ಸೇರಿದಂತೆ ಸಿನಿಮಾಗಳಲ್ಲಿ ಕಾಮಿಡಿ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post