ಕಲ್ಪ ಮೀಡಿಯಾ ಹೌಸ್ | ಉಡುಪಿ |
ಹಿಜಾಬ್’ಗಾಗಿ Hijab ನಾವು ಕಾನೂನು ಹೋರಾಟವನ್ನು ತಾವು ಮುಂದುವರೆಸಲಿದ್ದು, ಸರ್ಕಾರದ ಆದೇಶ ನಮಗೆ ಬೇಕಿಲ್ಲ, ನಮ್ಮ ಕುರಾನ್ ಫಾಲೋ ಮಾಡುತ್ತೇವೆ, ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಹಿಜಾಬ್ ಹೋರಾಟಗಾರ್ತಿಯರು ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಹಿಜಾಬ್’ಗಾಗಿ ಹೋರಾಟ ಮಾಡುತ್ತಿರುವ ಆರು ವಿದ್ಯಾರ್ಥಿನಿಯರು, ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆದು ತರಗತಿಗೆ ಹೋಗಲ್ಲ. ನಮಗೆ ನ್ಯಾಯ ದೊರೆಯುವ ಭರವಸೆಯಿತ್ತು. ಆದರೆ, ಅದು ದೊರೆತಿಲ್ಲ. ಹೀಗಾಗಿ, ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ ಎಂದಿದ್ದಾರೆ.
ನಮ್ಮ ದೇಹವನ್ನು ಮುಚ್ಚಿಕೊಳ್ಳಬೇಕು ಎಂದು ಕುರಾನ್’ನಲ್ಲಿ ಉಲ್ಲೇಖವಿದೆ. ಹಿಜಾಬ್ ಕಡ್ಡಾಯವಲ್ಲ ಎಂದು ಇಲ್ಲದಿದ್ದರೆ ನಾವು ಏಕೆ ಹಿಜಾಬ್’ಗಾಗಿ ಹೋರಾಡುತ್ತಿದ್ದೆವು ಎಂದು ಪ್ರಶ್ನಿಸಿದ್ದಾರೆ.
Also read: ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ನಿಂದ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚೆಕ್ ಹಸ್ತಾಂತರ
ಹಿಜಾಬ್ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಕಮ್ಯೂನಲ್ ಮಾಡಲಾಗಿದ್ದು, ರಾಜಕೀಯ ದುರುದ್ದೇಶ ಇದರ ಹಿಂದಿದೆ. ರಾಜ್ಯ ಸರ್ಕಾರ ಕೋರ್ಟ್ ತೀರ್ಪಿನ ಮೇಲೆ ಹಸ್ತಕ್ಷೇಪ ಮಾಡಿದೆ. ರಾಜ್ಯ ಸರ್ಕಾರದಿಂದ ಕೋರ್ಟ್ ಮೇಲೆ ಒತ್ತಡ ಇದೆ. ಒತ್ತಡ ಇದ್ದದ್ದಕ್ಕೆ ಇಂದು ಹಿಜಾಬ್ ವಿರುದ್ಧ ತೀರ್ಪು ಬಂದಿದೆ. ನಾವು ಕಾಂಪ್ರಮೈಸ್ ಮಾಡಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದಿದ್ದಾರೆ.
ಹಿಜಾಬ್’ಗಾಗಿ ಹೋರಾಡುತ್ತಿರುವ ಆರು ವಿದ್ಯಾರ್ಥಿನಿಯರು ಪತ್ರಿಕಾಗೋಷ್ಠಿಯಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post