ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೈಂದೂರು: ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು, 3 ಲಕ್ಷ ರೂ. ಬಿಲ್ ಮೊತ್ತವನ್ನು ಸರ್ಕಾರದಿಂದ ಪಡೆದಿದ್ದೇನೆ ಎಂಬು ಆರೋಪಕ್ಕೆ ಸ್ಪಷ್ಟನೆ ನೀಡಿರುವ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ನನ್ನ ಹಕ್ಕಿನ ಸವಲತ್ತನ್ನು ಮಾತ್ರ ಪಡೆದಿದ್ದೇನೆ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಫೆ.11-15ರಂದು ನನ್ನ ಎರಡೂ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. 17ರಂದು ಆ ಬಿಲ್ಲನ್ನು ವಿಧಾನಸಭಾ ಸ್ಪೀಕರ್’ಗೆ ಸಲ್ಲಿಸಿದ್ದೆ. ಆದರೆ, ಕೊರೋನಾ ಬಂದಿದ್ದು ಮಾರ್ಚ್ ತಿಂಗಳಿನಲ್ಲಿ. ಹೀಗಿರುವಾಗ ಫೆಬ್ರವರಿಯಲ್ಲಿ ನಾನು ಕೊರೋನಾ ಚಿಕಿತ್ಸೆಯ ಬಿಲ್ ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು.
ನನಗೆ 18 ವರ್ಷಗಳಿಂದ ಆರೋಗ್ಯ ವಿಮೆ ಇದ್ದರೂ ಯಾವುದೇ ರೀತಿಯ ಕ್ಲೈಮ್ ಮಾಡಿಲ್ಲ. ಅದರ ಅಗತ್ಯವೂ ಸಹ ನನಗಿಲ್ಲ. ಆದರೆ, ಶಾಸಕನಾಗಿ ನನಗಿರುವ ಹಕ್ಕಿನ ಸವಲತ್ತು ವ್ಯಾಪ್ತಿಯಲ್ಲಿ ಮಾತ್ರ ನಾನು ಪಡೆದುಕೊಂಡಿದ್ದೇನೆ. ಈ ಕುರಿತಂತೆ ಯಾವ ದಾಖಲಾತಿಯನ್ನು ಬೇಕಾದರೂ ನಾನು ಸಲ್ಲಿಸಲು ಸಿದ್ಧ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post