ಕಲ್ಪ ಮೀಡಿಯಾ ಹೌಸ್ | ಉಡುಪಿ |
ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮವನ್ನು ಪ್ರತ್ಯೇಕ ಗ್ರಾಮ ಪಂಚಾಯತ್ ಆಗಿ ಮಂಜೂರು ಮಾಡುವಂತೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮವು ಪ್ರಸ್ತುತ ನಾಡ ಗ್ರಾಮ ಪಂಚಾಯತ್‌ಗೆ ಸೇರಿದ್ದು, ಬೈಂದೂರು ತಾಲೂಕು ರಚನೆಯ ಸಂದರ್ಭದಲ್ಲಿ ನಾಡ ಗ್ರಾಮ ಪಂಚಾಯತ್ ವಿಭಜನೆಗೊಂಡು ನಾಡ, ಬಡಾಕೆರೆ, ಹಡವು ಗ್ರಾಮಗಳು ಬೈಂದೂರು ತಾಲೂಕಿನ ಭಾಗವಾಗಿ ಸೇರಲ್ಪಟ್ಟಿರುತ್ತದೆ, ಸೇನಾಪುರ ಗ್ರಾಮವು ಕುಂದಾಪುರ ತಾಲೂಕಿಗೆ ಸೇರಿರುತ್ತದೆ. ಸುಮಾರು 4000 ಜನಸಂಖ್ಯೆ ಇರುವ ಸೇನಾಪುರಕ್ಕೆ ಪ್ರತ್ಯೇಕ ಪಂಚಾಯತ್ ಆಗುವ ಎಲ್ಲಾ ಅರ್ಹತೆಗಳಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪಂಚಾಯತ್ ಕಟ್ಟಡಕ್ಕೆ ಬೇಕಾಗುವ ಹಾಗೂ ಸಂಪನ್ಮೂಲ ಕ್ರೊಢೀಕರಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳು ಗ್ರಾಮದಲ್ಲಿದೆ. ಒಂದು ವೇಳೆ ಸೇನಾಪುರ ಗ್ರಾಮವನ್ನು ಹೊಸಾಡು ಗ್ರಾಮ ಪಂಚಾಯತ್‌ಗೆ ಸೇರಿಸಿದಲ್ಲಿ ಅಗತ್ಯ ವಸ್ತುಗಳಿಗೆ 10-12 ಕಿ.ಮೀ. ಸಂಚಾರ ಮಾಡಬೇಕಾಗುತ್ತದೆ ಹಾಗೂ ಅನಗತ್ಯ ಆರ್ಥಿಕ ಹೊರೆ ಬೀಳುತ್ತದೆ ಎಂದು ತಿಳಿಸಿದ್ದಾರೆ.
Also read: ಶಿವಮೊಗ್ಗ-ಭದ್ರಾವತಿ ಹೆದ್ದಾರಿಯಲ್ಲಿ ಅಪಘಾತ: ಎರಡು ಲಾರಿಗಳ ನಡುವೆ ಢಿಕ್ಕಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post