ಕಲ್ಪ ಮೀಡಿಯಾ ಹೌಸ್
ಉಡುಪಿ: ದ್ವಿಚಕ್ರ ವಾಹನಕ್ಕೆ ನವಿಲು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಎರ್ಮಾಳದಲ್ಲಿ ನಡೆದಿದೆ.
ಬೆಳಪು ಗ್ರಾಮದ ಅಬ್ದುಲ್ಲಾ ಮೃತ ಯುವಕನಾಗಿದ್ದು, ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕಾಪು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದ್ವಿಚಕ್ರ ವಾಹನ ಸವಾರ ಅಬ್ದುಲ್ಲಾ (24) ಬೆಳಪು ಗ್ರಾಮದಿಂದ ಪಡುಬಿದ್ರೆಯ ಕಡೆಗೆ ಹೋಗುತ್ತಿದ್ದಾಗ, ಹೆದ್ದಾರಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನವಿಲೊಂದು ಹಾರಿ ದಾಟಲು ಪ್ರಯತ್ನಿಸಿ, ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಅಬ್ದುಲ್ಲಾ ತಲೆಗೆ ಬಡಿದಿದೆ. ದ್ವಿಚಕ್ರವಾಹನ ಸವಾರನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಾಹನದ ರಭಸಕ್ಕೆ ನವಿಲು ಕೂಡ ಸಾವನ್ನಪ್ಪಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ತಾಲೂಕಿನಲ್ಲಿ ನವಿಲುಗಳ ಹಾವಳಿ ವಿಪರೀತವಾಗಿದ್ದು, ಗದ್ದೆಗಳಿಗೆ ನವಿಲುಗಳು ಬಂದು ಬೆಳೆಗಳನ್ನು ಹಾಳು ಮಾಡುತ್ತಿದೆ. ರಸ್ತೆಗಳಲ್ಲೂ ನವಿಲಿನ ಸಂಚಾರ ಹೆಚ್ಚಾಗಿದೆ. ರಾಷ್ಟ್ರ ಪ್ರಾಣಿ ನವಿಲುಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಹಾಗೂ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಜನಪ್ರತಿನಿಧಿ ಜಹೀರ್ ಬೆಳಪು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post