ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಬೊಳ್ಳಿ ಅಭಿಮಾನಿ ಬಳಗದ ಜಂಟಿ ಆಶ್ರಯದಲ್ಲಿ ದಾಯ್ಜಿ ವಲ್ಡರ್ ಚಾನೆಲ್ ಅರ್ಪಿಸುವ ತುಳು ಯಕ್ಷ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ತುಳು ಭವನದ ಸಿರಿ ಚಾವಡಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ದಯಾನಂದ ಜಿ ಕತ್ತಲ್ಸಾರ್ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ನ.22ರಿಂದ 29ರವರೆಗೆ 8 ದಿನ ಮದ್ಯಾಹ್ನ 2 ರಿಂದ ಬೇರೆ ಬೇರೆ ತಂಡಗಳಿಂದ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಲೆಯೊಂದಿಗೆ ಜೀವನ ಸಾಗಿಸಿ, ಕಲಾಮಾತೆಯ ಮಡಿಲು ಸೇರಿದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸುವುದರೊಂದಿಗೆ, ಗಣ್ಯ ಅತಿಥಿಗಳು ಮೇಳದ ಸಂಚಾಲಕರು ಭಾಗವಯಿಸಲಿದ್ದಾರೆ. ಹಿರಿಯ ಕಲಾವಿದರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಎಂದರು.
ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿದ ಯಕ್ಷ ಬೊಳ್ಳಿ ಅಭಿಮಾನಿ ಬಳಗ ಹಾಗೂ ಸದಸ್ಯ ಸಂಚಾಲಕರಾದ ಕಡಬ ದಿನೇಶ್ ರೈಯವರನ್ನು, ಸಹಕಾರ ನೀಡುತ್ತಿರುವ ಅಕಾಡೆಮಿಯ ಗೌರವಾನ್ವಿತ ಸದಸ್ಯರನ್ನು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ನಮ್ಮ ಕುಡ್ಲ ಚಾನಲ್’ನ ಖ್ಯಾತ ನಿರೂಪಕಿ ಡಾ. ಪ್ರಿಯಾಹರೀಶ್, ನಾಟಕ, ಯಕ್ಷಗಾನ ಕಥಾ ರಚನೆಕಾರ, ಮೇಳದ ಮಾಜಿ ಸಂಚಾಲಕ ಜಿ.ಕೆ ಶ್ರೀನಿವಾಸ ಸಾಲ್ಯಾನ್ ಬೊಂದೆಲ್, ಯಕ್ಷಗಾನ ಭಾಗವತರು ದಯಾನಂದ ಕೋಡಿಕಲ್, ಅಕಾಡೆಮಿಯ ಸದಸ್ಯರುಗಳಾದ ನಾಗೇಶ್ ಕುಲಾಲ್ ಕುಳಾಯಿ, ಚೇತಕ್ ಪೂಜಾರಿ ಉಪಸ್ಥಿತರಿದ್ದರು. ಯಕ್ಷಬೊಳ್ಳಿ ಕಡಬ ದಿನೇಶ್ ರೈ ವಂದಿಸಿದರು. ರಂಗಭೂಮಿ, ಯಕ್ಷಗಾನ ಕಲಾವಿದ, ನಿರ್ದೇಶಕ ಕಲಾ ಸವ್ಯಸಾಚಿ, ರಂಗೊದ ಬಿರ್ಸೆ ಸಿ.ಕೆ. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ವರದಿ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















