ಕಲ್ಪ ಮೀಡಿಯಾ ಹೌಸ್ | ಉಡುಪಿ |
ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂಗೌಡನಿಗೆ ಖೆಡ್ಡಾ ತೋಡಿದ್ದ ನಕ್ಸಲ್ ನಿಗ್ರಹ ದಳ ಆತನನ್ನು ಬೇಟೆಯಾಡಿದ್ದು ಒಂದು ರಣರೋಚಕ ಕತೆಯಾಗಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆದ ಈ ಕಾರ್ಯಾಚರಣೆ ಅತ್ಯಂತ ರೋಚಕವಾಗಿದ್ದು, ಇದಕ್ಕಾಗಿ ನಕ್ಸಲ್ ನಿಗ್ರಹ ಪಡೆ ಸುಮಾರು ಒಂದೂವರೆ ತಿಂಗಳು ಯೋಜನೆ ರೂಪಿಸಿದ್ದಾರೆ.
ಸುಮಾರು ಒಂದು ತಿಂಗಳ ಹೋಂವರ್ಕ್ ಮಾಡಿ, ಆತನ ಸಂಪೂರ್ಣ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ನಿಗ್ರಹದಳ, ಆತ ಬರುವ ಮೊದಲೇ ಮನೆಯನ್ನು ಹೊಕ್ಕಿ ಕುಳಿತಿತ್ತು.
ವಿಕ್ರಂಗೆ ಎದೆಗೆ ನುಗ್ಗಿತ್ತು ಮೂರು ಗುಂಡುಗಳು
ಸೋಮವಾರ ರಾತ್ರಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪೇಟೆಯಿಂದ ಸುಮಾರು 10 ಕಿಮೀ ದೂರದ ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಗಡಿಯಾಗಿರುವ ಪೀತಬೈಲು ದಟ್ಟ ಕಾಡಂಚಿನಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಹೆಬ್ರಿ ತಾಲೂಕು ಬಚ್ಚಪ್ಪು ಪೀತಬೈಲ್’ನಲ್ಲಿ ನಾರಾಯಣ, ಜಯಂತ, ಸುಧಾಕರ ಎಂಬುವರ ಮನೆಯಿದೆ.
Also read: ಮಡಿಕೇರಿ | ನ.22 | ನಿರುದ್ಯೋಗಿಗಳಿಗೆ ಶುಭಸುದ್ದಿ | ಉದ್ಯೋಗ ಮೇಳ | ಯಾರೆಲ್ಲಾ ಪಾಲ್ಗೊಳ್ಳಬಹುದು?
ನ.11ರಂದು ಬಂದು ರೇಷನ್ ತೆಗೆದಿರಿಸುವಂತೆ ನಕ್ಸಲ್ ಟೀಂ ತಾಕೀತು ಮಾಡಿತ್ತು. ರೇಷನ್ ಪಡೆಯಲು ಸೋಮವಾರ ಬರುವುದಾಗಿ ನಕ್ಸಲ್ ಟೀಂ ತಿಳಿಸಿತ್ತು.
ವಾರದ ಹಿಂದೆಯೂ ಪೀತಬೈಲು ಮಲೆಕುಡಿಯರಿಂದ ಅಕ್ಕಿ, ಬೇಳೆ ಸಂಗ್ರಹಿಸಿತ್ತು ಎಂಬ ಮಾಹಿತಿ ನಕ್ಸಲ್ ನಿಗ್ರಹ ತಂಡಕ್ಕೆ ದೊರೆತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಎಎನ್’ಎಫ್ ಯೋಧರು ಆ ಮನೆಯವರನ್ನು ತೆರವುಗೊಳಿಸಿ ಆ ಪ್ರದೇಶದಲ್ಲಿ ಕಾದು ಕುಳಿತಿದ್ದರು.
ಆ ಗಳಿಗೆ ಬಂದು ನಿಂತಿತ್ತು. ವಿಕ್ರಂಗೌಡ ಮತ್ತು ತಂಡ ಮನೆಯ ಅಂಗಳಕ್ಕೆ ಬರುತ್ತಿದ್ದಂತೆ ಪೊಲೀಸರು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಪೊಲೀಸರನ್ನು ಕಂಡು ವಿಕ್ರಂ ಬಂದೂಕು ತೆಗೆದಿದ್ದು, ಈ ವೇಳೆ ವಿಕ್ರಂ ತಂಡ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ.
ನಕ್ಸಲ್ ನಿಗ್ರಹ ಪಡೆಯಿಂದ ಹಾರಿದ ಮೂರು ಗುಂಡುಗಳು ವಿಕ್ರಂ ಎದೆ ಹೊಕ್ಕಿತ್ತು. ಪರಿಣಾಮವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದರಿಂದ ಗಾಬರಿಗೊಂಡ ತಂಡದ ಸದಸ್ಯರು ಕತ್ತಲಲ್ಲಿ ಕಾಡಿನೊಳಗೆ ಪರಾರಿಯಾಗಿದ್ದಾರೆ. ಮಂಗಳವಾರ ಇಡೀ ರಾತ್ರಿ ಕೂಂಬಿAಗ್ ನಡೆಸಿದರೂ ತಪ್ಪಿಸಿಕೊಂಡ ನಕ್ಸಲರ ಸುಳಿವು ಪತ್ತೆಯಾಗಿಲ್ಲ. ಕೂಂಬಿಂಗ್ ಮುಂದುವರೆದಿದೆ.
ಮೂರು ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆAಡ್ ನಕ್ಸಲ್ ನಾಯಕ ವಿಕ್ರಂ ತಲೆಗೆ ಕರ್ನಾಟಕ ಸರ್ಕಾರ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post