ಕಲ್ಪ ಮೀಡಿಯಾ ಹೌಸ್ | ಉಡುಪಿ |
ಉಡುಪಿ ಜಿಲ್ಲೆ ಆರಂಭಗೊಂಡು 25 ವಸಂತಗಳ ಹಿನ್ನಲೆಯಲ್ಲಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಗಸ್ಟ್ 25 ರಿಂದ ವಿವಿಧ ಹಂತಗಳಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ರಜತ ಮಹೋತ್ಸವ ಕಾರ್ಯಕ್ರಮದ ಅಂದವಾದ ಲಾಂಛನವನ್ನು, ಟ್ಯಾಗ್ಲೈನ್ ನೊಂದಿಗೆ ರಚಿಸಿ, ಜಿಲ್ಲಾಡಳಿತಕ್ಕೆ ನೀಡಲು ಸಾರ್ವಜನಿಕರಿಂದ ಲಾಂಛನ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ.
ಸಾರ್ವಜನಿಕರು ರಚಿಸಿದ ಅತ್ಯುತ್ತಮ ಒಂದು ಲಾಂಛನವನ್ನು ಆಯ್ಕೆ ಮಾಡಿಕೊಳ್ಳಲಾಗುವುದು, ಆಯ್ಕೆಯಾದ ಲಾಂಛನಕ್ಕೆ ರೂ.10000 (ರೂಪಾಯಿ ಹತ್ತು ಸಾವಿರಗಳು) ಗಳ ಬಹುಮಾನ ನೀಡಲಾಗುವುದು. ಲಾಂಛನವನ್ನು ಜಿಲ್ಲಾಧಿಕಾರಿ ಕಛೇರಿಯ ಈಮೇಲ್ ವಿಳಾಸ dcudu-rd-ka@nic.in ಕ್ಕೆ ಆಗಸ್ಟ್ 16 ರೊಳಗೆ ನೀಡಲು ಕೋರಿದೆ.
Also read: ಆ.13ರಂದು 108 ದಂಪತಿಗಳಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post