ಕಲ್ಪ ಮೀಡಿಯಾ ಹೌಸ್ | ಉಡುಪಿ |
ಹಿಜಾಬ್ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷೆ Second PUC Exam ಬರೆಯಲು ಅವಕಾಶ ನೀಡದ ಹಿನ್ನೆಲೆ ಉಡುಪಿಯ ಇಬ್ಬರು ಹಿಜಾಬ್ Hijab ಹೋರಾಟಗಾರ್ತಿಯರು ಪರೀಕ್ಷೆ ಬರೆಯದೆ ವಾಪಸ್ಸಾಗಿದ್ದಾರೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಉಡುಪಿಯಲ್ಲಿ ಆರು ಮಂದಿ ಹಿಜಾಬ್ ಹೋರಾಟಗಾರ್ತಿಯರ ಪೈಕಿ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಬೇಕಿತ್ತು. ಆದರೆ ಇಬ್ಬರೂ ನಿನ್ನೆವರೆಗೂ ಪ್ರವೇಶ ಪತ್ರ ಪಡೆದಿರಲಿಲ್ಲ. ಇಂದು ಪರೀಕ್ಷೆ ಆರಂಭವಾಗುವ ಮುನ್ನ ಕೊನೆ ಕ್ಷಣದಲ್ಲಿ ಪ್ರವೇಶ ಪತ್ರ ಪಡೆದು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುದಾಗಿ ಪಟ್ಟು ಹಿಡಿದ ಕಾರಣ ಪರೀಕ್ಷಾ ಕೇಂದ್ರದಲ್ಲಿ ಅವಕಾಶ ನಿರಾಕರಿಸಲಾಯಿತು. ಕೋರ್ಟ್ ಆದೇಶವಿರುವುದರಿಂದ ಹಿಜಾಬ್ ತೆಗೆದಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಸಿಬ್ಬಂದಿ ಸೂಚಿಸಿದ್ದರಿಂದ ಪರೀಕ್ಷೆಗೆ ಹಾಜರಾಗದೇ ಮನೆಗೆ ಹಿಂತಿರುಗಿದರು.
ಪಟ್ಟು ಸಡಿಲಿಸದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲು: ರಘುಪತಿ ಭಟ್ ಎಚ್ಚರಿಕೆ
ಹೈಕೋರ್ಟ್ ಆದೇಶ ಮೀರಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ನಾಳೆಯೂ ಪಟ್ಟು ಹಿಡಿದರೆ ಅಂತಹ ವಿದ್ಯಾರ್ಥಿನಿಯರ ಮೇಲೆ ಕ್ರಿಮಿನಲ್ ಕೇಸ್ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ ಶಾಸಕರ ರಘುಪತಿ ಭಟ್ MLA Raghupathi Bhat ಎಚ್ಚರಿಕೆ ನೀಡಿದ್ದಾರೆ.
Also read: ಕೊರೋನಾ ನಿಯಮ ಉಲ್ಲಂಘನೆ ಆರೋಪ: ಡಿ.ಕೆ. ಶಿವಕುಮಾರ್ ಗೆ ಕೋರ್ಟ್ ನೋಟಿಸ್ ಜಾರಿ
ಉಡುಪಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆಯವರೆಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಲಾಗಿತ್ತು. ಬೆಳಗ್ಗಿನವರೆಗೂ ಹಾಲ್ ಟಿಕೆಟ್ ಪಡೆಯಲು ಬರಲಿಲ್ಲ. ಇಂದು ಬೆಳಗ್ಗೆ 9.30ಕ್ಕೆ ಕಾಲೇಜಿಗೆ ಬಂದವರಿಗೆ ಹಿಜಾಬ್ ತೆಗೆದಿಟ್ಟು ಹೋದರೆ ಮಾತ್ರ ಹಾಲ್ ಟಿಕೆಟ್ ಕೊಡುವುದಾಗಿ ಪ್ರಾಂಶುಪಾಲರು ಹೇಳಿದ್ದರಿಂದ ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡದುಕೊಂಡು ಹೋಗಿದ್ದಾರೆ. ಆದರೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ಹೋಗಿ ಡ್ರಾಮಾ ಮಾಡಿದ್ದಾರೆ. ಹಿಜಾಬ್ ಹೋರಾಟಗಾರ್ತಿಯರಿಬ್ಬರು ಹೈಡ್ರಾಮಾ ಸೃಷ್ಟಿಸಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಸೂಚಿಸಲಾಗಿದ್ದು, ಯಥಾ ಪ್ರಕಾರ ಮುಂದುವರೆದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post