ಕಲ್ಪ ಮೀಡಿಯಾ ಹೌಸ್ | ಉಡುಪಿ |
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಅವರ ಮಗ ಎಂಜಿನಿಯರಿಂಗ್ ವಿದ್ಯಾರ್ಥಿ ರಿಹಾನ್ ಶೇಖ್, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳಿಂದ ಬಂಧಿತನಾಗಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ MLA Raghupathi Bhat ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ತಾಜುದ್ದೀನ್, ಉಳ್ಳಾಲ ಶಾಸಕ ಯು.ಟಿ. ಖಾದರ್ ಅವರ ಪರಮಾಪ್ತ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೊತೆ ತಾಜುದ್ದೀನ್ ಇರುವ ಫೋಟೋಗಳಿವೆ. ನಿಖರ ಪುರಾವೆಗಳಿರುವುದರಿಂದಲೇ ಎನ್‌ಐಎ ರಿಹಾನ್‌ನನ್ನು ಬಂಧಿಸಿದೆ. ಈಗ ಕಾಂಗ್ರೆಸ್ ತಾಜುದ್ದೀನ್ ಮೇಲೆ ಏನು ಕ್ರಮ ಕೈಗೊಳ್ಳುತ್ತದೆ?. ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಪ್ರಮೋಷನ್ ಕೊಟ್ಟು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುತ್ತದೆಯೋ? ಅಥವಾ ಪಕ್ಷದಿಂದ ಉಚ್ಚಾಟನೆ ಮಾಡುತ್ತದೆಯೋ? ಎಂದು ಪ್ರಶ್ನಿಸಿದ್ದಾರೆ.

Also read: ಕನ್ನಡಿಗರಿಗೆ ಕೈಗಾರಿಗಳ ಉದ್ಯೋಗದಲ್ಲಿ ಶೇ.80ರಷ್ಟು ಪ್ರಾಶಸ್ತ್ಯ: ಸಿಎಂ ಬೊಮ್ಮಾಯಿ
ಹಣಕಾಸು ವ್ಯವಹಾರದ ಬಗ್ಗೆ ಸೂಕ್ತ ತನಿಖೆಯಾಗಲಿ:
ರಿಹಾನ್ ಶೇಖ್, ಮಂಗಳೂರು ಸ್ಫೋಟಕ್ಕೆ ಸಂಬಂಧಿಸಿ ಕೊರಿಯರ್‌ಗಳನ್ನು ತನ್ನ ಹೆಸರಿನಲ್ಲಿ ಬ್ರಹ್ಮಾವರದಲ್ಲಿರುವ ತನ್ನ ಫ್ಲಾಟ್‌ಗೆ ತರಿಸಿಕೊಳ್ಳುತ್ತಿದ್ದ. ಜೊತೆಗೆ, ಆನ್‌ಲೈನ್ ಹಣದ ವ್ಯವಹಾರ ಕೂಡ ನಡೆಸುತ್ತಿದ್ದ. ಚಪ್ಪಲಿ ಅಂಗಡಿ ನಡೆಸುತ್ತಿದ್ದ ಆತನ ತಂದೆ ತಾಜುದ್ದೀನ್, ಈ ಹಿಂದೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ. ಈಗ ಪ್ಲಾಟ್ ಖರೀದಿಸುವಷ್ಟು ಶ್ರೀಮಂತನಾಗಿದ್ದಾನೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.












Discussion about this post