ಕಲ್ಪ ಮೀಡಿಯಾ ಹೌಸ್ | ಉಡುಪಿ |
ಇಲ್ಲಿನ ಚೆರ್ಕಾಡಿ #Cherkady ದೊಡ್ಡಮನೆ ಕುಟುಂಬದ ನಾಗಬನದ ನಾಗಬ್ರಹ್ಮ ದೇವರ ಆರಾಧನೆ ಹಾಗೂ ಅದ್ದೂರಿ ಕಂಬಳ #Kambala ಡಿ.8ರ ನಾಳೆ ನಡೆಯಲಿದೆ.
ಕಂಬುಲವು ಒಂದು ಈ ಊರಿನ ಶ್ರೀಮಂತವಾದ ಆರಾಧನಾ ಪದ್ಧತಿಯಾಗಿದ್ದು, ಆರಂತಡೆ ಗುತ್ತು ಬರ್ಕೆ, ಬೂಡು ಅರಮನೆ ಮುಂತಾದ ಪ್ರತಿಷ್ಠಿತ ಮನೆತನದ ಕುರುಹು ಸಹ ಆಗಿದೆ.
ಜನಪದ ಕ್ರೀಡೆ ಕಂಬಳ #Kambala ಹೌದಾದರೂ ಭಕ್ತಿಯ ಪ್ರತೀಕ ಕಂಬುಲ ಅಷ್ಟೇ ಕಾರಣಿಕವು ಹೌದು. ನಾಗಬ್ರಹ್ಮನ #Nagabrahma ಕಂಬುಲವು ಇಂದು ಜನರ ಬಾಯಿಯಲ್ಲಿ ಕಂಬಳ ಆಗಿದೆ.
ಕಂಬಳ ಕೇವಲ ಕ್ರೀಡೆ ಹಾಗೂ ಸ್ಪರ್ದೆಗೆ ಮಾತ್ರ ಸೀಮಿತವಾಗದೆ. ಅದರಲ್ಲೂ ಹಲವು ವಿಧಗಳನ್ನು ಇಂದು ಕಾಣಬಹುದು.
ದೇವರ ಕಂಬಳ, ದೈವ ಕಂಬಳ, ಧೂಳುಕಂಬಳ, ಕ್ರೀಡಾ ಕಂಬಳ , ಸ್ಫರ್ಧೆಯ ಕ್ರೀಡಾ ಕಂಬಳ ಅನ್ನುವ ಹಲವು ವಿಧಾನದ ಕಂಬಳ ಇದೆ. ಇವುಗಳು ಕ್ರೀಡೆಗೆ ಸೀಮಿತ. ಇಲ್ಲಿ ಆರಾಧನೆಗೆ ಪ್ರಾಮುಖ್ಯತೆ ಇರುವುದಿಲ್ಲ.
ಸಂಪ್ರದಾಯ ಬದ್ದವಾಗಿ ನಡೆಯುವ ಧಾರ್ಮಿಕ ಕಂಬುಲ (ಕಂಬಳ)ದಲ್ಲಿ ದೈವ ದೇವತಾ ಆರಾಧನೆ ಪ್ರಧಾನವಾಗಿರುವುದರಿಂದ ಇಂದಿಗೂ ಸುಸೂತ್ರವಾಗಿ ನಡೆಸುವ ಜವಾಬ್ದಾರಿಯಿಂದ ಸಂಪ್ರದಾಯಬದ್ದವಾಗಿ ದೊಡ್ಡಮನೆ ಕುಟುಂಬಿಕರು, ಊರ ಪರವೂರ ಗಣ್ಯರು ಹಿರಿಯರು, ಸಹಕಾರದಿಂದ ನಡೆಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post