ಕಲ್ಪ ಮೀಡಿಯಾ ಹೌಸ್ | ಉಡುಪಿ |
ಭಾರತೀಯ ಜನತಾ ಪಾರ್ಟಿ ಈಗ ರಾಷ್ಟ್ರೀಯತೆ, ಹಿಂದುತ್ವ ಹಾಗೂ ಸಿದ್ದಾಂತದ ಪಕ್ಷವಾಗಿ ಉಳಿಯದೇ ಜಾತಿ, ಹಣ ಇರುವವರ ಹಾಗೂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹಿಂದೆ ಸುತ್ತುವವರಿಗೆ ಮಣೆ ಹಾಕುವ ಪಕ್ಷವಾಗಿ ಬದಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವ, ರಾಷ್ಟ್ರೀಯತೆಯ ಸಿದ್ದಾಂತಕ್ಕೆ ರಾಜ್ಯ ಬಿಜೆಪಿ ಈಗ ತಿಲಾಂಜಲಿ ಇಟ್ಟಿದೆ. ಈ ಅಂಶಗಳಿಗಾಗಿ ಮಾತನಾಡುವ ಹಾಗೂ ಹೋರಾಡುವವರನ್ನು ದೂರ ಇರಿಸಲಾಗುತ್ತಿದೆ. ಬದಲಾಗಿ, ಅಪ್ಪ-ಮಕ್ಕಳ ಕೈಗೆ ಸಿಲುಕಿರುವ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ #B S Yadiyurappa ಹಾಗೂ ವಿಜಯೇಂದ್ರ #Vijayendra ಅವರ ಹಿಂದೆ ಸುತ್ತುವವರಿಗೆ, ತಮ್ಮ ಜಾತಿಯವರಿಗೆ, ಹಣ ಇರುವವರಿಗೆ ಮಣೆ ಹಾಕುವ ಹಾಗೂ ಟಿಕೇಟ್ ನೀಡುವ ಪಕ್ಷವಾಗಿ ಬದಲಾಗಿದೆ ಎಂದು ನೇರವಾಗಿಯೇ ಹೇಳುತ್ತೇನೆ ಎಂದರು.

Also read: ಪ್ರಧಾನಿ ಮೋದಿ ಮೈಸೂರು ಭೇಟಿ ವೆಚ್ಚ 80 ಲಕ್ಷ ರೂ. | ಇದನ್ನು ಯಾರು ಭರಿಸಲಿದ್ದಾರೆ ಗೊತ್ತಾ?
ರಾಜ್ಯ ಬಿಜೆಪಿ ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿದೆ. ಹಿಂದೆ ಬಹಳಷ್ಟು ನಾಯಕರು ಸೇರಿ ಸಾಮೂಹಿಕ ನೇತೃತ್ವದಲ್ಲಿ ಪಕ್ಷವನ್ನು ಕಟ್ಟಿದ್ದೇವೆ. ಆದರೆ, ಈಗ ಅಧಿಕಾರ ದೊರೆಯುತ್ತಿರುವ ಕಾಲದಲ್ಲಿ ಎಲ್ಲರನ್ನೂ ಮೂಲೆಗುಂಪು ಮಾಡಿ ಯಡಿಯೂರಪ್ಪ, ವಿಜಯೇಂದ್ರ ಹಿಂದೆ ಸುತ್ತುವವರಿಗೆ, ತಮ್ಮ ಜಾತಿಯವರಿಗೆ ಹಾಗೂ ಹಣ ಇರುವವರಿಗೆ ಮಾತ್ರ ಅವರು ಹೇಳಿದಂತೆಯೇ ಟಿಕೇಟ್ ನೀಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ರಘುಪತಿ ಭಟ್ ಅವರನ್ನು ಗೆಲ್ಲಿಸಿ
ಜೀವಮಾನದಾದ್ಯಂತ ಹಿಂದುತ್ವ, ಪಕ್ಷ ನಿಷ್ಠೆ, ಸಂಘದ ಹಿರಿಯರ ಮಾರ್ಗದರ್ಶನದಂತೆಯೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ರಘುಪತಿ ಭಟ್ #Raghupathi Bhat ಅವರು ನಿಶ್ಚಿತವಾಗಿಯೇ ಗೆಲ್ಲುತ್ತಾರೆ. ಮತದಾರರು ರಘುಪತಿ ಭಟ್ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post