ಕಲ್ಪ ಮೀಡಿಯಾ ಹೌಸ್ | ಉಡುಪಿ |
ಉಡುಪಿಯ ಕಾಲೇಜೊಂದರ ಶೌಚಾಯಲದಲ್ಲಿ ಮುಸ್ಲಿಂ ಯುವತಿಯರು ಹಿಂದೂ ಯುವತಿಯರ ವೀಡಿಯೋ ಮಾಡಿದ್ದ ಪ್ರಕರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ National Commission for Women ಎಂಟ್ರಿ ನೀಡಿದ್ದು, ತನಿಖಾ ತಂಡ ಇಂದು ನಗರಕ್ಕೆ ಭೇಟಿ ನೀಡಲಿದೆ.
We have taken it up. Member @khushsundar is going for an inquiry today. https://t.co/x1VXBdfmc9
— Rekha Sharma (@sharmarekha) July 26, 2023
ಈ ಕುರಿತಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ Rekha Sharma ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಈ ಪ್ರಕರಣವನ್ನು ನಾವು ಪರಿಗಣಿಸಿದ್ದೇವೆ. ಆಯೋಗದ ಸದಸ್ಯೆ ಖುಷ್ಬೂ ಸುಂದರ್ Khushbu Sundar ಅವರ ನೇತೃತ್ವದ ತನಿಖಾ ತಂಡ ಉಡುಪಿಗೆ ಭೇಟಿ ನೀಡಿ, ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದು 9 ದಿನಗಳಾದರೂ ಸಹ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ ಮಾಡಿದೆ. ಅಲ್ಲದೇ, ಇದೊಂದು ತಮಾಷೆಗಾಗಿ ನಡೆದ ಘಟನೆಯಾಗಿದ್ದು, ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಲ್ಲ ಎಂದು ಮುಚ್ಚಿ ಹಾಕುವ ಪ್ರಯತ್ನ ಮಾಡಿದೆ ಎಂದು ಆರೋಪಿಸಲಾಗಿದೆ.











Discussion about this post