ಕಲ್ಪ ಮೀಡಿಯಾ ಹೌಸ್ | ಉಡುಪಿ |
ಸಂವಿಧಾನ ಬದಲಿಸಬೇಕು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು #Pejawara Shri ಹೇಳಿಕೆ ನೀಡಿದ್ದಾರೆ ಎಂಬ ಕುರಿತಾಗಿ ಸಿಎಂ ನೀಡಿರುವ ಹೇಳಿಕೆಗೆ ಸ್ವತಃ ಸ್ವಾಮಿಗಳೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶ್ರೀಗಳು, ನಾವು ಸಂವಿಧಾನ #Constitution ಬದಲಿಸಬೇಕೆಂದು ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿಗಳು #ChiefMinister ಪರಿಶೀಲಿಸಿ ಮಾತನಾಡಬೇಕಿತ್ತು. ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲಿ ಸಂವಿಧಾನ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ ಎಂದಿದ್ದಾರೆ.
Also read: ಕೊಡಗಿನಲ್ಲಿ ರೆಡ್ ಅಲರ್ಟ್ | ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಜನಗಣತಿ ಹೇಳುವ ಪ್ರಕಾರ ಇದು ಹಿಂದೂಸ್ತಾನ. ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಹೀಗಾಗಿ ಇಲ್ಲಿ ಹಿಂದುಗಳ ಭಾವನೆಗಳಿಗೆ ಬೆಲೆ ಕೊಡುವ ಸರ್ಕಾರ ಬರಬೇಕು ಎಂದಿದ್ದೇನೆ. ಸಂವಿಧಾನ ಶಬ್ಧವನ್ನೇ ಬಳಸಿಲ್ಲ. ಚುನಾಯಿತ ಸರ್ಕಾರಗಳು ಸರ್ವರ ಸರ್ಕಾರವಾಗಬೇಕು. ಅತಿಯಾದ ಮತೀಯ ಓಲೈಕೆ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post