ಕಲ್ಪ ಮೀಡಿಯಾ ಹೌಸ್ | ಗುರುಗ್ರಾಮ್ |
ಭಾರತದ ಖೋಖೋ ಫೆಡರೇಷನ್ (ಕೆಕೆಎಫ್’ಐ) #KKFI ಮುಂದಿನ ಮೂರನೇ ಸೀ¸ನ್’ನ ಅಲ್ಟಿಮೇಟ್ ಖೋಖೋ (ಯುಕೆಕೆ) #UKK ಆಟಗಾರರ ಹರಾಜಿಗೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಆಟಗಾರರನ್ನು ಸೇರಿಸಲಾಗುವುದು ಎಂದು ಘೋಷಿಸಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಕೆಕೆಎಫ್’ಐ ಅಧ್ಯಕ್ಷ ಸುಧಾಂಶು ಮಿತ್ತಲ್ ಮಾಹಿತಿ ಪ್ರಕಟಿಸಿದರು.
ಖೋಖೋ ಭಾರತದ ಕ್ರೀಡಾ ನಾವೀನ್ಯತೆ ಮತ್ತು ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ. ಅಲ್ಟಿಮೇಟ್ ಖೋಖೋ ಸೀಸನ್ 3 2025ರ ನವೆಂಬರ್ 29ರಿಂದ ಪ್ರಾರಂಭವಾಗಲಿದೆ. ಮೊದಲ ಬಾರಿಗೆ ಲೀಗ್’ಗೆ ಅಂತಾರಾಷ್ಟ್ರೀಯ ಆಟಗಾರರನ್ನು ಸೇರಿಸುವ ಮೂಲಕ ನಾವು ಇನ್ನೊಂದು ದೊಡ್ಡ ಹೆಜ್ಜೆ ಇಡುತ್ತಿದ್ದೇವೆ ಎಂದರು.

2022ರಲ್ಲಿ ಆರಂಭವಾದ ಯುಕೆಕೆ ಈಗಾಗಲೇ ಪ್ರಖ್ಯಾತಿಯನ್ನು ಗಳಿಸಿದ್ದು, ಪ್ರೋ ಕಬಡ್ಡಿ ಲೀಗ್ ಮತ್ತು ಇಂಡಿಯನ್ಸ್ ಸೂಪರ್ ಲೀಗ್ ನಂತರ ದೇಶದ ಮೂರನೇ ಅತ್ಯಧಿಕ ವೀಕ್ಷಿತ ಕ್ರೀಡಾಲೀಗ್ ಆಗಿದೆ.
ಹರಿಯಾಣ ಸರ್ಕಾರದ ರಾಜ್ಯ ಸಚಿವ ಗೌರವ್ ಗೌತಮ್ ಮಾತನಾಡಿ, ಕೆಕೆಎಫ್’ಐಯು ಖೋಖೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಮತ್ತು ಹರಿಯಾಣದಲ್ಲಿ ಕ್ರೀಡಾ ಅಭಿವೃದ್ಧಿಯ ಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳನ್ನು ಪ್ರಶಂಸಿಸಿದರು.     
ಇದೇ ಸಂದರ್ಭದಲ್ಲಿ ಕೆಕೆಎಫ್’ಐ ಮತ್ತು ಎಸ್’ಜಿಟಿ ವಿಶ್ವವಿದ್ಯಾಲಯವು ದೇಶೀಯ ಕ್ರೀಡೆಗಳಿಗಾಗಿ ಶಿಕ್ಷಣ ಮತ್ತು ವೈಜ್ಞಾನಿಕ ಸಂಪತ್ತು ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುವ ಉದ್ದೇಶದಿಂದ ಒಪ್ಪಂದ ಪತ್ರವೊಂದಕ್ಕೆ ಸಹಿ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	





 Loading ...
 Loading ... 
							



 
                
Discussion about this post