ನವದೆಹಲಿ: ಡ್ಯಾನ್ಸಿಂಗ್ ಸ್ಕಿಲ್‌ನಲ್ಲಿ ಸ್ಟಾರ್ ಗೋವಿಂದ ಅವರನ್ನು ಮೀರಿಸಿ ರಾತ್ರೋ ರಾತ್ರಿ ಧೂಳೆಬ್ಬಿಸಿ ಸ್ಟಾರ್ ಆದ ಡ್ಯಾನ್ಸ್ ಅಂಕಲ್ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ ಅವರನ್ನು ಈಗ ಮಧ್ಯಪ್ರದೇಶದ ವಿಧಿಶಾ ಮುನಿಸಿಪಲ್ ಕಾರ್ಪೊರೇಶನ್ ಅಂಬಾಸಡರ್ ಆಗಿ ನೇಮಿಸಲಾಗಿದೆ.
46 ವರ್ಷದ ಸಂಜೀವ್ ಅವರು ಎಲೆಕ್ಟ್ರಾನಿಕ್ ಪ್ರೊಫೆಸರ್ ಆಗಿದ್ದು, ನಟ ಗೋವಿಂದ ಅವರ ಹಾರ್ಡ್ ಕೋರ್ ಫ್ಯಾನ್ ಆಗಿದ್ದಾರೆ. ಇತ್ತೀಚೆಗೆ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಈ ಪ್ರೊಫೆಸರ್ ಮಾಡಿದ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ದೇಶ ವಿದೇಶಗಳಲ್ಲಿ ಇವರು ಸುದ್ದಿಯಾಗಿದ್ದಾರೆ.
Best wedding performance selected by UNESCO pic.twitter.com/XPmLbmRKld
— Gautam Trivedi (@KaptanHindustan) May 30, 2018
ಈ ಕುರಿತಂತೆ ಎಎನ್‌ಐ ಜೊತೆಯಲ್ಲಿ ಮಾತನಾಡಿರುವ ಸಂಜೀವ್ ಅವರು, ನನ್ನ ಡ್ಯಾನ್ಸ್ ವೀಡಿಯೋ ಇಷ್ಟು ಜನಪ್ರಿಯವಾಗಿ ವೈರಲ್ ಆಗುತ್ತದೆ ಎಂದು ನಾನು ನಿರೀಕ್ಷಿಸಿರಲೂ ಇಲ್ಲ ಹಾಗೂ ನಂಬಲು ಸಾಧ್ಯವಾಗುತ್ತಲೂ ಇಲ್ಲ. ನನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ.
ಇನ್ನು ಈ ಕುರಿತಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದು, ಸಂಜೀವ್ ಅವರ ಡ್ಯಾನ್ಸ್ ಪ್ರತಿಭೆಗೆ ಪ್ರಶಂಸನೀಯವಾದುದು. ಇವರು ತಮ್ಮ ಡ್ಯಾನ್‌ಸ್ ಮೂಲಕ ಇಂಟರ್‌ನೆಟ್ ಮೂಲಕ ದೇಶದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಇವರು ಅಭಿನಂದನೀಯ ಎಂದಿದ್ದಾರೆ.
Discussion about this post