ಕಲ್ಪ ಮೀಡಿಯಾ ಹೌಸ್ | ಉಡುಪಿ/ಶಿವಮೊಗ್ಗ |
ರಾಜ್ಯ ಬಹಳಷ್ಟು ಜಿಲ್ಲೆಗಳನ್ನು ಎಡಬಿಡೆದೆ ಕಾಡಿ ಕೊಂಚ ಬಿಡುವು ನೀಡಿದ್ದ ಮಳೆ ನಿನ್ನೆಯಿಂದ ಮತ್ತೆ ಆರಂಭವಾಗಿದ್ದು, ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಡಿದೆ.
ಎಲ್ಲೆಲ್ಲಿ ಯೆಲ್ಲೋ ಅಲರ್ಟ್ ಘೋಷಣೆ?
ರಾಜ್ಯ ಹವಾಮಾನ ಇಲಾಖೆಗೆ ಮಾಹಿತಿ ಅನ್ವಯ, ಇಂದು ಹಾಗೂ ನಾಳೆ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು
ಆಗಸ್ಟ್ 24ರಂದು ಚಿಕ್ಕಮಗಳೂರು ಹಾಗೂ ಕೊಡಗು.

ಆಗಸ್ಟ್ 26: ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಹಾಗೂ ಚಿಕ್ಕಬಳ್ಳಾಪುರ.
Also read: ಮಣ್ಣಿನ ಗಣೇಶಮೂರ್ತಿಯನ್ನೇ ಪೂಜಿಸಿ: ಶಾಸ್ತ್ರವಿಧಿ ಏನು ಹೇಳಿದೆ?
ಇನ್ನು, ಹವಾಮಾನ ಇಲಾಖೆ ಪ್ರಕಟಿಸಿರುವ ಮಾಹಿತಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆಯೇ ಹೊರತು ಯಾವುದೇ ರೀತಿಯ ವಿಶೇಷ ಅಲರ್ಟ್ ಘೋಷಣೆಯಾಗಿಲ್ಲ.










Discussion about this post