ಕಲ್ಪ ಮೀಡಿಯಾ ಹೌಸ್
ವಾಷಿಂಗ್ಟನ್: ಮಹಿಳೆಯೊಬ್ಬರಿಗೆ ಸಿಸೇರಿಯನ್ ಮಾಡುವ ವೇಳೆ ಹೊಟ್ಟೆಯೊಳಗಿದ್ದ ಶಿಶುವಿನ ಕೆನ್ನೆಯನ್ನೂ ಸಹ ವೈದ್ಯರು ಕಟ್ ಮಾಡಿದ್ದು, 13 ಹೊಲಿಗೆಗಳನ್ನು ಹಾಕಲಾಗಿದೆ.
ಅಮೆರಿಕಾದ ಡೆನ್ವರ್ ಸಿಟಿಯಲ್ಲಿ ಘಟನೆ ನಡೆದಿದ್ದು, ವೈದ್ಯರು ಸಿಸೇರಿಯನ್ ಮಾಡುವ ವೇಳೆ ಹೊಟ್ಟೆಯನ್ನು ಕತ್ತರಿಸುವ ಭಾಗದಲ್ಲೇ ಶಿಶುವಿನ ಮುಖವೂ ಸಹ ಇದ್ದ ಕಾರಣ ಕೆನ್ನೆಯೂ ಸಹ ಕಟ್ ಆಗಿದೆ. ಗಾಯವಾದ ಜಾಗಕ್ಕೆ 13 ಹೊಲಿಗೆ ಹಾಕಲಾಗಿದೆ ಎಂದು ವರದಿಯಾಗಿದೆ.
ಈ ಘಟನೆ ಕುರಿತಂತೆ ವೈದ್ಯರೂ ಸಹ ಬೇಸರ ವ್ಯಕ್ತಪಡಿಸಿದ್ದು, ಪ್ಲಾಸ್ಟಿಕ್ ಸರ್ಜರಿ ಮೂಲಕ ಶಿಶುವಿನ ಕೆನ್ನೆ ಸರಿಪಡಿಸುವುದಾಗಿ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post