ಕಲ್ಪ ಮೀಡಿಯಾ ಹೌಸ್ | ಉಡುಪಿ |
ಮುಂಬರುವ ಜನವರಿಯಲ್ಲಿ ನಡೆಯಲಿರುವ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಭೆ ಪುತ್ತಿಗೆ ಮಠದಲ್ಲಿ ನಡೆಯಿತು.
ರಥ ಬೀದಿಯಲ್ಲಿರುವ ಪುತ್ತಿಗೆ ಮಠದಲ್ಲಿ ನಡೆದ ಸಭೆಯಲ್ಲಿ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದ್ದು, ಮಾಜಿ ಶಾಸಕ ರಘುಪತಿ ಭಟ್ ಸಹ ಭಾಗಿಯಾಗಿದ್ದರು.
ಸಭೆಯಲ್ಲಿ ಸ್ವಾಮಿಜಿಯವರು ಪರ್ಯಾಯ ಸ್ವಾಗತ ಸಮಿತಿಯನ್ನು ಘೋಷಿಸಿದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಗಳಾದ ಡಾ. ವೀರೇಂದ್ರ ಹೆಗ್ಗಡೆ, ಅಧ್ಯಕ್ಷರಾಗಿ ಮಾಹೆಯ ಉಪ ಕುಲಪತಿ ಎಚ್.ಎಸ್. ಬಲ್ಲಾಳ್, ಕಾರ್ಯಧ್ಯಕ್ಷರಾಗಿ ಉಡುಪಿಯ ನಿಕಟ ಪೂರ್ವ ಶಾಸಕರಾದ ಕೆ. ರಘುಪತಿ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಅವರನ್ನು ನೇಮಕ ಮಾಡಲಾಯಿತು.
ಮುಂದಿನ ಸಮಿತಿಗಳನ್ನು ಈ ಸಮಿತಿಯ ನೇತೃತ್ವದಲ್ಲಿ ರಚಿಸಲಾಗುವುದು ಎಂದು ತಿಳಿಸಿ ಮುಂದಿನ ಪರ್ಯಾಯವನ್ನು ಯಶಸ್ವಿಗೊಳಿಸಬೇಕಾಗಿ ಭಕ್ತಾಭಿಮಾನಿಗಳಲ್ಲಿ ಶ್ರೀಪಾದರು ಕೋರಿದರು.
Also read: ಐಫೋನ್ ತಯಾರಿಸುವ ಫಾಕ್ಸ್ ಕಾನ್ ಕಂಪನಿಗೆ 300 ಎಕರೆ ಶೀಘ್ರ ಹಸ್ತಾಂತರ: ಸಚಿವ ಪಾಟೀಲ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post