ಕಲ್ಪ ಮೀಡಿಯಾ ಹೌಸ್
ಉಡುಪಿ: ಜಿಲ್ಲೆಯ ಸಮುದ್ರ ತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಸೆಪ್ಟೆಂಬರ್ 15ರವರೆಗೂ ಈ ಆದೇಶ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಸಮುದ್ರದ ಅಲೆಗಳ ಅಬ್ಬರ ಇತ್ತೀಚೆಗೆ ಜೋರಾಗಿದ್ದು, ಒಂದು ರೀತಿಯಲ್ಲಿ ಮಲ್ಪೆ ಸಮುದ್ರ ಅಪಾಯದ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಇತ್ತೀಚಿಗಷ್ಟೇ ಮಲ್ಪೆ ಸಮುದ್ರದಲ್ಲಿ 4 ಜನ ಪ್ರವಾಸಿಗರು ಕೊಚ್ಚಿ ಹೋಗಿ, ಮೂವರು ಬದುಕುಳಿದು, ಓರ್ವ ಯುವತಿ ಸಾವನ್ನಪ್ಪಿದ್ದಳು. ಇದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿತ್ತು.
ಸಮುದ್ರಕ್ಕೆ ಇಳಿಯದಂತೆ ಬೇಲಿ ನಿರ್ಮಿಸಿ, ಎಚ್ಚರಿಕೆ ನೀಡಲಾಗಿದ್ದರೂ ಪ್ರವಾಸಿಗರು ಇದನ್ನು ಗಮನಕ್ಕೆ ತೆಗೆದುಕೊಳ್ಳದ ಕಾರಣ ಜಿಲ್ಲಾಡಳಿತವೇ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಮುದ್ರದ ಅಲೆಗಳ ನಡುವೆ ಆಟವಾಡುವ ಜನರನ್ನು ನಿಯಂತ್ರಿಸಲು ಬಲೆಗಳಿಂದ ಬೇಲಿ ಹಾಕಿ ಮುಂದಕ್ಕೆ ಹೋಗದಂತೆ ಎಚ್ಚರಿಕೆ ಬೋರ್ಡ್ ಹಾಕಿದೆ. ಸೂಚನೆ ಹೊರತಾಗಿಯೂ ಸಮುದ್ರಕ್ಕೆ ಇಳಿದರೆ 500 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post