ಕಲ್ಪ ಮೀಡಿಯಾ ಹೌಸ್ | ಅರಸೀಕೆರೆ/ಮೈಸೂರು |
ಅರಸೀಕೆರೆ #Arsikere ರೈಲು ನಿಲ್ದಾಣದ ಯಾರ್ಡ್’ನಲ್ಲಿ ನಡೆಯಲಿರುವ ಪ್ಲಾಟ್’ಫಾರಂ ಶೆಲ್ಟರ್ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಮಾರ್ಗದ ಕೆಲವು ರೈಲುಗಳ ಸಂಚಾರವನ್ನು ಭಾಗಷಃ ರದ್ದುಗೊಳಿಸಲಾಗುತ್ತಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ನೀಡಿದ್ದು, ಕಾಮಗಾರಿಯ ಹಿನ್ನೆಲೆಯಲ್ಲಿ ಈ ಮಾರ್ಗದ ಮೂರು ರೈಲುಗಳ ಸಂಚಾರ ಭಾಗಷಃ ರದ್ದುಗೊಳ್ಳಲಿದೆ ಎಂದು ತಿಳಿಸಿದೆ.

2. ಇನ್ನು, ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ ಸಂಚರಿಸುವ 16213 ಸಂಖ್ಯೆಯ ಅರಸೀಕೆರೆ – ಎಸ್’ಎಸ್’ಎಸ್ ಹುಬ್ಬಳ್ಳಿ ಎಕ್ಸ್’ಪ್ರೆಸ್ ಸೇವೆಯು ಅರಸೀಕೆರೆ ಮತ್ತು ಬೀರೂರು ನಡುವೆ ರದ್ದಾಗಲಿದೆ. ಈ ರೈಲು ಅರಸೀಕೆರೆಗೆ ಬದಲು ಬೀರೂರು ನಿಲ್ದಾಣದಿಂದಲೇ ತನ್ನ ನಿಗದಿತ ಸಮಯದಲ್ಲಿ ಹೊರಡಲಿವೆ.
3. ಹಾಗೆಯೇ, 56267 ಸಂಖ್ಯೆಯ ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು ಕೂಡ ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ ಅರಸೀಕೆರೆ ಮತ್ತು ಹಾಸನ ನಡುವೆ ರದ್ದಾಗಲಿದೆ. ಹಾಗೆಯೇ, ಈ ಪ್ಯಾಸೆಂಜರ್ ರೈಲು ಅರಸೀಕೆರೆ ಬದಲಾಗಿ ಹಾಸನದಿಂದಲೇ ತನ್ನ ಸಂಚಾರವನ್ನು ಆರಂಭಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post