ಕಲ್ಪ ಮೀಡಿಯಾ ಹೌಸ್ | ಉಡುಪಿ |
ವಂಡ್ಸೆ ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಹನುಮ ಜಯಂತಿಯ #Hanuma Jayanthi ಪ್ರಯುಕ್ತ ಬೆಳಿಗ್ಗೆ ಶ್ರೀ ಆಂಜನೇಯ ದೇವರಿಗೆ ಬೆಣ್ಣೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಜೆ ರಾಘವೇಂದ್ರ ಭಜನಾ ಮಂಡಳಿ ವಂಡ್ಸೆ, ಶ್ರೀ ತಿರುಮಲ ಲಕ್ಷ್ಮಿ ವೆಂಕಟರಮಣ ಭಜನಾ ಮಂಡಳಿ ವಂಡ್ಸೆ ಮತ್ತು ಶ್ರೀ ಹೇಮಾವತಿ ಮಹಿಳಾ ಭಜನಾ ಮಂಡಳಿ ಹೊಸಂಗಡಿ ತಂಡದಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.
ಆರ್ ಕೆ ಗ್ರಾಫಿಕ್ಸ್ ನ ಮಾಲಕರಾದ ರಕ್ಷಿತ್ ಕುಮಾರ್ ಶೆಟ್ಟಿ ರವರು ವಂಡ್ಸೆ ಭಜನಾ ತಂಡಕ್ಕೆ ಟಿ ಶರ್ಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ಮೊಕ್ತೇಸರರಾದ ವಿ.ಕೆ. ಶಿವರಾಮ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಗಿಳಿಯರು ಶ್ರೀಧರ ಶೆಟ್ಟಿ , ಗ್ರಾಮಾಭಿೃದ್ಧಿ ಸಂಘದ ಅಧ್ಯಕ್ಷರಾದ ಚಂದ್ರಾವತಿ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಉತ್ಸವದ ಭಕ್ತಬಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post