ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್ ಟೆಸ್ಟೆಂಗ್ ಏಜೆನ್ಸಿ ನಡೆಸುವ ಅತಿ ಕ್ಲಿಷ್ಟಕರವೆನಿಸಿದ ಪರೀಕ್ಷೆಗಳಲ್ಲಿ ಒಂದಾದ #JEEMains ಜೆಇಇ ಮೈನ್ಸ್(ಸೆಷನ್-1) ರ 2026ರ ಸಾಲಿನ ಅರ್ಹತಾ ಪರೀಕ್ಷೆಯಲ್ಲಿ ಇಲ್ಲಿನ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಈ ಕುರಿತಂತೆ ಅರ್ಹತಾ ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ #CreativePUCollege 102 ವಿದ್ಯಾರ್ಥಿಗಳು ಶೇ.90ಕ್ಕಿಂತಲೂ ಅಧಿಕ ಅಂಕ ಪಡೆದು ವಿಶಿಷ್ಟ ಸಾಧನೆ ಮಾಡಿ, ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ನಮಿತ ಕೃಷ್ಣಮೂರ್ತಿ ಹೆಗಡೆ-ಶೇ.99.4981217, ಎಂ.ಜಿ. ನಾಗದೇವ್-ಶೇ.99.3310617, ಪ್ರಥಮ್ ತಮ್ಮಣ್ಣ ಗೌಡ-ಶೇ.99.1416986 ರಷ್ಟು ಅಂಕ ಪಡೆದು ವಿಶಿಷ್ಠ ಶ್ರೇಣಿಯನ್ನು ಗಳಿಸಿದ್ದಾರೆ.
ಉಳಿದಂತೆ ವಿದ್ಯಾರ್ಥಿಗಳ ಶ್ರೇಣಿಗಳು
- ಆರ್.ಬಿ. ತೇಜಸ್ – ಶೇ.98.9615457
- ನಿನಾದ್ ರಾಜೇಶ್ ನಾಯ್ಕ್ – ಶೇ. 98.9463580
- ಎಚ್.ಎ. ಧನುಷ್ – ಶೇ. 98.5706065
- ಸಂವಿತ್ ಅಮಿತ್ ಗೋಕರ್ಣ – ಶೇ.98.5706065
- ದೃಶ್ಯ್- ಶೇ. 98.4130581
- ಸುಕ್ಷಿತ್ ಗಿರೀಶ್ ಗೌಡ – ಶೇ. 98.3503880
- ಎನ್.ಇ. ತೇಜಸ್ – ಶೇ. 98.3227894
- ಎಚ್.ಡಿ. ತೇಜಸ್ ಹೆಗಡೆ- ಶೇ.98.1925416
- ಅಕ್ಷತಾ ಮೋಹನ್ ಹೆಗಡೆ – ಶೇ.98.1682710
- ಪ್ರಜ್ವಲ್ ಭಟ್ – ಶೇ. 98.0498968
- ಎನ್.ಎಚ್. ವಿಶ್ವೇಶ್ – ಶೇ. 98.0348799
ಶೇ.99ಕ್ಕಿಂತ ಅಧಿಕ 03 ಮಂದಿ ವಿದ್ಯಾರ್ಥಿಗಳು, ಶೇ. 98 ಕ್ಕಿಂತ ಅಧಿಕ 14 ವಿದ್ಯಾರ್ಥಿಗಳು, ಶೇ.95 ಕ್ಕಿಂತ ಅಧಿಕ 45 ವಿದ್ಯಾರ್ಥಿಗಳು, ಶೇ. 90 ಕ್ಕಿಂತ ಅಧಿಕ 102 ವಿದ್ಯಾರ್ಥಿಗಳು ಅಂಕಗಳನ್ನು ಪಡೆದುಕೊಂಡು ಮುಂದಿನ ಹಂತದ ಜೆಇಇ ಅಡ್ವಾನ್ಸ್ #JEEAdvance ಪರೀಕ್ಷೆಗೆ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ.
ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಸಂಸ್ಥೆಯ ಜೆಇಇ ಪರೀಕ್ಷೆಯ ಸಂಯೋಜಕರಾದ ನಂದೀಶ್ ಅಭಿನಂದಿಸಿ ಮುಂದಿನ ಹಂತದ ಪರೀಕ್ಷೆಗೆ ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















